ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಕೆಜಿಎಫ್-2 ಟೀಸರ್ ಒಂದೇ ವಾರದಲ್ಲಿ ಬರೋಬ್ಬರಿ 149 ಮಿಲಿಯನ್ ವೀಕ್ಷಣೆಯಾಗಿ ದಾಖಲೆ ಬರೆದಿದೆ. ಕೆಜಿಎಫ್ ಸಿನಿಮಾ ಮುಂದೆ ಅದೆಷ್ಟೋ ಸಿನಿಮಾಗಳ ದಾಖಲೆಗಳು ಗಾಳಿಗೆ ತೂರಿ ಹೋಗಿವೆ. ಇದೇ ಹಿನ್ನೆಲೆಯಲ್ಲಿ ನಿರ್ದೇಶಕ ರಾಮ್ಗೋಪಾಲ್ ವರ್ಮಾ ರಾಜಮೌಳಿಗೆ ಸಖತ್ ಟಾಂಗ್ ಕೊಟ್ಟಿದ್ದಾರೆ.
ಯಶ್ಗೆ ಸಲ್ಯೂಟ್ ಹೇಳಿ ರಾಜಮೌಳಿಗೆ ಟಾಂಗ್ ಕೊಟ್ಟ ಆರ್ಜಿವಿ!
ಕಳೆದ ಎರಡು ವರ್ಷದ ಹಿಂದಿನವರೆಗೆ ಭಾರತದಲ್ಲಿ ಬಾಲಿವುಡ್ ಮಾತ್ರವಲ್ಲ ದಕ್ಷಿಣ ಚಿತ್ರರಂಗದಲ್ಲೂ ಕೂಡ ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದ್ರೆ ಈಗ ಸ್ಯಾಂಡಲ್ವುಡ್ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದ ಯಶ್ ಮತ್ತು ಪ್ರಶಾಂತ್ ನೀಲ್ಗೆ ಸಲ್ಯೂಟ್ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಕಳೆದ ಎರಡು ವರ್ಷದ ಹಿಂದಿನವರೆಗೆ ಭಾರತದಲ್ಲಿ ಬಾಲಿವುಡ್ ಮಾತ್ರವಲ್ಲ, ದಕ್ಷಿಣ ಚಿತ್ರರಂಗದಲ್ಲೂ ಕೂಡ ಕನ್ನಡ ಇಂಡಸ್ಟ್ರಿಯನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಆದ್ರೆ ಈಗ ಸ್ಯಾಂಡಲ್ವುಡ್ ವಿಶ್ವದ ಭೂಪಟದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಕಾರಣರಾದ ಯಶ್ ಮತ್ತು ಪ್ರಶಾಂತ್ ನೀಲ್ಗೆ ಸಲ್ಯೂಟ್ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿರುವ ನಿರ್ದೇಶಕ, ಬಾಹುಬಲಿ-2 ಸಿನಿಮಾದ ಟ್ರೈಲರ್ 11 ಕೋಟಿ ವೀಕ್ಷಣೆಯಾಗಲು ಬರೋಬ್ಬರಿ ಮೂರು ವರ್ಷಗಳನ್ನೇ ತೆಗೆದುಕೊಂಡಿದೆ. ಆರ್ ಆರ್ ಆರ್ ಸಿನಿಮಾ ಟೀಸರ್ 3.8 ಕೋಟಿ ವೀಕ್ಷಣೆ ಪಡೆಯಲು 3 ತಿಂಗಳು ತೆಗೆದುಕೊಂಡಿದೆ. ಆದ್ರೆ ಕೆಜಿಎಫ್- 2 ಟೀಸರ್ ಬರೀ ಮೂರು ದಿನದಲ್ಲಿ 14 ಕೋಟಿ ವೀಕ್ಷಣೆ ಕಂಡಿದೆ ಎಂದು ನೇರಾ ನೇರವಾಗಿ ಬಾಹುಬಲಿ ನಿರ್ದೇಶಕ ರಾಜಮೌಳಿಗೆ ರಾಮ್ ಗೋಪಾಲ್ವರ್ಮ ಟಾಂಗ್ ಕೊಟ್ಟಿದ್ದಾರೆ.