ಕರ್ನಾಟಕ

karnataka

Shabaash Mithu..'ರಶ್ಮಿ ರಾಕೆಟ್' ಯಶಸ್ಸಿನ ಸಂಭ್ರಮದಲ್ಲಿ ತಾಪ್ಸಿ ಪನ್ನು...'ಶಭಾಶ್ ಮಿಥು' ಚಿತ್ರೀಕರಣ ಮುಕ್ತಾಯ

By

Published : Nov 11, 2021, 8:40 AM IST

Updated : Nov 11, 2021, 9:15 AM IST

ಭಾರತೀಯ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ (mithali raj) ಆಧಾರಿತ, ನಟಿ ತಾಪ್ಸಿ ಪನ್ನು (taapsee pannu) ಅಭಿನಯದ 'ಶಭಾಶ್ ಮಿಥು' (Shabaash Mithu) ಬಯೋಪಿಕ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿದೆ.

Taapsee Pannu
ನಟಿ ತಾಪ್ಸಿ ಪನ್ನು

ಬಾಲಿವುಡ್​ನ 'ರಶ್ಮಿ ರಾಕೆಟ್' (rashami rocket) ಸಿನಿಮಾದ ಯಶಸ್ಸಿನ ಸಂಭ್ರಮದಲ್ಲಿ ನಟಿ ತಾಪ್ಸಿ (taapsee pannu) ಪನ್ನು ಇದ್ದಾರೆ. ಇದರೊಂದಿಗೆ ಭಾರತೀಯ ಮಹಿಳಾ ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ (mithali raj) ಆಧಾರಿತ 'ಶಭಾಶ್ ಮಿಥು' (Shabaash Mithu) ಬಯೋಪಿಕ್ ಸಿನಿಮಾದ ಚಿತ್ರೀಕರಣವೂ ಮುಕ್ತಾಯಗೊಂಡಿದೆ.

'ರಶ್ಮಿ ರಾಕೆಟ್' ಯಶಸ್ಸಿನ ಸಂಭ್ರಮದಲ್ಲಿ ತಾಪ್ಸಿ ಪನ್ನು...'ಶಭಾಶ್ ಮಿಥು' ಚಿತ್ರೀಕರಣ ಮುಕ್ತಾಯ

ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ಬಯಕೆ ಹೊಂದಿರುವ ಸಣ್ಣ ಪಟ್ಟಣದ ಕ್ರೀಡಾಪಟುವಿನ ಪಾತ್ರವನ್ನು 'ರಶ್ಮಿ ರಾಕೆಟ್' (rashami rocket) ಚಿತ್ರದಲ್ಲಿ ತಾಪ್ಸಿ (Taapsee Pannu)ನಿರ್ವಹಿಸಿದ್ದಾರೆ. ಕ್ರೀಡಾಪಟು ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಪ್ಸಿ, ಅಥ್ಲೀಟ್​ ರಶ್ಮಿಯಾಗಿ ಹಾಕಿ ಸ್ಟಿಕ್ ಹಿಡಿದು ಮೈದಾನದಲ್ಲಿ ಧೂಳೆಬ್ಬಿಸಿದ್ದಾರೆ. ಈ ಚಿತ್ರಕ್ಕಾಗಿ ತಾಪ್ಸಿ ಪನ್ನು ಬಹಳಾನೇ ಪರಿಶ್ರಮ ವಹಿಸಿದ್ದರು.

ಇದನ್ನೂ ಓದಿ:'ಅಂತಿಮ್: ದಿ ಫೈನಲ್ ಟ್ರುತ್'.... ನವೆಂಬರ್ 26 ರಂದು ಬಿಡುಗಡೆ

ಅದರಂತೆ ಮತ್ತೋರ್ವ ಕ್ರೀಡಾಪಟುವಿನ ಬಯೋಪಿಕ್​​​ನಲ್ಲಿ ತಾಪ್ಸಿ ಪನ್ನು (taapsee pannu) ಕಾಣಿಸಿಕೊಳ್ಳಲಿದ್ದಾರೆ. ಕ್ರಿಕೆಟ್ ನಾಯಕಿ ಮಿಥಾಲಿ ರಾಜ್ (mithali raj) ಆಧಾರಿತ 'ಶಭಾಶ್ ಮಿಥು' (Shabaash Mithu) ಬಯೋಪಿಕ್ ಸಿನಿಮಾದ ಚಿತ್ರೀಕರಣ ಮುಕ್ತಾಯಗೊಂಡಿರುವುದು, 'ರಶ್ಮಿ ರಾಕೆಟ್' ಯಶಸ್ಸಿನ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ.

‘ಪಾರ್ಜಾನಿಯಾ’ ಮತ್ತು ‘ರಯೀಸ್’ ನಂತಹ ಚಲನಚಿತ್ರಗಳಿಗೆ ಹೆಸರುವಾಸಿಯಾದ ರಾಹುಲ್ ಧೋಲಾಕಿಯಾ ಈ ಬಯೋಪಿಕ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

Last Updated : Nov 11, 2021, 9:15 AM IST

ABOUT THE AUTHOR

...view details