ಕರ್ನಾಟಕ

karnataka

ಕೋಟಿಗೊಬ್ಬ-3 ನಿರ್ಮಾಪಕರ ವಿರುದ್ಧ ಕಿಚ್ಚನ ಫ್ಯಾನ್ಸ್ ಬೇಸರ : ಕಾರಣ!

By

Published : Feb 26, 2021, 12:00 PM IST

Updated : Feb 26, 2021, 1:29 PM IST

ಕೋಟಿಗೊಬ್ಬ 3 ಚಿತ್ರದ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಪ್ರಚಾರ ಕೈಗೊಳ್ಳದೇ ಇರುವುದಕ್ಕೆ ಬೇಸರಗೊಂಡ ಅಭಿಮಾನಿಗಳು ಸೂರಪ್ಪ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ.

kotigobba 3
ಕೋಟಿಗೊಬ್ಬ-3

ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರವನ್ನು ಏಪ್ರಿಲ್ 29ಕ್ಕೆ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ಸೂರಪ್ಪ ಬಾಬು ಘೋಷಿಸಿದ್ದಾರೆ. ಚಿತ್ರ ಬಿಡುಗಡೆಗೆ ಇನ್ನು ಎರಡೇ ಎರಡು ತಿಂಗಳಿದ್ದರೂ ಪ್ರಚಾರ ಕಾರ್ಯ ಪೂರ್ಣಪ್ರಮಾಣವಾಗಿ ಶುರುವಾಗಿಲ್ಲ.

'ಪಟಾಕಿ ಪೋರಿಯೋ' ಬಿಟ್ಟರೆ ಹೊಸ ಹಾಡಾಗಲೀ, ಟ್ರೈಲರ್ ಆಗಲೀ ಬಿಡುಗಡೆಯಾಗಿಲ್ಲ. ಎಷ್ಟು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಬಹುದು ಅಥವಾ ಚಿತ್ರದ ಪ್ರಮೋಷನ್‍ನ ವಿಶೇಷತೆಗಳೇನಿರಬಹುದು ಎಂದು ಚಿತ್ರತಂಡ ಇನ್ನೂ ಬಹಿರಂಗಗೊಳಿಸಿಲ್ಲ. ಇದರಿಂದ ಸುದೀಪ್ ಅವರ ಅಭಿಮಾನಿಗಳು ಸಹಜವಾಗಿಯೇ ಸಿಟ್ಟಾಗಿದ್ದಾರೆ. ಚಿತ್ರ ಬಿಡುಗಡೆಯ ಹಂತಕ್ಕೆ ಬಂದರೂ, ಚಿತ್ರತಂಡದಿಂದ ಯಾವೊಂದು ಅಪ್ಡೇಟ್​​ ಇಲ್ಲದಿರುವ ಬಗ್ಗೆ ಬೇಸರಗೊಂಡಿದ್ದಾರೆ.

ಅಷ್ಟೇ ಅಲ್ಲ, ಇದೇ ವಿಷಯವಾಗಿ ಸೋಷಿಯಲ್ ಮೀಡಿಯಾದಲ್ಲಿ ಸೂರಪ್ಪ ಬಾಬು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ಎಲ್ಲ ಟ್ರೋಲ್‍ಗಳಿಗೆ ಸೂರಪ್ಪ ಬಾಬು ಯಾವುದೇ ಉತ್ತರ ಕೊಟ್ಟಿಲ್ಲ.

ಮೂಲಗಳ ಪ್ರಕಾರ, ಚಿತ್ರದ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇರುವುದರಿಂದ, ಇನ್ನಷ್ಟು ದಿನಗಳ ನಂತರ ಪ್ರಚಾರ ಮಾಡುವುದಕ್ಕೆ ಚಿತ್ರತಂಡ ಯೋಚಿಸುತ್ತಿದೆಯಂತೆ. ಅದರಲ್ಲೂ ಮಾರ್ಚ್ 11ಕ್ಕೆ 'ರಾಬರ್ಟ್' ಮತ್ತು ಏಪ್ರಿಲ್ 1ಕ್ಕೆ 'ಯುವರತ್ನ' ಚಿತ್ರಗಳ ಬಿಡುಗಡೆ ಇರುವುದರಿಂದ, ಅವೆರೆಡೂ ಬಿಡುಗಡೆಯಾದ ಮೇಲೆ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡುವುದಕ್ಕೆ ಬಾಬು ಯೋಚಿಸುತ್ತಿದ್ದಾರಂತೆ.

ಅದಕ್ಕೂ ಮುನ್ನ ಮಾಡಿದರೆ, ಪ್ರಚಾರದಲ್ಲಿ ಸಂಘರ್ಷಕ್ಕೆ ಕಾರಣ ಆಗುವ ಸಾಧ್ಯತೆಗಳಿರುವುದರಿಂದ, ಏಪ್ರಿಲ್ 1ರ ನಂತರ ಚಿತ್ರವನ್ನು ಸತತವಾಗಿ ಪ್ರಚಾರ ಮಾಡಿ ಬಿಡುಗಡೆ ಮಾಡುವುದಕ್ಕೆ ಯೋಚಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Last Updated : Feb 26, 2021, 1:29 PM IST

ABOUT THE AUTHOR

...view details