ಕರ್ನಾಟಕ

karnataka

ನಾನು ಬದುಕಿರುವುದು ಸುದೀಪ್ ಮತ್ತು ನನ್ನ ಮಗಳಿಂದ: ನಿರ್ಮಾಪಕ ಸೂರಪ್ಪ ಬಾಬು

By

Published : Oct 24, 2021, 7:05 AM IST

ಅಕ್ಟೋಬರ್ 15 ರಂದು ದೇಶಾದ್ಯಂತ ತೆರೆ ಕಂಡು ಪ್ರದರ್ಶನ ಕಾಣುತ್ತಿರುವ 'ಕೋಟಿಗೊಬ್ಬ 3' ಕೇವಲ ನಾಲ್ಕು ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 40 ಕೋಟಿ ರೂ ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಇದೆ.

ಸೂರಪ್ಪ ಬಾಬು
ಸೂರಪ್ಪ ಬಾಬು

ಕಿಚ್ಚ ಸುದೀಪ್ ಅಭಿನಯ ಹಾಗೂ ಶಿವ ಕಾರ್ತಿಕ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ 'ಕೋಟಿಗೊಬ್ಬ 3' ರಿಲೀಸ್​ ವಿಳಂಬವಾದರೂ ಬಾಕ್ಸ್​ ಆಫೀಸ್​ನಲ್ಲಿ ಒಳ್ಳೆಯ ಕಲೆಕ್ಷನ್​ ಮಾಡುತ್ತಿದೆ.

ಚಿತ್ರ ದೇಶಾದ್ಯಂತ ತೆರೆ ಕಂಡು ರಾಜ್ಯದಲ್ಲೂ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಚಿತ್ರತಂಡ ಖಾಸಗಿ ಹೊಟೇಲ್​ನಲ್ಲಿ ಸಕ್ಸಸ್ ಮೀಟ್‌ ಹಮ್ಮಿಕೊಂಡಿತ್ತು.

'ಕೋಟಿಗೊಬ್ಬ 3' ಕುರಿತು ನಿರ್ಮಾಪಕ ಸೂರಪ್ಪ ಬಾಬು ಅನಿಸಿಕೆ

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ನಿರ್ಮಾಪಕ ಸೂರಪ್ಪ, 'ನನ್ನ 35 ವರ್ಷದ ಸಿನಿಮಾ ಅನುಭವದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ಸ್ಟಾರ್ ನಟನ ಸಿನಿಮಾ ಅನೌಂಸ್ ಮಾಡಿದ ಡೇಟ್​ಗೆ ಬಿಡುಗಡೆ ಆಗಲಿಲ್ಲ. ಈ ಬಗ್ಗೆ ನನಗೆ ಬೇಸರ ಇದೆ. ನಾನು ಇವತ್ತು ಈ ಸ್ಟೇಜ್ ಮೇಲೆ ಇದ್ದೀನಿ ಅಂದ್ರೆ ಅದಕ್ಕೆ ಸುದೀಪ್ ಮತ್ತು ನನ್ನ ಮಗಳು ಕಾರಣ. ನನ್ನ ಕಷ್ಟ ಕಾಲದಲ್ಲಿ ಸುದೀಪ್ ಹಾಗೂ ಅವರ ತಂದೆ-ತಾಯಿ ಕೂಡ ಸಪೋರ್ಟ್ ಮಾಡಿದ್ದಾರೆ. ನಾನು ಸಾಯುವವರೆಗೂ ಅವರ ಸಹಾಯ ಮರೆಯಲಾರೆ' ಎಂದರು.

ಸುದೀಪ್ ಹಾಗು ಸೂರಪ್ಪಬಾಬು ನಡುವೆ ಮನಸ್ತಾಪ ಇದೆ ಎನ್ನವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 'ನಮ್ಮ ನಡುವೆ ಆ ರೀತಿಯ ಯಾವುದೇ ಮನಸ್ತಾಪ ಇಲ್ಲ. ಯಾಕಂದ್ರೆ ಸುದೀಪ್​ ಅವರು ಬಾಲಿವುಡ್​ನಲ್ಲಿ ಅಮಿತಾಬ್ ಬಚ್ಚನ್ ಹಾಗು ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿ ಬಂದಿದ್ದಾರೆ. ಅಂತಹ ನಟನ ಜೊತೆ ನಾನು ಕೆಲಸ ಮಾಡಿರೋ ಅಭಿಮಾನ ಇದೆ‌' ಎಂದರು.

ABOUT THE AUTHOR

...view details