ಕರ್ನಾಟಕ

karnataka

ಪರಭಾಷೆಯಲ್ಲೂ ಡಿಮ್ಯಾಂಡ್ ಹೆಚ್ಚಿಸಿಕೊಂಡ್ರಾ ವಿಕ್ರಾಂತ್ ರೋಣ ಚಿತ್ರದ ಡೈರೆಕ್ಟರ್​?

By

Published : Jan 11, 2022, 8:02 PM IST

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ನಿರ್ದೇಶಿಸಿರುವ ಅನೂಪ್ ಭಂಡಾರಿ ಅವರಿಗೆ ಬೇರೆ ಭಾಷೆಯ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಆಫರ್ ಬಂದಿದೆಯಂತೆ. ಆದರೆ ಈ ಬಗ್ಗೆ ಅನೂಪ್ ಭಂಡಾರಿ ಮಾತ್ರ ಎಲ್ಲೂ ಮಾತನಾಡಿಲ್ಲ.

Vikrant Rona director
ನಿರ್ದೇಶಕ ಅನೂಪ್ ಭಂಡಾರಿ

ಸ್ಯಾಂಡಲ್​ವುಡ್​ ಸಿನಿಮಾಗಳಿಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಕ್ಸಸ್ ಸಿಗುತ್ತಿರುವುದರಿಂದ, ಕನ್ನಡ ಚಿತ್ರರಂಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ನಮ್ಮ ಕನ್ನಡದ ಚಿತ್ರಗಳು ವಿಶ್ವದ ಗಮನ ಸೆಳೆಯುತ್ತಿರೋ ಬೆನ್ನಲ್ಲೇ, ಆ ಚಿತ್ರದ ನಿರ್ದೇಶಕರಿಗೂ ಪರಭಾಷೆಯಲ್ಲಿ ಡಿಮ್ಯಾಂಡ್ ಹೆಚ್ಚಾಗುತ್ತಿದೆ.

ನಿರ್ದೇಶಕ ಅನೂಪ್ ಭಂಡಾರಿ

ಹೌದು, ಇದೀಗ ಕೆಜಿಎಫ್ ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಬಳಿಕ, ಮತ್ತೊಬ್ಬ ನಿರ್ದೇಶಕ ಅನೂಪ್ ಭಂಡಾರಿಗೆ ಬೇರೆ ಭಾಷೆಯ ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳುವ ಆಫರ್ ಬಂದಿದೆಯಂತೆ.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ, ಒಂದಲ್ಲ ಒಂದು ವಿಷ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈ ಸಿನಿಮಾ ಬಿಡುಗಡೆ ಮುನ್ನವೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಟಾಕ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ವಿಕ್ರಾಂತ್ ರೋಣ ಅಂತಾ ಪವರ್​ಫುಲ್ ಹೆಸರು ಇಟ್ಟು, ಫ್ಯಾಂಟಸಿ ಜಗತ್ತನ್ನು ಸೃಷ್ಟಿ ಮಾಡಿರುವ ನಿರ್ದೇಶಕ ಅನೂಪ್ ಭಂಡಾರಿ. ಈ ಸಿನಿಮಾ, ಫೆಬ್ರವರಿ 24ನೇ ತಾರೀಖು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಿದ್ಧವಾಗಿದೆ.

ಸಿನಿಮಾನೇ ಇನ್ನೂ ರಿಲೀಸ್ ಆಗಿಲ್ಲ, ಆಗಲೇ ಸುದೀಪ್ ಜೊತೆ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಬಿಲ್ಲಾ, ರಂಗ, ಭಾಷಾ ಸಿನಿಮಾ ಅಥವಾ ಬೇರೆ ಸಿನಿಮಾ ಮಾಡ್ತಾರೆ ಅನ್ನೋದು ಚರ್ಚೆಯಲ್ಲಿದೆ.

ನಿರ್ದೇಶಕ ಅನೂಪ್ ಭಂಡಾರಿ

ಅನೂಪ್ ಭಂಡಾರಿ ಆಪ್ತರ ಪ್ರಕಾರ, ಬಾಲಿವುಡ್ ಮತ್ತು ದಕ್ಷಿಣ ಭಾರತದ ಸಿನಿಮಾ ನಿರ್ಮಾಪಕರು ಅವರನ್ನು ಸಂಪರ್ಕಿಸಿದ್ದಾರೆ. ಅದರಲ್ಲೂ ಪ್ರಸಿದ್ಧ ನಿರ್ಮಾಣ ಸಂಸ್ಥೆ ಎರೋಸ್ ಇಂಟರ್ ನ್ಯಾಷನಲ್ ಪ್ರೊಡಕ್ಷನ್ ಹೌಸ್ ಅನೂಪ್ ಭಂಡಾರಿ ಅವರನ್ನು ಸಂಪರ್ಕಿಸಿ, ಒಂದು ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದೆಯಂತೆ. ಹಾಗೆ ತೆಲುಗಿನ ಅನ್ನಪೂರ್ಣ ಸ್ಟುಡಿಯೋಸ್ ಕೂಡ ತಮ್ಮ ಬ್ಯಾನರ್​ನಲ್ಲಿ ಕೆಲಸ ಮಾಡುವಂತೆ ಆಫರ್ ನೀಡಿದೆಯಂತೆ. ಆದರೆ ಈ ಬಗ್ಗೆ ಅನೂಪ್ ಭಂಡಾರಿ ಮಾತ್ರ ಎಲ್ಲೂ ಹೇಳಿಕೊಂಡಿಲ್ಲ.

ಇದನ್ನೂ ಓದಿ: ಕೀರ್ತಿ ಸುರೇಶ್​​ಗೆ ಕೋವಿಡ್: ಸೋಂಕು ನಿರ್ಲಕ್ಷಿಸಬೇಡಿ ಎಂದ ದ.ಭಾರತದ ಖ್ಯಾತ ನಟಿ

ಕಿಚ್ಚ ಸುದೀಪ್​​ ಅಭಿನಯದ, ಅನೂಪ್ ಭಂಡಾರಿ ನಿರ್ದೇಶನದ ವಿಕ್ರಾಂತ್ ರೋಣ ಸಿನಿಮಾವನ್ನು 14 ಭಾಷೆಗಳಲ್ಲಿ, 55 ದೇಶಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯ ಈ ಸಿನಿಮಾ ಬಿಡುಗಡೆ ಮುಂಚೆನೇ ನಿರ್ದೇಶಕ ಅನೂಪ್ ಭಂಡಾರಿಗೆ ಪರಭಾಷೆಯಲ್ಲಿ ಆ್ಯಕ್ಷನ್ ಕಟ್ ಹೇಳಲು ಆಫರ್ ಬಂದಿದೆ ಅನ್ನೋದು ಖುಷಿಯ ವಿಚಾರವಾಗಿದೆ.

ABOUT THE AUTHOR

...view details