ಕರ್ನಾಟಕ

karnataka

ಏಷ್ಯಾ ಕಪ್​: ಪಾಕ್​ಗೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್​ ಬಿನ್ನಿ

By

Published : Oct 20, 2022, 6:28 PM IST

ಭಾರತ ಕ್ರಿಕೆಟ್ ತಂಡದ ಪ್ರಯಾಣದ ಬಗ್ಗೆ ನಾವು ಮಾತ್ರ (ಬಿಸಿಸಿಐ) ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲಿಗೆ ತಂಡ ಪ್ರಯಾಣಿಸಬೇಕೆಂದೂ ನಾವು ಹೇಳಲು ಆಗುವುದಿಲ್ಲ. ಇದಕ್ಕೆ ನಾವು ಕೇಂದ್ರ ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ರೋಜರ್​ ಬಿನ್ನಿ ತಿಳಿಸಿದ್ದಾರೆ.

BCCI President Roger Binny on team Indias travel to Pakistan for Asia Cup
ಕೇಂದ್ರ ಸರ್ಕಾರದ ಅನುಮತಿ ಬೇಕು: ಪಾಕ್​ಗೆ ಟೀಂ ಇಂಡಿಯಾ ಪ್ರಯಾಣ ಬಗ್ಗೆ ರೋಜರ್​ ಬಿನ್ನಿ ಸ್ಪಷ್ಟನೆ

ಬೆಂಗಳೂರು:ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಗೆ ಭಾರತ ತಂಡ ಪ್ರಯಾಣಿಸುವ ಕುರಿತ ವಿವಾದದ ಬಗ್ಗೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​ ಬಿನ್ನಿ ಪ್ರತಿಕ್ರಿಯಿಸಿದ್ದು, ನಾವೇ ನಿರ್ಧಾರ ತೆಗೆದುಕೊಳ್ಳಲು ಬರುವುದಿಲ್ಲ. ಕೇಂದ್ರ ಸರ್ಕಾರದ ನಿರ್ಧರಿಸಬೇಕಾಗುತ್ತದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ತಂಡದ ಪ್ರಯಾಣಿಸುವ ಬಗ್ಗೆ ನಾವು ಮಾತ್ರ (ಬಿಸಿಸಿಐ) ನಿರ್ಧರಿಸಲು ಸಾಧ್ಯವಿಲ್ಲ. ಎಲ್ಲಿಗೆ ತಂಡ ಪ್ರಯಾಣಿಸಬೇಕೆಂದೂ ನಾವು ಹೇಳಲಾಗದು. ಇದಕ್ಕೆ ನಾವು ಸರ್ಕಾರದಿಂದ ಅನುಮತಿ ಪಡೆಯಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ನಾವು ಬೇರೆ ರಾಷ್ಟ್ರಕ್ಕೆ ತೆರಳಬೇಕಾದರೂ ಹಾಗೂ ಬೇರೆ ರಾಷ್ಟ್ರಗಳು ಇಲ್ಲಿಗೆ ಬರಬೇಕಾದರೂ ಸರ್ಕಾರದ ಅನುಮತಿ ಅಗತ್ಯ. ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಗೆ ಟೀಂ ಇಂಡಿಯಾದ ಪ್ರಯಾಣದ ಬಗ್ಗೆ ಸರ್ಕಾರದ ಪ್ರತಿಕ್ರಿಯೆ ಅವಶ್ಯವಾಗಿದೆ ಎಂದು ಬಿನ್ನಿ ಒತ್ತಿ ಹೇಳಿದರು.

ಇದಕ್ಕೂ ಮುನ್ನ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಸಹ ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್‌ಗಾಗಿ ಭಾರತ ಕ್ರಿಕೆಟ್ ತಂಡದ ಪ್ರಯಾಣಿಸುವ ಬಗ್ಗೆ ಗೃಹ ಸಚಿವಾಲಯ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಪ್ರತಿಕ್ರಿಯಿಸಿದ್ದರು.

ಮುಂದಿನ ವರ್ಷ ಪಾಕಿಸ್ತಾನದಲ್ಲಿ ಆಯೋಜಿಸಿರುವ ಏಷ್ಯಾ ಕಪ್‌ಗೆ ಟೀಂ ಇಂಡಿಯಾದ ತೆರಳುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯು ವಿಶ್ವಕಪ್​ಗಾಗಿ ಭಾರತಕ್ಕೆ ಪಾಕಿಸ್ತಾನ ತೆರಳುವುದರ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ಇದನ್ನೂ ಓದಿ:ಏಕದಿನ​ ವಿಶ್ವಕಪ್‌ನಲ್ಲಿ ಎಲ್ಲ ದೊಡ್ಡ ತಂಡಗಳು ಭಾಗಿ: ಪಾಕ್​ಗೆ ಅನುರಾಗ್ ಠಾಕೂರ್ ಟಕ್ಕರ್​

ABOUT THE AUTHOR

...view details