ಕರ್ನಾಟಕ

karnataka

ಹತ್ತು ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ ಸ್ಯಾಂಡಲ್​​ವುಡ್ ಅಧ್ಯಕ್ಷ

By

Published : Nov 23, 2021, 5:59 PM IST

ನಟ ಶರಣ್​ ಹಾಗೂ ಆಶಿಕಾ ರಂಗನಾಥ್​ ಅಭಿನಯದ 'ಅವತಾರ ಪುರುಷ' ಸಿನಿಮಾ ಇದೇ ಡಿಸೆಂಬರ್​ 10 ರಂದು ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿದೆ.

sharan new movie avatara purusha  to be release in december
ಶರಣ್​ ಅಭಿನಯದ ಅವತಾರ ಪುರುಷ

'ಅವತಾರ ಪುರುಷ' ಕನ್ನಡ ಚಿತ್ರರಂಗದಲ್ಲಿ ಟೈಟಲ್ ಹಾಗು ಟೀಸರ್​​ನಿಂದಲೇ ಟಾಕ್ ಆಗುತ್ತಿರುವ ಸಿನಿಮಾ. ಸ್ಯಾಂಡಲ್​ವುಡ್ ಅಧ್ಯಕ್ಷ ಅಂತಾ ಕರೆಸಿಕೊಂಡಿರುವ ಶರಣ್, ಹತ್ತಾರು ಅವತಾರದಲ್ಲಿ ಅಭಿನಯಿಸಿರೋ ಸಿನಿಮಾ‌. ಇತ್ತೀಚೆಗಷ್ಟೇ ಅವತಾರ ಪುರುಷ ಸಿನಿಮಾದ ಹೈಲೆಟ್ಸ್ ಬಗ್ಗೆ ಮಾಧ್ಯಮಗೋಷ್ಠಿ ಮಾಡುವ ಮೂಲಕ ಚಿತ್ರತಂಡ ಬಿಡುಗಡೆ ಡೇಟ್ ಅನೌನ್ಸ್​ ಮಾಡಿತ್ತು.

ಮೊದಲಿಗೆ ಮಾತನಾಡಿದ ಶರಣ್, ನಾನು ಈವರೆಗೂ ಈ ರೀತಿಯ ಚಿತ್ರ ಮಾಡಿಲ್ಲ.. ನನ್ನ ಈವರೆಗಿನ ಸಿನಿಪಯಣದಲ್ಲೇ ದೊಡ್ಡ ಬಜೆಟ್ ಚಿತ್ರವಿದು. ಇಂತಹ ಅದ್ಧೂರಿ ಚಿತ್ರ ನಿರ್ಮಾಣಕ್ಕೆ ಮುಂದಾದ ನಿರ್ಮಾಪಕ ಪುಷ್ಕರ್ ಅವರ ಧೈರ್ಯ ಮೆಚ್ಚಲೇಬೇಕು. ನಿರ್ದೇಶಕ‌ ಸಿಂಪಲ್ ಸುನಿ‌, ಅವರ ಹೆಸರಿನಲ್ಲಿ ಮಾತ್ರ ಸಿಂಪಲ್ ಇಲ್ಲ. ಸಿಂಪಲೆಸ್ಟ್ ಸುನಿ ಅವರು. ಅವರ ಕಾರ್ಯವೈಖರಿ ಬಗ್ಗೆ ಎಷ್ಟು ಹೇಳಿದರು ಕಡಿಮೆ ಎಂದು ಹಾಡಿಹೊಗಳಿದರು. ನಾಯಕಿ ಆಶಿಕಾ ರಂಗನಾಥ್ ಸೇರಿದಂತೆ ಈ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ‌ ಸೊಗಸಾಗಿ ‌ಮೂಡಿಬಂದಿದೆ. ನಾನು ಸುಮಾರು 10 ಅವತಾರಗಳಲ್ಲಿ ಅಭಿನಯಿಸಿದ್ದೇನೆ ಅಂತಾ ಹೇಳಿದರು.

ನಟ ಶರಣ್​​ ಮತ್ತು ಆಶಿಕಾ ರಂಗನಾಥ್

ಚಿತ್ರದಲ್ಲಿ ಶರಣ್ ಜೊತೆ ರೊಮ್ಯಾನ್ಸ್ ಮಾಡಿರುವ ಆಶಿಕಾ ರಂಗನಾಥ್ ಮಾತನಾಡಿ, ಅವತಾರ ಪುರುಷ ಚಿತ್ರದಲ್ಲಿ ಒಬ್ಬಳಾಗಿರೋದು ಖುಷಿಯ ವಿಚಾರ. ಶರಣ್ ಹಾಗೂ ಸುನಿ ಅವರ ಕಾಂಬಿನೇಶನಲ್ಲಿ ಈ ಚಿತ್ರ ಹೇಗೆ ಬರಬಹುದು? ಎಂಬ ಕುತೂಹಲ ಇದೆ. ನಾನು ಚಿತ್ರ ವೀಕ್ಷಿಸುವ ಕಾತರದಲ್ಲಿದ್ದೀನಿ. ನಿರ್ದೇಶಕ ಸುನಿ ಹಾಗೂ ನಿರ್ಮಾಪಕ ಪುಷ್ಕರ್ ಅವರ ಸರಳತೆ ಬಗ್ಗೆ ಎಷ್ಟು ಹೇಳಿದರು ಕಡಿಮೆ. ಒಟ್ಟಿನಲ್ಲಿ ಉತ್ತಮ ಸಿನಿಮಾದಲ್ಲಿ ಅಭಿನಯಿಸಿದ ತೃಪ್ತಿಯಿದೆ. ಜನರು ಕೂಡ ಮೆಚ್ಚಿಕೊಳ್ಳುತ್ತಾರೆ ಎಂಬ ಭರವಸೆಯಿದೆ ಎಂದರು ಆಶಿಕಾ ರಂಗನಾಥ್.

