ಕರ್ನಾಟಕ

karnataka

'ಅರ್ಜುನ ಪ್ರಶಸ್ತಿ' ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ: ಇಶಾಂತ್​ ಶರ್ಮಾ

By

Published : Aug 29, 2020, 4:49 PM IST

ಆಗಸ್ಟ್​ 29 ಕ್ರೀಡಾ ದಿನವಾದ ಇಂದು ಸಂಪ್ರದಾಯದಂತೆ ವಾರ್ಷಿಕ ಕ್ರೀಡಾ ಪ್ರಶಸ್ತಿಯನ್ನು ವರ್ಚುವಲ್​ ಕಾರ್ಯಕ್ರಮದಲ್ಲಿ ಎಲ್ಲಾ 74 ಕ್ರೀಡಾಪಟುಗಳಿಗೆ ಪ್ರದಾನ ಮಾಡಲಾಗಿದೆ.

ಅರ್ಜುನ ಪ್ರಶಸ್ತಿ
ಇಶಾಂತ್​ ಶರ್ಮಾ

ಮುಂಬೈ:2020ರ 'ಅರ್ಜುನ ಪ್ರಶಸ್ತಿ'ಯನ್ನು ಸ್ವೀಕರಿಸುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಕ್ರಿಕೆಟಿಗ ಇಶಾಂತ್ ಶರ್ಮಾ ಹೇಳಿದ್ದಾರೆ.

ಟ್ವೀಟ್ ಮೂಲಕ ಸಂತೋಷ ವ್ಯಕ್ತಪಡಿಸಿರುವ ಶರ್ಮಾ, ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದು ಗೌರವವೆನಿಸುತ್ತಿದೆ. ಈ ಸಂದರ್ಭದಲ್ಲಿ ಪ್ರಶಸ್ತಿಗೆ ಭಾಜನರಾಗಿರುವ ಎಲ್ಲಾ ಕ್ರೀಡಾಪಟುಗಳಿಗೂ ಅಭಿನಂದನೆಗಳು. ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

ತಮ್ಮ ಕ್ರಿಕೆಟ್​ ಜರ್ನಿಯ ಬಗ್ಗೆ ತಿಳಿಸುತ್ತಾ, ನನಗೆ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟ್​ ಬಗ್ಗೆ ಒಲವಿತ್ತು. ಅಲ್ಲಿಂದ ಪ್ರತಿದಿನವೂ ಶೇ 100ರಷ್ಟು ಶ್ರಮ ಹಾಕುತ್ತಿದ್ದೇನೆ. ಪ್ರತಿಯೊಂದು ಹಂತದಲ್ಲೂ ಭಾರತವನ್ನು ಎತ್ತರಕ್ಕೆ ಕೊಂಡೊಯ್ಯಲು ನನ್ನ ಆಟವನ್ನು ಹೆಚ್ಚು ಉತ್ತಮಗೊಳಿಸುತ್ತಿದ್ದೇನೆ. ನನ್ನ ದೇಹವೂ ಕೂಡ ಅದನ್ನು ಸಾಧಿಸಲು ನೆರವಾಗುತ್ತಿದೆ ಎಂದಿದ್ದಾರೆ.

ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದ ಕ್ರೀಡಾ ಸಚಿವಾಲಯ ಹಾಗೂ ತಮಗೆ ಬೆಂಬಲವಾಗಿ ನಿಂತಿರುವ ಬಿಸಿಸಿಐಗೆ ಇಶಾಂತ್​ ಧನ್ಯವಾದ ಅರ್ಪಿಸಿದ್ದಾರೆ.

ABOUT THE AUTHOR

...view details