ಕರ್ನಾಟಕ

karnataka

ವಿಜಯ್ ಪ್ರಕಾಶ್ ಗಾನಸುಧೆಗೆ 'ಜೈ ಹೋ' ಎಂದ ಕಿತ್ತೂರು ಜನತೆ

By

Published : Oct 25, 2021, 10:36 AM IST

ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ 25ನೇ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಗಾಯಕ ವಿಜಯ ಪ್ರಕಾಶ್ ಗಾನಸುಧೆ ಕೇಳಲು ಜನ ಕಿಕ್ಕಿರಿದು ಸೇರಿದ್ದರು.

ವಿಜಯ್ ಪ್ರಕಾಶ್
ವಿಜಯ್ ಪ್ರಕಾಶ್

ಬೆಳಗಾವಿ: ಎರಡು ದಿನಗಳ ಕಾಲ ನಡೆದ‌ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಖ್ಯಾತ ಗಾಯಕ ವಿಜಯ ಪ್ರಕಾಶ್ ಗಾನಸುಧೆಗೆ ಕಿತ್ತೂರಿನ ಜನ ಕುಣಿದು ಕುಪ್ಪಳಿಸಿದರು.

ಬ್ರಿಟಿಷರ ವಿರುದ್ಧ ಹೋರಾಡಿ ವಿಜಯ ಸಾಧಿಸಿದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ 'ಕಿತ್ತೂರು ಉತ್ಸವ' ಅದ್ಧೂರಿಯಾಗಿ ತೆರೆ ಕಂಡಿದೆ. ಎರಡು ದಿನಗಳ ಕಾಲ ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಐತಿಹಾಸಿಕ ಚನ್ನಮ್ಮನ ಕಿತ್ತೂರು ಉತ್ಸವ 25ನೇ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದಲ್ಲಿ ಸ್ಥಳೀಯ ಶಾಸಕ ಮಹಾಂತೇಶ ದೊಡ್ಡಗೌಡರ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬೈಲೂರ ನಿಷ್ಕಲಮಠದ ನಿಜಗುಣಾನಂದ ಸ್ವಾಮೀಜಿ ಸೇರಿ ವಿವಿಧ ಮಠದ ಮಠಾಧೀಶರು ಭಾಗಿಯಾಗಿದ್ದರು.

ಸಂಗೀತ ಸಂಜೆ ಕಾರ್ಯಕ್ರಮ ಅಭಿಮಾನಿಗಳನ್ನು ರಂಜಿಸಿದ ವಿಜಯ್ ಪ್ರಕಾಶ್

ಸಮಾರೋಪ ಸಮಾರಂಭದಲ್ಲಿ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಈ ಬಾರಿಯ ಉತ್ಸವಕ್ಕೆ ಖ್ಯಾತ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಸಂಗೀತ ಸಂಜೆ ಕಾರ್ಯಕ್ರಮ ಅಭಿಮಾನಿಗಳಲ್ಲಿ ಮತ್ತಷ್ಟು ಖುಷಿ ತಂದಿತು. ವಿಜಯ್ ಪ್ರಕಾಶ್ ಗಾನಸುಧೆ ಕೇಳಲು ಕಿಕ್ಕಿರಿದು ಜನ ಸೇರಿದ್ದು, ಹಾಡಿಗೆ ಡ್ಯಾನ್ಸ್​ ಮಾಡಿ ಖುಷಿಪಟ್ಟರು.

ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಜೊತೆಗೆ ಲಘು ಲಾಠಿ ಪ್ರಹಾರ‌ ನಡೆಸಿ, ಜನರನ್ನು ಚದುರಿಸಿದರು. ಈ ವೇಳೆ ಓರ್ವ ಯುವಕನಿಗೆ ಗಾಯವಾಗಿದ್ದು, ಕಿತ್ತೂರು ಅಭಿಮಾನಿಗಳ ಜೋಶ್ ಕಂಡು ಗಾಯಕ ವಿಜಯ್ ಪ್ರಕಾಶ್ ಫುಲ್ ಫಿದಾ ಆದರು. ಜೊತೆಗೆ ಬೆಳಗಾವಿ ಡಿಸಿ ಎಂ.ಜಿ.ಹಿರೇಮಠ ಕನ್ನಡಾಭಿಮಾನ ಸಾರುವ ಗೀತೆ ಹಾಡಿದ್ದು ವಿಶೇಷವಾಗಿತ್ತು.

ಜೈ ಹೋ..,ಬೊಂಬೆ ಹೇಳುತೈತಿ, ನೀನೇ ರಾಜಕುಮಾರ.., ಬೆಳಗೆದ್ದು ಯಾರ ಮುಖವ ನಾನು ನೋಡಿದೆ.. ಸೇರಿದಂತೆ ಅನೇಕ ವಿವಿಧ ಹಾಡುಗಳ ಮೂಲಕ ಕನ್ನಡದ ಖ್ಯಾತ ಗಾಯಕ ವಿಜಯ್​ ಪ್ರಕಾಶ್​ ಪ್ರೇಕ್ಷಕರನ್ನು ರಂಜಿಸಿದರು.

ABOUT THE AUTHOR

...view details