ಕರ್ನಾಟಕ

karnataka

'ಶೋಕಿವಾಲ' ಚಿತ್ರಕ್ಕೆ ಗಾಯಕರಾದರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್

By

Published : Jan 31, 2022, 12:25 PM IST

ಶೋಕಿವಾಲ ಚಿತ್ರ ತಂಡವು ಇದೀಗ 'ನೀನು ನಾಟಿ ಕೋಳಿ ನಾನು ನಾಟಿ ಹುಂಜ' ಎಂಬ ಹಾಡನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. 'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ನಟ ಅಜಯ್ ರಾವ್ ಜೊತೆ 'ಸಲಗ' ಸಿನಿಮಾ ಖ್ಯಾತಿಯ ಸಂಜನಾ ಆನಂದ್ ಜೋಡಿಯಾಗಿದ್ದಾರೆ.

music-director-sridhar-sambhram-sing-a-song-for-shokiwala
ಗಾಯಕರಾದ್ರು ಸಂಗೀತ ನಿರ್ದೇಶಕ ಶ್ರೀಧರ್ ಸಂಭ್ರಮ್

'ಲವ್ ಯು ರಚ್ಚು' ಬಳಿಕ ಅಜಯ್ ರಾವ್ ಅಭಿನಯದ 'ಶೋಕಿವಾಲ' ಕನ್ನಡ ಚಿತ್ರರಂಗದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನೆಮಾ. ಟೈಟಲ್ ಹಾಗೂ ಟೀಸರ್​​ನಿಂದ ಗಾಂಧಿನಗರದಲ್ಲಿ ಗಮನ ಸೆಳೆಯುತ್ತಿರುವ ಈ ಚಿತ್ರವು ಬಹುತೇಕ ಚಿತ್ರೀಕರಣ ಮುಗಿಸಿ ಬಿಡುಗಡೆಗೆ ಸಜ್ಜಾಗಿದೆ.

ಚಿತ್ರ ತಂಡವು ಇದೀಗ 'ನೀನು ನಾಟಿ ಕೋಳಿ ನಾನು ನಾಟಿ ಹುಂಜ' ಎಂಬ ಹಾಡು ಬಿಡುಗಡೆ ಮಾಡಲು ರೆಡಿಯಾಗಿದೆ. ನಿರ್ದೇಶಕ ಜಾಕಿ ನಿರ್ದೇಶನ ಮಾಡಿರುವ ಶೋಕಿವಾಲ ಚಿತ್ರಕ್ಕೆ ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಮ್ಯೂಸಿಕ್ ನೀಡುವುದರ ಜೊತೆಗೆ ಮೊದಲ ಬಾರಿಗೆ ಹಾಡಿದ್ದಾರೆ. ಅಲ್ಲದೇ, ಜೋಗಿ ಸುನೀತ ಅವರು ಕೂಡ ಹಾಡೊಂದಕ್ಕೆ ಧ್ವನಿಗೂಡಿಸಿದ್ದಾರೆ. ಕನ್ನಡ ಗೀತೆಯನ್ನು ಡಾ. ವಿ. ನಾಗೇಂದ್ರ ಪ್ರಸಾದ್ ಬರೆದಿದ್ದು, ತೆಲುಗಿಗೆ ಗೌಸ್ಪಿರ್ ಸಾಹಿತ್ಯವಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಅಜಯ್ ರಾವ್ ಜೊತೆ 'ಸಲಗ' ಸಿನಿಮಾ ಖ್ಯಾತಿಯ ಸಂಜನಾ ಆನಂದ್ ಜೋಡಿಯಾಗಿದ್ದಾರೆ. 'ಶೋಕಿವಾಲ' ಪಕ್ಕಾ ಹಳ್ಳಿ ಸೊಗಡಿನ ಚಿತ್ರವಾಗಿದ್ದು, ಶರತ್ ಲೋಹಿತಾಶ್ವ, ಗಿರಿ, ತಬಲಾ ನಾಣಿ, ಮುನಿರಾಜ್, ಅರುಣ ಬಾಲರಾಜ್, ವಾಣಿ, ಚಂದನ, ಲಾಸ್ಯ, ನಾಗರಾಜಮೂರ್ತಿ ಸೇರಿದಂತೆ ಹಲವರು ನಟಿಸಿದ್ದಾರೆ. ಇದುವರೆಗೆ ಚನ್ನಪಟ್ಟಣ, ಶ್ರೀರಂಗಪಟ್ಟಣ, ಮಂಡ್ಯ,ಮೈಸೂರು, ತುಮಕೂರು, ಮಾಗಡಿಯ ಹಳ್ಳಿಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.

ಶ್ರೀಧರ್ ವಿ. ಸಂಭ್ರಮ್​ ಅವರ ಸಂಗೀತದಲ್ಲಿ ನಾಲ್ಕು ಹಾಡುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್, ಚೇತನ್ ಕುಮಾರ್ ಅವರ ಸಾಹಿತ್ಯ ಶೋಕಿವಾಲ ಚಿತ್ರಕ್ಕಿದೆ.

ಶೋಕಿವಾಲ ಶೂಟಿಂಗ್​

ಟಿ.ಆರ್​. ಚಂದ್ರಶೇಖರ್ ಈ ಸಿನಿಮಾ ನಿರ್ಮಾಣ ಮಾಡಿದ್ದು, ಸದ್ಯ ಸೆನ್ಸಾರ್​​ನಲ್ಲಿ ಪಾಸ್​ ಆಗಿರುವ 'ಶೋಕಿವಾಲ' ರಾಜ್ಯದ ಚಿತ್ರಮಂದಿರಗಳಲ್ಲಿ ಶೇ. 100ರಷ್ಟು ಪ್ರೇಕ್ಷಕರಿಗೆ ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಬಿಡುಗಡೆಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ:ಬಿಗ್​ ಬಾಸ್​ 15ರ ವಿಜೇತರಾಗಿ ಹೊರಹೊಮ್ಮಿದ ತೇಜಸ್ವಿ ಪ್ರಕಾಶ್​!

ABOUT THE AUTHOR

...view details