ಕರ್ನಾಟಕ

karnataka

ಮತ್ತೊಮ್ಮೆ ಸತ್ಯ ಮತ್ತು ಶಿವನಾಗಿ ನಿಮ್ಮ ಮುಂದೆ ಕಿಚ್ಚ: ಕೋಟಿಗೊಬ್ಬ-3 ರಿಲೀಸ್​ ಸುಳಿವು ಕೊಟ್ಟ ಸುದೀಪ್​

By

Published : Jul 22, 2021, 7:45 PM IST

'ಮತ್ತೊಮ್ಮೆ ಸತ್ಯ ಮತ್ತು ಶಿವನಾಗುವ ಅವಕಾಶ ಬಂದಿದೆ, ನಾನೂ ಈಗ ಡಬ್ಬಿಂಗ್ ಮುಗಿಸಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತಾಗುತ್ತದೆ. ಸದ್ಯದಲ್ಲೇ ಕೋಟಿಗೊಬ್ಬ-3 ನಿಮ್ಮ ಮುಂದೆ ಬರಲಿದೆ' ಅಂತಾ ಕಿಚ್ಚ ಸುದೀಪ್ ಸುಳಿವು ನೀಡಿದ್ದಾರೆ.

sudeep
ಕಿಚ್ಚ ಸುದೀಪ್

ಕೋಟಿಗೊಬ್ಬ- 3 ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಸುದ್ದಿಯಾಗ್ತಿರುವ ಸಿನಿಮಾ. 'ಅಭಿನಯ ಚಕ್ರವರ್ತಿ' ಕಿಚ್ಚ ಸುದೀಪ್ ನಟನೆಯ ಕೋಟಿಗೊಬ್ಬ- 3 ಅಂದುಕೊಂಡಂತೆ ಆಗಿದ್ರೆ, ಇಷ್ಟು ಹೊತ್ತಿಗೆ ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಎರಡನೇ ಅಲೆ ಮತ್ತು ಲಾಕ್‌ಡೌನ್​ನಿಂದಾಗಿ ಬಿಡುಗಡೆ ಡೇಟ್ ಪೋಸ್ಟ್ ಪೋನ್ ಆಗಿದೆ.

ಕಿಚ್ಚ ಸುದೀಪ್ ಲುಕ್​

ಇತ್ತ ಕಿಚ್ಚನ ಅಭಿಮಾನಿಗಳು ಯಾವಾಗ ಕೋಟಿಗೊಬ್ಬ 3 ರಿಲೀಸ್ ಆಗುತ್ತೆ ಅಂತಾ ಕಾಯ್ತಾ ಕುಳ್ತಿದ್ದಾರೆ. ಇದೀಗ ಕೋಟಿಗೊಬ್ಬ- 3 ಚಿತ್ರದ ಡಬ್ಬಿಂಗ್ ಮುಗಿಸಿರುವ ಕಿಚ್ಚ ಸುದೀಪ್, ಚಿತ್ರ ಶೀಘ್ರದಲ್ಲೇ ಬಿಡುಗಡೆಗೆ ರೆಡಿ ಎಂದಿದ್ದಾರೆ.

'ಮತ್ತೊಮ್ಮೆ ಸತ್ಯ ಮತ್ತು ಶಿವನಾಗುವ ಅವಕಾಶ ಬಂದಿದೆ, ಎಲ್ಲರದ್ದೂ ಡಬ್ಬಿಂಗ್ ಮುಗಿದಿತ್ತು. ನನ್ನೊಬ್ಬನದ್ದೇ ಬಾಕಿಯಿತ್ತು. ನಾನೂ ಈಗ ಡಬ್ಬಿಂಗ್ ಮುಗಿಸಿದ್ದೇನೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಗಿದಂತಾಗುತ್ತದೆ. ಸದ್ಯದಲ್ಲೇ ಕೋಟಿಗೊಬ್ಬ ನಿಮ್ಮ ಮುಂದೆ ಬರಲಿದೆ' ಅಂತಾ ಕಿಚ್ಚ ಸುಳಿವು ನೀಡಿದ್ದಾರೆ.

ಸಿನಿಮಾದಲ್ಲಿ ಕಿಚ್ಚನ ಜೊತೆ ಮಡೋನ್ನಾ ಸೆಬಾಸ್ಟಿಯನ್ ರೊಮ್ಯಾನ್ಸ್ ಮಾಡಿದ್ದಾರೆ. ಇದರ ಜೊತೆಗೆ ಶ್ರದ್ಧಾ ದಾಸ್, ರವಿಶಂಕರ್, ಅಫ್ತಾಬ್ ಶಿವದಾಸನಿ, ಡ್ಯಾನಿಷ್ ಅಖ್ತರ್ ನಟಿಸಿದ್ದಾರೆ. ಪಟಾಕಿ ಪೋರಿಯಾಗಿ ಐಟಂ ಸಾಂಗ್‍ಗೆ ಆಶಿಕಾ ರಂಗನಾಥ್ ಹೆಜ್ಜೆ ಹಾಕಿದ್ದಾರೆ.

ಈ ಚಿತ್ರವನ್ನ ಶಿವ ಕಾರ್ತಿಕ್ ನಿರ್ದೇಶನ ಮಾಡಿದ್ದು, ಅದ್ಧೂರಿ ವೆಚ್ಚದಲ್ಲಿ ನಿರ್ಮಾಪಕ ಸೂರಪ್ಪ ಬಾಬು ನಿರ್ಮಾಣ ಮಾಡಿದ್ದಾರೆ. ಸದ್ಯ ರಾಜ್ಯ ಸರ್ಕಾರ ಇದೇ 19ರಿಂದ ಚಿತ್ರಮಂದಿರಗಳಲ್ಲಿ 50 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡಿದೆ. ಆದರೆ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ ಮೇಲೆ ಕೋಟಿಗೊಬ್ಬ- 3 ಸಿನಿಮಾ ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್​ ಮಾಡಿದ್ದಾರೆ.

ABOUT THE AUTHOR

...view details