ಕರ್ನಾಟಕ

karnataka

ಸೂಪರ್ ಕಾಪ್ ಶ್ವೇತಾ ಶ್ರೀವಾತ್ಸವ್​​​​​​​​​ಗೆ ನಿರ್ದೇಶಕ ಸುನಿ ಸಾಥ್

By

Published : Dec 3, 2019, 8:28 PM IST

'ರಹದಾರಿ' ಚಿತ್ರದ ಮುಹೂರ್ತ ನಿನ್ನೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ಜರುಗಿತು. 'ಸಿಂಪಲ್ಲಾಗ್ ಒಂದ್ ಲವ್' ಸ್ಟೋರಿ ಸಿನಿಮಾ ನಿರ್ದೇಶಕ ಸುನಿ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

Shwetha Srivatsav
ಶ್ವೇತಾ ಶ್ರೀವಾತ್ಸವ್​​

ಶ್ವೇತಾ ಶ್ರೀವಾತ್ಸವ್ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟಿ. ಫೇರ್ ಆ್ಯಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು ಶ್ವೇತಾ.

'ರಹದಾರಿ' ಚಿತ್ರಕ್ಕೆ ಕ್ಲ್ಯಾಪ್ ಮಾಡಿದ ಸಿಂಪಲ್ ಸುನಿ

ಸಿನಿಮಾಗೆ ಬರುವ ಮುನ್ನವೇ ಮದುವೆ ಆಗಿದ್ದ ಶ್ವೇತಾ, ಕೆಲವು ಸಿನಿಮಾಗಳಲ್ಲಿ ನಟಿಸಿದ ನಂತರ ಹೆಣ್ಣು ಮಗುವಿನ ತಾಯಿಯಾಗಿದ್ದರಿಂದ 3 ವರ್ಷಗಳ ಕಾಲ ನಟನೆಯಿಂದ ದೂರ ಉಳಿದಿದ್ದರು. ಇದೀಗ 'ರಹದಾರಿ' ಸಿನಿಮಾದ ಮೂಲಕ ಶ್ವೇತಾ ಸ್ಯಾಂಡಲ್​​​ವುಡ್​​​ಗೆ ವಾಪಸಾಗಿದ್ದಾರೆ. ಈ ಸಿನಿಮಾದ ಮುಹೂರ್ತ ನಿನ್ನೆ ಮಲ್ಲೇಶ್ವರಂನ ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ ಜರುಗಿತು. 'ಸಿಂಪಲ್ಲಾಗ್ ಒಂದ್ ಲವ್' ಸ್ಟೋರಿ ಸಿನಿಮಾ ನಿರ್ದೇಶಕ ಸುನಿ ಈ ಚಿತ್ರಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ. ಇದೊಂದು ರಾಬರಿ, ಕ್ರೈಂ ಥ್ರಿಲ್ಲರ್​​ ಕಥೆಯ ಸಿನಿಮಾವಾಗಿದ್ದು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಶ್ವೇತಾ ಮಿಂಚಲಿದ್ದಾರೆ. ಕಿರುತೆರೆ ನಟಿ ಸುಪ್ರಿತಾ ಸತ್ಯ ನಾರಾಯಣ್ ಕೂಡಾ ಪೂಜೆಯಲ್ಲಿ ಭಾಗಿಯಾಗಿದ್ದರು. 'ಒಂದ್ ಕಥೆ ಹೇಳ್ಲಾ' ಸಿನಿಮಾ ಖ್ಯಾತಿಯ ಗಿರೀಶ್ ಜಿ. ವೈರಮುಡಿ ಈ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳುತ್ತಿದ್ದಾರೆ. ಮುಕ್ತಾಂಬ ಬಸವರಾಜು ಮತ್ತು ಶಾಮನೂರು ಮಂಜುನಾಥ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆ ಆಗಿದ್ದು ಮುಂದಿನ ವರ್ಷದಿಂದ 'ರಹದಾರಿ' ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ರಹದಾರಿ
Intro:Body:ಸೂಪರ್ ಕಾಪ್ ಶ್ವೇತಾ ಶ್ರೀವಾತ್ಸವ್ ಗೆ ನಿರ್ದೇಶಕ ಸುನಿ ಸಾಥ್!!

