ಕರ್ನಾಟಕ

karnataka

ಹೊಸ ಸ್ವರೂಪದಲ್ಲಿ ಐಸಿಸಿ ಟಿ-20 ವಿಶ್ವಕಪ್​ ಟೂರ್ನಿ: 20 ತಂಡಗಳು ಅಂತಿಮ

By ETV Bharat Karnataka Team

Published : Nov 30, 2023, 9:03 PM IST

T20 World Cup 2024: ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ 2024ರ ಜೂನ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ 20 ತಂಡಗಳು ಅಂತಿಮಗೊಂಡಿವೆ.

20-teams-will-participate-in-t-20-world-cup-2024-know-the-complete-format
ಹೊಸ ಸ್ವರೂಪದಲ್ಲಿ ಐಸಿಸಿ ಟಿ20 ವಿಶ್ವಕಪ್​ ಟೂರ್ನಿ: 20 ತಂಡಗಳು ಅಂತಿಮ

ನವದೆಹಲಿ: ಮುಂದಿನ ವರ್ಷ ಜೂನ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್​​ (T20 World Cup 2024) ಟೂರ್ನಿಯಲ್ಲಿ ಭಾಗವಹಿಸುವ ತಂಡಗಳ ಬಹುತೇಕ ಸ್ಪಷ್ಟವಾಗಿದೆ. ಈ ಚುಟುಕು ವಿಶ್ವಕಪ್ ಟೂರ್ನಿ ಹೊಸ ಸ್ವರೂಪದೊಂದಿಗೆ ಬರಲಿದೆ. ಒಟ್ಟು 20 ರಾಷ್ಟ್ರಗಳ ಕ್ರಿಕೆಟ್​ ತಂಡಗಳು ಪಾಲ್ಗೊಳ್ಳಲಿವೆ. ತಲಾ ಐದು ತಂಡಗಳನ್ನು ಒಳಗೊಂಡ ನಾಲ್ಕು ಗುಂಪುಗಳನ್ನು ರಚಿಸಲಾಗುತ್ತದೆ.

ಭಾರತದಲ್ಲಿ ಇತ್ತೀಚೆಗೆ ಏಕದಿನ ವಿಶ್ವಕಪ್​ ಟೂರ್ನಿ ಮುಗಿದಿದೆ. ಇದರ ಗುಂಗಿನಿಂದ ಕ್ರಿಕೆಟ್​ ಪ್ರೇಮಿಗಳು ಇನ್ನೂ ಬಂದಿಲ್ಲ. ಅಷ್ಟರಲ್ಲೇ ಮತ್ತೊಂದು ಮಹತ್ವದ ಐಸಿಸಿ ಟೂರ್ನಿಗೆ ಸಿದ್ಧತೆಗಳು ನಡೆದಿವೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ 2024ರ ಜೂನ್‌ನಲ್ಲಿ ಟಿ-20 ವಿಶ್ವಕಪ್​​ ಆಯೋಜಿಸಲಾಗಿದೆ. ಈ ಟಿ20 ವಿಶ್ವಕಪ್‌ನ ಅರ್ಹತಾ ಪಂದ್ಯಗಳು ಇಂದು ಪೂರ್ಣಗೊಂಡಿವೆ.

ಚುಟುಕು ವಿಶ್ವ ಸಮರದಲ್ಲಿ 20 ತಂಡಗಳು:ಟಿ20 ವಿಶ್ವಕಪ್‌ನ ಕ್ವಾಲಿಫೈಯರ್ ಪಂದ್ಯಗಳಲ್ಲಿ ಜಿಂಬಾಬ್ವೆ ತಂಡಕ್ಕೆ ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ನಮೀಬಿಯಾ ಮತ್ತು ಉಗಾಂಡಾ ಅರ್ಹತೆ ಪಡೆದಿವೆ. ಇದರೊಂದಿಗೆ 20 ತಂಡಗಳು ಚುಟುಕು ವಿಶ್ವಸಮರಕ್ಕೆ ಸಜ್ಜಾಗಿವೆ. ಹೊಸ ಸ್ವರೂಪದಲ್ಲಿ ಈ ಸರಣಿ ನಡೆಯಲಿದೆ. ತಲಾ ಐದು ತಂಡಗಳ ನಾಲ್ಕು ಗುಂಪುಗಳನ್ನು ರಚನೆ ಮಾಡಲಾಗುತ್ತದೆ. ಪ್ರತಿ ತಂಡವು ತನ್ನ ಗುಂಪಿನ ತಂಡಗಳ ವಿರುದ್ಧ ತಲಾ ಒಂದು ಪಂದ್ಯ ಆಡಲಿದೆ.

