ಕರ್ನಾಟಕ

karnataka

ತು ಯಹೀ ಹೇ: ಸಿದ್ಧಾರ್ಥ್ ಶುಕ್ಲಾಗೆ ಸಂತಾಪ ಸೂಚಿಸಿ ಅಭಿಮಾನಿಗಳ ಹೃದಯ ಒದ್ದೆ ಮಾಡಿದ ಶೆಹನಾಜ್ ಗಿಲ್

By

Published : Oct 30, 2021, 7:02 AM IST

ಸಿದ್ಧಾರ್ಥ್ ಶುಕ್ಲಾ ಮೃತಪಟ್ಟು ಸುಮಾರು ಎರಡು ತಿಂಗಳ ನಂತರ ನಟಿ ಶೆಹನಾಜ್ ಗಿಲ್ ಹೊಸ ಮ್ಯೂಸಿಕ್ ವಿಡಿಯೋವೊಂದನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿ ಸಂತಾಪ ಸೂಚಿಸಿದ್ದಾರೆ.

Shehnaaz Gill pays emotional tribute to Sidharth Shukla
ನಟ ಸಿದ್ಧಾರ್ಥ್ ಶುಕ್ಲಾ ನಿಧನದ ಎರಡು ತಿಂಗಳ ನಂತರ ಸಂತಾಪ ಸೂಚಿಸಿ ಅಭಿಮಾನಿಗಳ ಹೃದಯ ಒದ್ದೆ ಮಾಡಿದ ಶೆಹನಾಜ್ ಗಿಲ್

ಬಾಲಿವುಡ್ ನಟ ಸಿದ್ಧಾರ್ಥ್​ ಶುಕ್ಲಾ ಅವರ ನಿಧನದ ಎರಡು ತಿಂಗಳ ನಂತರ ನಟಿ ಶೆಹನಾಜ್ ಗಿಲ್ ಹೊಸ ಮ್ಯೂಸಿಕ್ ವಿಡಿಯೋವೊಂದನ್ನು ಯೂಟ್ಯೂಬ್​ನಲ್ಲಿ ಬಿಡುಗಡೆ ಮಾಡಿ ಸಿದ್ಧಾರ್ಥ್​ ಶುಕ್ಲಾ ಅವರಿಗೆ ಸಂತಾಪ ಸೂಚಿಸಿದ್ದಾರೆ.

'ತು ಯಹೀ ಹೇ' ಹೆಸರಿನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಅವರು ಸಿದ್ಧಾರ್ಥ್​ ಶುಕ್ಲಾ ಅವರಿಗೆ ಆಪ್ತ ಸ್ನೇಹಿತೆಯಾಗಿದ್ದಾರೆ. ಸಿದ್ಧಾರ್ಥ್ ಶುಕ್ಲಾ ಅವರಿಗೆ ಶೆಹನಾಜ್ ಗಿಲ್ ಗರ್ಲ್​ ಫ್ರೆಂಡ್ ಎಂಬ ಊಹಾಪೋಹಗಳೂ ಕೂಡಾ ಹರಿದಾಡುತ್ತಿದ್ದವು. ಇಬ್ಬರೂ ಕೂಡಾ ಹಿಂದಿ ಬಿಗ್​ಬಾಸ್​ನಲ್ಲಿ ಪಾಲ್ಗೊಂಡಿದ್ದರು.

ಶೆಹನಾಜ್ ಗಿಲ್ ಈ ಹಾಡನ್ನು ಹಾಡಿದ್ದು, ರಾಜ್ ರಂಜೋದ್ ಸಾಹಿತ್ಯವಿದೆ. ಶೆಹನಾಜ್ ಏಕಾಂಗಿಯಾಗಿ ಜೀವನ ನಡೆಸುತ್ತಿರುವಂತೆ ಹಾಗೂ ಸಿದ್ಧಾರ್ಥ್ ನೆನಪುಗಳಲ್ಲಿ ಶೆಹನಾಜ್ ಕಳೆದುಹೋದಂಥಹ ಭಾವನೆಗಳನ್ನು ಈ ವಿಡಿಯೋದಲ್ಲಿ ತುಂಬಲಾಗಿದೆ.

ಶೆಹನಾಜ್ ಮತ್ತು ಸಿದ್ಧಾರ್ಥ್ ಅವರ ಸ್ನೇಹದ ಕ್ಷಣಗಳು ಈ ವಿಡಿಯೋದಲ್ಲಿ ಅನಾವರಣಗೊಂಡಿವೆ. ಈ ಹಾಡಿನಲ್ಲಿ ಸಿದ್ಧಾರ್ಥ್ ಶುಕ್ಲಾ 'ಸನಾ' ಎಂದು ಕೂಗುವುದು. ಈ ಧ್ವನಿಯನ್ನು ಕೇಳಿದ ಶೆಹನಾಜ್ ಹಿಂದೆ ತಿರುಗಿ ನೋಡಿ ಯಾರೂ ಇಲ್ಲದ್ದನ್ನು ಕಂಡು ಮರುಗುವುದು ಅಭಿಮಾನಿಗಳ ಹೃದಯವನ್ನು ಒದ್ದೆ ಮಾಡಿಸದೇ ಇರದು.

ಇದನ್ನೂ ಓದಿ:ಅಜಯ್​ ದೇವಗನ್​ To ಅಭಿಷೇಕ್​ ಬಚ್ಚನ್... ಪುನೀತ್​ ನಿಧನಕ್ಕೆ ಬಾಲಿವುಡ್ ಕಂಬನಿ​​​

ABOUT THE AUTHOR

...view details