ಕರ್ನಾಟಕ

karnataka

ಅಪ್ಪ ಇದ್ದಕ್ಕಿದ್ದಂತೆ ಮನೆಯಲ್ಲಿ ಕುಸಿದುಬಿದ್ದರು... ಆ ಕಹಿ ಘಟನೆ ನೆನೆದ ಮೈಕಲ್​ ಮಧು ಪುತ್ರಿ

By

Published : May 14, 2020, 8:49 AM IST

Michael Madhu
ಮೈಕಲ್ ಮಧು ()

ಅನಾರೋಗ್ಯದಿಂದ ಬಳಲುತ್ತಿದ್ದ ಮೈಕಲ್ ಮಧು ಚಾಮರಾಜಪೇಟೆ ನಿವಾಸದಲ್ಲಿ ನಿನ್ನೆ ಕುಸಿದು ಬಿದ್ದಿದ್ದರು. ಕಿಮ್ಸ್​ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.

ಅಪ್ಪನ ಆರೋಗ್ಯ ಹಲವು ವರ್ಷಗಳಿಂದ ಸರಿ ಇರಲಿಲ್ಲ. ಲಾಕ್​ಡೌನ್​​ಗೂ ಮುಂಚೆ ಮಳವಳ್ಳಿಯಲ್ಲಿದ್ದರು. ಸಡಿಲಿಕೆಯಾದ ನಂತರ ಬೆಂಗಳೂರಿಗೆ ಬಂದಿದ್ದರು. ಇದ್ದಕ್ಕಿದ್ದಂತೆ ಅಪ್ಪ ಕಿರುಚಿಕೊಂಡು ಕುಸಿದುಬಿದ್ದರು. ತಕ್ಷಣವೇ ಕಿಮ್ಸ್​ ಆಸ್ಪತ್ರೆಗೆ ಸೇರಿಸಿದೆವು ಆದರೆ, ಅಷ್ಟರಲ್ಲಿ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು....

ಸ್ಯಾಂಡಲ್​ವುಡ್​​ನಲ್ಲಿ ತಮ್ಮ ವಿಚಿತ್ರ ಪೋಷಾಕು, ನಟನೆಯಿಂದ ಗಮನ ಸೆಳೆದಿದ್ದ ನಟ ಮೈಕಲ್​ ಮಧು ಅವರ ಸಾವಿನ ಕುರಿತು ಮಗಳು ನಯನ ಹೇಳಿದ್ದು ಹೀಗೆ.

ಅನಾರೋಗ್ಯದಿಂದ ಬಳಲುತ್ತಿದ್ದ ಮೈಕಲ್ ಮಧು ಚಾಮರಾಜಪೇಟೆ ನಿವಾಸದಲ್ಲಿ ನಿನ್ನೆ ಕುಸಿದು ಬಿದ್ದಿದ್ದರು. ಕಿಮ್ಸ್​ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.


ಇನ್ನು ಮಗಳು ನಯನ ಹೇಳುವ ಹಾಗೇ ಮೈಕಲ್ ಮಧುರವರ ಪಾರ್ಥಿವ ಶರೀರ ಕಿಮ್ಸ್ ಆಸ್ಪತ್ರೆಯಲ್ಲಿದ್ದು, ಇಂದು ಕುಟುಂಬಸ್ಥರ ಸಮ್ಮುಖದಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ ಮಾಡಲಾಗಿದೆ.

ಮಧು ಅವರು ಅಶ್ವಮೇಧ, ಶ್, ಲವ್ ಟ್ರೈನಿಂಗ್, ಓಂ, ಎ, ಸೂರ್ಯವಂಶ, ಯಜಮಾನ, ಯಮಲೋಕದಲ್ಲಿ ವೀರಪ್ಪನ್, ಹೀಗೆ ಬರೋಬ್ಬರಿ 300ರಕ್ಕೂ ಹೆಚ್ಚು ಸಿನಿಮಾಗಳಲ್ಲಿ ತಮ್ಮ ವಿಚಿತ್ರ ಮ್ಯಾನರಿಸಂನಿಂದ ಕನ್ನಡ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದ್ದಾರೆ.

ABOUT THE AUTHOR

...view details