ಇದನ್ನೂ ಓದಿ:2024ರ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದ ಉಗಾಂಡ: ಜಿಂಬಾಬ್ವೆ ಔಟ್​

ಆಯಾ ಗುಂಪಿನ ಎರಡು ತಂಡಗಳು ಮುಂದಿನ ಹಂತದಲ್ಲಿ ಅರ್ಹತೆ ಪಡೆಯುತ್ತವೆ. ಇದನ್ನು ಸೂಪರ್ 8 ಎಂದು ಕರೆಯಲಾಗುತ್ತದೆ. ಇಲ್ಲಿ ಗೆದ್ದ ತಂಡಗಳು ಸೆಮಿಫೈನಲ್​ಗೆ ಪ್ರವೇಶ ಪಡೆಯಲಿದೆ. ಎರಡು ವರ್ಷಗಳಿಗೊಮ್ಮೆ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ನಡೆಸಲಾಗುತ್ತದೆ. 2007ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಆವೃತ್ತಿ ನಡೆದಿತ್ತು. ಕೊನೆಯ ಆವೃತ್ತಿಯು ಆಸ್ಟ್ರೇಲಿಯಾದಲ್ಲಿ ಜರುಗಿತ್ತು. ಇದುವರೆಗೆ ಈ ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ಮಾತ್ರ ಎರಡು ಬಾರಿ ಪ್ರಶಸ್ತಿ ಗೆದ್ದ ತಂಡಗಳಾಗಿವೆ.

ಟಿ20 ವಿಶ್ವಕಪ್ ಗೆದ್ದ ತಂಡಗಳು:2007ರಲ್ಲಿ ನಡೆದ ಚೊಚ್ಚಲ ಟಿ20 ವಿಶ್ವಕಪ್​ಅನ್ನು ಟೀಂ ಇಂಡಿಯಾ ಗೆದ್ದಿತ್ತು. 2022ರಲ್ಲಿ ಇಂಗ್ಲೆಂಡ್ ತಂಡ ಪ್ರಶಸ್ತಿ ಗೆದ್ದಿತ್ತು. ಇದುವರೆಗೆ ವಿಶ್ವಕಪ್ ಗೆದ್ದ ತಂಡಗಳ ಮಾಹಿತಿ ಇಲ್ಲಿದೆ. ಭಾರತ (2007), ಪಾಕಿಸ್ತಾನ (2009), ಇಂಗ್ಲೆಂಡ್ (2010), ವೆಸ್ಟ್ ಇಂಡೀಸ್ (2012), ಶ್ರೀಲಂಕಾ (2014), ವೆಸ್ಟ್ ಇಂಡೀಸ್ (2016), ಆಸ್ಟ್ರೇಲಿಯಾ (2021), ಇಂಗ್ಲೆಂಡ್ (2022) ಪ್ರಶಸ್ತಿ ವಿಜೇತ ತಂಡಗಳಾಗಿವೆ.

ಇದನ್ನೂ ಓದಿ:ಕೋಚ್​ ಹುದ್ದೆ ವಿಸ್ತರಿತ ಅವಧಿ ಎಷ್ಟು?: ರಾಹುಲ್​ ದ್ರಾವಿಡ್​ ನೀಡಿದ ಮಾಹಿತಿ ಇದು!

ABOUT THE AUTHOR

...view details