ಕರ್ನಾಟಕ

karnataka

ಅಯೋಗ್ಯ ನಂತರ ರಚಿತಾ ಜೊತೆ 'ಮ್ಯಾಟ್ನಿ' ನೋಡಲು ಬರುತ್ತಿದ್ದಾರೆ ಸತೀಶ್ ನೀನಾಸಂ

By

Published : Oct 3, 2020, 2:21 PM IST

ಲಾಕ್​ಡೌನ್ ದಿನಗಳಲ್ಲಿ ಸತೀಶ್ ನೀನಾಸಂ ಸಾಕಷ್ಟು ಕಥೆಗಳನ್ನು ಕೇಳಿದ್ದು ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ. 'ಅಯೋಗ್ಯ' ನಂತರ ಮತ್ತೆ ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ 'ಮ್ಯಾಟ್ನಿ' ಚಿತ್ರದಲ್ಲಿ ಇಬ್ಬರೂ ನಟಿಸುತ್ತಿದ್ದಾರೆ.

Matney movie
ಸತೀಶ್ ನೀನಾಸಂ

ಕನ್ನಡ ಚಿತ್ರರಂಗದಲ್ಲಿ ಪೈಸಾ ವಸೂಲ್ ಹೀರೋ ಎಂದು ಕರೆಸಿಕೊಂಡಿರುವ ನಟ ಸತೀಶ್ ನೀನಾಸಂ. ಅಯೋಗ್ಯ ಹಾಗೂ ಬ್ರಹ್ಮಚಾರಿ ಸಿನಿಮಾಗಳ ಯಶಸ್ಸಿನ ಬಳಿಕ ಸತೀಶ್ ನೀನಾಸಂಗೆ ಭಾರೀ ಡಿಮ್ಯಾಂಡ್​​​ ಶುರುವಾಗಿದೆ. ಲಾಕ್​ಡೌನ್ ಸಮಯದಲ್ಲೂ ಅನೇಕ ಕಥೆಗಳನ್ನು ಕೇಳಿದ್ದ ಸತೀಶ್ ನೀನಾಸಂ ಇದೀಗ ಬ್ಯಾಕ್​ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

ಸತೀಶ್ ನೀನಾಸಂ ಹೊಸ ಚಿತ್ರ 'ಮ್ಯಾಟ್ನಿ'

'ಪೆಟ್ರೋಮ್ಯಾಕ್ಸ್' ಬಳಿಕ ಮತ್ತೊಂದು ವಿಭಿನ್ನ ಟೈಟಲ್ ಹೊಂದಿರುವ 'ಮ್ಯಾಟ್ನಿ' ಎಂಬ ಸಿನಿಮಾಗೆ ಸತೀಶ್ ನೀನಾಸಂ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ‌‌. ರಾಮ್​​​​​​​ಗೋಪಾಲ್ ವರ್ಮಾ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿರುವ ಮನೋಹರ್ ಕಂಪಳ್ಳಿ ಎಂಬುವವರು ಈ 'ಮ್ಯಾಟ್ನಿ' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ‌. ಈ ಮ್ಯಾಟ್ನಿ ಶೀರ್ಷಿಕೆಗೂ ಚಿತ್ರರಂಗಕ್ಕೂ ದೊಡ್ಡ ಇತಿಹಾಸ ಇದೆ‌. ಚಿತ್ರರಂಗದ ಆರಂಭದ ದಿನಗಳಿಂದಲೂ ಮ್ಯಾಟ್ನಿ ಎಂಬ ಪದ ಸ್ಯಾಂಡಲ್​​​​ವುಡ್​​​​​​​​​ನಲ್ಲಿ ಕೇಳಿ ಬರುತ್ತಿದೆ‌. ಮಾರ್ನಿಂಗ್ ಶೋ, ಮ್ಯಾಟ್ನಿ ಶೋ ಎಂಬ ಪದಗಳನ್ನು ನೀವು ಕೇಳಿದ್ದೀರಿ. ಈಗ ಇದೇ ಹೆಸರಲ್ಲಿ ಸಿನಿಮಾ ತಯಾರಾಗುತ್ತಿದೆ. ಇದು ಕಾಮಿಡಿ, ಥ್ರಿಲ್ಲರ್ ಸಿನಿಮಾ ಎನ್ನಲಾಗಿದೆ.

ರಚಿತಾ ರಾಮ್ ಹೊಸ ಚಿತ್ರ 'ಮ್ಯಾಟ್ನಿ'

ಅಯೋಗ್ಯ ಬಳಿಕ ಡಿಂಪಲ್ ಕ್ವೀನ್ ರಚಿತಾ ರಾಮ್, ಸತೀಶ್ ನೀನಾಸಂಗೆ ಜೊತೆಯಾಗುತ್ತಿರುವುದು ವಿಶೇಷ. ಇಂದು ರಚಿತಾ ರಾಮ್ ಹುಟ್ಟುಹಬ್ಬವಾಗಿದ್ದು ನಿರ್ದೇಶಕ ಮನೋಹರ್ ಈ ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ. ಎಸ್​. ಸವಿತ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಹಾಡುಗಳಿಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದು, ಕ್ರಾಂತಿ ಕ್ಯಾಮರಾ ವರ್ಕ್ ಮಾಡುತ್ತಿದ್ದಾರೆ. ಈ ಸಿನಿಮಾ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟ ಆಗಲಿದೆ ಎಂದು ಸತೀಶ್ ನೀನಾಸಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಉಳಿದ ತಾರಾಬಳಗದ ಬಗ್ಗೆ ಶೀಘ್ರದಲ್ಲೇ ಮಾಹಿತಿ ದೊರೆಯಲಿದೆ.

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿ ಇರುವ ಸತೀಶ್ ನೀನಾಸಂ

ABOUT THE AUTHOR

...view details