ನಿರ್ದೇಶಕ ಸಿಂಪಲ್​ ಸುನಿ, ನಿರ್ಮಾಪಕ ಪುಷ್ಕರ್​ ಮಲ್ಲಿಕಾರ್ಜುನ​

ನಿರ್ದೇಶಕ ನಿರ್ದೇಶಕ ಸಿಂಪಲ್ ಸುನಿ ಹೇಳುವ ಹಾಗೆ, ನಾನು ವೆಬ್ ಸಿರೀಸ್ ಗೆ ಅಂತಾ ಮಾಡಿದ ಕಥೆಯಿದು. ಪುಷ್ಕರ್ ಅವರು ಈ ಕಥೆ ಕೇಳಿ, ವೆಬ್ ಸಿರೀಸ್ ಬೇಡ, ಸಿನಿಮಾ ಮಾಡೋಣ ಅಂದರು. ಎರಡು ಭಾಗಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಮೊದಲ ಭಾಗ ಡಿಸೆಂಬರ್ 10ರಂದು ಬಿಡುಗಡೆಯಾಗಲಿದೆ. ಎರಡನೇ ಭಾಗದ ಚಿತ್ರೀಕರಣ ಬಹುತೇಕ ಮುಗಿದಿದೆ. ನಿರ್ದೇಶಕನಿಗೆ ಸಿನಿಮಾ ಬಗ್ಗೆ ತನ್ನದೇ ಆದ ಒಂದು ಇಮ್ಯಾಜಿನೇಶನ್ ಇರುತ್ತದೆ. ಆದರೆ ಇಮ್ಯಾಜಿನೇಶನ್​​ಗೂ ಮೀರಿ " ಅವತಾರ ಪುರುಷ'' ಚಿತ್ರ ಬಂದಿದೆ ಎಂದರು.

ಶರಣ್ ಹಾಗು ಆಶಿಕಾ ರಂಗನಾಥ್ ಅವರ ಜೋಡಿ ನೋಡುಗರನ್ನು ಮೋಡಿ ಮಾಡಲಿದೆ. ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಭವ್ಯ, ಸುಧಾರಣಿ, ಮುಂತಾದ ಅನುಭವಿ ಕಲಾವಿದರು ನಮ್ಮ ಚಿತ್ರದಲ್ಲಿ ನಟಿಸಿದ್ದಾರೆ. ವಿಜಯ್ ಚೆಂಡೂರ್ ನಟನೆಯೊಂದಿಗೆ ಸ್ಕ್ರಿಪ್ಟ್ ವರ್ಕ್​​ನಲ್ಲೂ ನೆರವಾಗಿದ್ದಾರೆ. ಅರ್ಜುನ್ ಜನ್ಯ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ವಿಲಿಯಂ ಡೇವಿಡ್ ಅವರ ಛಾಯಾಗ್ರಹಣ "ಅವತಾರ ಪುರುಷ"ನ ಅಂದವನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಚಿತ್ರದ ಬಗ್ಗೆ ಕುತೂಹಲ ಹೆಚ್ಚಿಸಿದರು.

ಈ‌ ಚಿತ್ರವನ್ನ ಬಹಳ ಇಷ್ಟ ಪಟ್ಟು ನಿರ್ಮಾಣ ಮಾಡಿರುವ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ ಮಾತನಾಡಿ, ನನ್ನ ಪ್ರಕಾರ ಆಪ್ತಮಿತ್ರ ನಂತರ ಕನ್ನಡದಲ್ಲಿ ಬರುತ್ತಿರುವ ಸಿನಿಮಾ ಅವತಾರ ಪುರುಷ. ಹತ್ತು, ಹದಿನೈದು ವರ್ಷಗಳಲ್ಲಿ ಈ ರೀತಿಯ ಸಿನಿಮಾ ಬಂದಿಲ್ಲ ಅನಿಸುತ್ತದೆ. ನಾಯಕ ಶರಣ್, ನಾಯಕಿ ಆಶಿಕಾ ರಂಗನಾಥ್ ಹಾಗೂ ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಎಲ್ಲಾ ಕಲಾವಿದರ ಸಹಕಾರದಿಂದ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದ್ರು.

ಪುಷ್ಕರ್ ಫಿಲಂಸ್ ಲಾಂಛನದಲ್ಲಿ ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಿಸಿರುವ ಅವತಾರ ಪುರುಷ ಚಿತ್ರ ಇದೇ ಡಿಸೆಂಬರ್ 10ರಂದು ಸುಮಾರು 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ಭಾಗ-1 ಬಿಡುಗಡೆಯಾದ ನೂರನೇ ದಿನಕ್ಕೆ ಅವತಾರ ಪುರುಷ ಭಾಗ-2 ತೆರೆಗೆ ಬರಲಿದೆ.

ABOUT THE AUTHOR

...view details