ಕರ್ನಾಟಕ

karnataka

ಮಗಳು ಹುಟ್ಟಿದ್ದೇ ನನ್ನ ಪಾಲಿನ ಅದೃಷ್ಠ, ಭಾರತ ತಂಡಕ್ಕೆ ಆಯ್ಕೆಯಾದೆ: ನಟರಾಜನ್ ಸಂತಸ

By

Published : Nov 12, 2020, 7:27 PM IST

ಐಪಿಎಲ್​ನಲ್ಲಿ ಕರಾರುವಾಕ್ ಯಾರ್ಕರ್​ಗಳಿಂದ ಘಟಾನುಘಟಿ ಬ್ಯಾಟ್ಸ್​ಮನ್​ಗಳನ್ನೇ ತಬ್ಬಿಬ್ಬು ಮಾಡಿದ್ದ ನಟರಾಜನ್ ಟೂರ್ನಿಯಲ್ಲಿ 16 ಪಂದ್ಯಗಳಿಂದ 16 ವಿಕೆಟ್​ ಪಡೆದಿದ್ದಾರೆ. ಅವರು ಟೂರ್ನಿಯಲ್ಲಿ 160 ಯಾರ್ಕರ್​ಗಳನ್ನು ಮಾಡುವ ಮೂಲಕ ಕ್ರಿಕೆಟ್ ಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ. ಇದೇ ಪ್ರದರ್ಶನ ಅವರನ್ನು ಭಾರತ ತಂಡದ ಪರ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳವಂತೆ ಮಾಡಿದೆ.

ಟಿ. ನಟರಾಜನ್
ಟಿ. ನಟರಾಜನ್

ಸಿಡ್ನಿ: 13ನೇ ಐಪಿಎಲ್​ನಲ್ಲಿ ಯಾರ್ಕರ್​ ಕಿಂಗ್​ ಎಂದೇ ಹೆಸರಾಗಿರುವ ಸನ್​ರೈಸರ್ಸ್ ತಂಡದ ವೇಗದ ಬೌಲರ್​ ಟಿ ನಟರಾಜನ್​ ಭಾರತ ತಂಡದ ಟಿ20 ತಂಡಕ್ಕೆ ಆಯ್ಕೆಯಾಗಿದ್ದಾರೆ.

ಐಪಿಎಲ್​ನಲ್ಲಿ ಕರಾರುವಾಕ್ ಯಾರ್ಕರ್​ಗಳಿಂದ ಘಟಾನುಘಟಿ ಬ್ಯಾಟ್ಸ್​ಮನ್​ಗಳನ್ನೇ ತಬ್ಬಿಬ್ಬು ಮಾಡಿದ್ದ ನಟರಾಜನ್ ಟೂರ್ನಿಯಲ್ಲಿ 16 ಪಂದ್ಯಗಳಿಂದ 16 ವಿಕೆಟ್​ ಪಡೆದಿದ್ದಾರೆ. ಅವರು ಟೂರ್ನಿಯಲ್ಲಿ 160 ಯಾರ್ಕರ್​ಗಳನ್ನು ಮಾಡುವ ಮೂಲಕ ಕ್ರಿಕೆಟ್ ಪಂಡಿತರ ಹುಬ್ಬೇರುವಂತೆ ಮಾಡಿದ್ದಾರೆ. ಇದೇ ಪ್ರದರ್ಶನ ಅವರನ್ನು ಭಾರತ ತಂಡದ ಪರ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳವಂತೆ ಮಾಡಿದೆ.

ಟಿ20 ತಂಡಕ್ಕೆ ಆಯ್ಕೆಯಾಗಿದ್ದ ಕೆಕೆಆರ್ ತಂಡದ ವರುಣ್ ಚಕ್ರವರ್ತಿ ಭುಜದ ನೋವಿಗೆ ತುತ್ತಾಗಿದ್ದರಿಂದ ಭಾರತ ತಂಡದಿಂದ ಹೊರಬಿದ್ದಿದ್ದರು. ಇವರ ಸ್ಥಾನಕ್ಕೆ ಬಿಸಿಸಿಐ ಬದಲಿ ಆಟಗಾರನನ್ನಾಗಿ ನಟರಾಜನ್​ರನ್ನು 3 ಪಂದ್ಯಗಳ ಟಿ20 ಸರಣಿಗೆ ಆಯ್ಕೆ ಮಾಡಿದೆ.

ಈ ಕುರಿತು ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನವೊಂದರಲ್ಲಿ ತಮ್ಮ ಮಗಳ ಜನನ ತಮಗೆ ಈ ಅದೃಷ್ಟ ಒದಗಿಸಿಕೊಟ್ಟಿದೆ ಎಂದಿದ್ದಾರೆ." ನಾನು ಇಲ್ಲಿಯವರೆಗೂ ನನ್ನ ಮಗಳ ಫೋಟೋ ನೋಡಿಲ್ಲ. ಒಮ್ಮೆ ಮಾತ್ರ ವಿಡಿಯೋ ಕರೆ ಮಾಡಿದ್ದೆ. ಆದರೆ ನನ್ನ ಮಗಳ ಜನನ ನನ್ನನ್ನು ಅದೃಷ್ಟವಂತ ಎಂದು ಸಾಬೀತು ಮಾಡಿದೆ. ನಾನು ಭಾರತ ತಂಡಕ್ಕೆ ಆಯ್ಕೆಯಾಗಿದ್ದೇನೆ. ನನ್ನ ಪತ್ನಿ ಇನ್ನು ಆಸ್ಪತ್ರೆಯಲ್ಲಿದ್ದಾರೆ. ಅವರು ಇನ್ನು ಒಂದೆರಡು ದಿನಗಳಲ್ಲಿ ಮನೆಗೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details