ಕರ್ನಾಟಕ

karnataka

ತಮಿಳಿನ ಕೋಲಮಾವು ಕೋಕಿಲ ಕನ್ನಡಕ್ಕೆ ರಿಮೇಕ್: ಅಧಿಕೃತ ಚಾಲನೆ ಕೊಟ್ಟ ನಿರ್ದೇಶಕ ಮಯೂರ ರಾಘವೇಂದ್ರ

By

Published : Aug 7, 2020, 5:23 AM IST

"ಕೋಲಮಾವು ಕೋಕಿಲ" ಚಿತ್ರದಲ್ಲಿ ನಯನ ತಾರ ನಟಿಸಿದ್ದ ಡ್ರಗ್ ಡೀಲರ್ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸೋದು ಪಕ್ಕಾ ಆಗಿದೆ. ಅಲ್ಲದೆ ತಮಿಳಿನಲ್ಲಿ ಯೋಗಿ ಬಾಬು ಕಾಣಿಸಿದ್ದ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿರುವ ನಿರ್ದೇಶಕ ಮಯೂರ ರಾಘವೇಂದ್ರ ಶೀಘ್ರದಲ್ಲೇ ತಂತ್ರಜ್ಞರ ತಂಡ ಹಾಗೂ ಕಲಾವಿದರನ್ನು ಫೈನಲ್ ಮಾಡಿ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ.

Kolamavu kokila film
ಸ್ಕ್ರಿಪ್ಟ್ ಪೂಜೆ ಮಾಡಿಸುವ ಮೂಲಕ ಚಾಲನೆ

ನಿರ್ದೇಶಕ ಮಯೂರ ರಾಘವೇಂದ್ರ, ನಯನತಾರ ಅಭಿನಯದ ತಮಿಳಿನ ಸೂಪರ್ ಹಿಟ್ ಚಿತ್ರ "ಕೋಲಮಾವು ಕೋಕಿಲ" ಚಿತ್ರವನ್ನು ಕನ್ನಡಕ್ಕೆ ರೀಮೇಕ್ ಮಾಡಲು ಈಗಾಗಲೇ ಎಲ್ಲಾ ತಯಾರಿ ನಡೆಸಿದ್ದು, ಇಂದು ಮೊದಲ ಹಂತವಾಗಿ ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿಸುವ ಮೂಲಕ ಚಿತ್ರಕ್ಕೆ ಚಾಲನೆ ಕೊಟ್ಟಿದ್ದಾರೆ.

ಘಾಟಿ ಸುಬ್ರಮಣ್ಯ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ

ಇನ್ನು "ಕೋಲಮಾವು ಕೋಕಿಲ" ಚಿತ್ರದಲ್ಲಿ ನಯನ ತಾರ ನಟಿಸಿದ್ದ ಡ್ರಗ್ ಡೀಲರ್ ಪಾತ್ರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸೋದು ಪಕ್ಕಾ ಆಗಿದೆ. ಅಲ್ಲದೆ ತಮಿಳಿನಲ್ಲಿ ಯೋಗಿ ಬಾಬು ಕಾಣಿಸಿದ್ದ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿರುವ ನಿರ್ದೇಶಕ ಮಯೂರ ರಾಘವೇಂದ್ರ ಶೀಘ್ರದಲ್ಲೇ ತಂತ್ರಜ್ಞರ ತಂಡ ಹಾಗೂ ಕಲಾವಿದರನ್ನು ಫೈನಲ್ ಮಾಡಿ ಶೂಟಿಂಗ್ ಮಾಡಲು ಪ್ಲಾನ್ ಮಾಡಿದ್ದಾರೆ.

ರಚಿತಾ ರಾಮ್

ಇನ್ನು ಈ ಚಿತ್ರಕ್ಕೆ "ಪಂಕಜ ಕಸ್ತೂರಿ" ಟೈಟಲ್ ಇಡಲು ನಿರ್ದೇಶಕರ ಒಲವಿದ್ದು. ಶ್ರೀಘ್ರದಲ್ಲೇ ಟೈಟಲ್ ರಿವೀಲ್ ಮಾಡುವುದಾಗಿ ತಿಳಿಸಿದ್ದಾರೆ. ಇನ್ನು ಕನಡ್ ಗೊತ್ತಿಲ್ಲ ಚಿತ್ರದಲ್ಲಿ ಮೊದಲ ಬಾರಿಗೆ ಕ್ಯಾಮರಾ ವರ್ಕ್ ಮಾಡಿ ಸೈ ಅನಿಸಿಕೊಂಡಿದ್ದ ಸಂಗೀತ ನಿರ್ದೇಶಕ ಗಿರಿಧರ್ ಧಿವಾನ್ ಈ ಚಿತ್ರಕ್ಕೂ ಕ್ಯಾಮರಾ ವರ್ಕ್ ಮಾಡಲಿದ್ದಾರೆ.

ಇನ್ನು ಕೊರೊನಾ ಸೋಂಕು ಕಮ್ಮಿ ಆಗ್ತಿದ್ದಂತೆ. ಚಿತ್ರಕ್ಕೆ ಲೊಕೇಷನ್ ಫೈನಲ್ ಮಾಡಿ ನವೆಂಬರ್ ಅಂತ್ಯದ ವೇಳೆಗೆ ಚಿತ್ರದ ಶೂಟಿಂಗ್ ಮಾಡಲು ಪ್ಲಾನ್ ಮಾಡಿರುವುದಾಗಿ ನಿರ್ದೇಶಕ ಮಯೂರ ರಾಘವೇಂದ್ರ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ABOUT THE AUTHOR

...view details