ಸಿಂಪಲ್ಲಾಗ್ ಒಂದು ಲವ್ ಲವ್ ಸ್ಟೋರಿ ಮೂಲಕ, ಕನ್ನಡ ಚಿತ್ರರಂಗದಲ್ಲಿ, ಗುರುತಿಸಿಕೊಂಡ ನಟಿ ಶ್ವೇತಾ ಶ್ರೀವಾತ್ಸವ್.. ಫೇರ್ ಅಂಡ್ ಲವ್ಲಿ, ಕಿರಗೂರಿನ ಗಯ್ಯಾಳಿಗಳು, ಸೇರಿದಂತೆ ಹಲವು ಸಿನಿಮಾಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡವರು.ಸಿನಿಮಾ ಬರೋದಿಕ್ಕಿಂತ ಮುಂಚೆ ಮದುವೆ ಆಗಿದ್ದ, ಹಲವು ಸಿನಿಮಾಗಳ ನಂತ್ರ ಹೆಣ್ಣು ಮಗುವಿನ ತಾಯಿಯಾಗಿದ್ರು. ಇದೀಗ ರಹದಾರಿ ಸಿನಿಮಾದ ಮೂಲಕ ಶ್ವೇತಾ ಶ್ರೀವಾತ್ಸವ್ ಕಂ ಬ್ಯಾಕ್ ಮಾಡಿದ್ದಾರೆ.ಈ ಸಿನಿಮಾದ ಮುಹೂರ್ತ ಮಲ್ಲೇಶ್ವರಂ ಕಾಡು ಮಲ್ಲೇಶ್ವರಂ ದೇವಸ್ಥಾನದಲ್ಲಿ, ಪೂಜೆ ಮಾಡಲಾಯಿತು.. ಸಿಂಪಲ್ಲಾಗಿ ಒಂದ್ ಲವ್ ಸ್ಟೋರಿ ಸಿನಿಮಾ ನಿರ್ದೇಶಕ ಸುನಿ ಈ ಚಿತ್ರಕ್ಕೆ ಕ್ಲಾಪ್ ಮೂಲಕ ಶುಭಾ ಹಾರೈಯಿಸಿದ್ದಾರೆ..ಇದೊಂದು ರಾಬರಿ, ಕ್ರೈಂ ಥ್ರಿಲ್ಲರ್​​ ಕಥೆಯ ಸಿನಿಮಾವಾಗಿದ್ದು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಶ್ವೇತಾ ಮಿಂಚಲಿದ್ದಾರೆ. ವಿಶೇಷ ಅಂದ್ರೆ ಇದೀಗ ಟೀಮ್​ಗೆ ಹೊಸ ಅತಿಥಿಯಾಗಿ ಕಿರುತೆರೆ ನಟಿ ಸುಪ್ರಿತಾ ಸತ್ಯ ನಾರಾಯಣ್ ಕೂಡ ಪೂಜೆಯಲ್ಲಿ ಭಾಗಿಯಾಗಿದ್ದರು.. ಒಂದ್ ಕಥೆ ಹೇಳ್ಲಾ ಸಿನಿಮಾ ಖ್ಯಾತಿಯ ಗಿರೀಶ್ ಜಿ. ವೈರಮುಡಿ ಚಿತ್ರಕ್ಕೆ ಆ್ಯಕ್ಷನ್ ಕಟ್​ ಹೇಳ್ತಿದ್ದಾರೆ. ಮುಕ್ತಾಂಬಾ ಬಸವರಾಜು ಮತ್ತು ಶಾಮನೂರು ಮಂಜುನಾಥ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.. ಎಪ್ಪತ್ತರ ದಶಕದಲ್ಲಿ ನಡೆಯುವ ಕಥೆಯಾದ್ದರಿಂದ, ಮುಂದಿನ ವರ್ಷದಿಂದ ರಹದಾರಿ ಸಿನಿಮಾ ಶೂಟಿಂಗ್ ಸ್ಟಾರ್ಟ್ ಆಗಲಿದೆ..

ಬೈಟ್: ಸುನಿ, ನಿರ್ದೇಶಕ
ಶ್ವೇತಾ ಶ್ರೀವಾತ್ಸವ್, ನಟಿ
ಗಿರೀಶ್ ವೈರಮುಡಿ, ನಿರ್ದೇಶಕConclusion:

ABOUT THE AUTHOR

...view details