ಕರ್ನಾಟಕ

karnataka

ಕರಾವಳಿ ಹುಡುಗರ "ಲುಂಗಿ" ಹಾಡುಗಳು ಬೊಂಬಾಟ್‌.. ಸಿನಿಮಾ ಕಥೆ ಇನ್ನೂ ಇಂಟ್ರೆಸ್ಟಿಂಗ್‌..

By

Published : Sep 24, 2019, 11:36 PM IST

ಲುಂಗಿ ಸಿನಿಮಾದ ಆಡಿಯೋ ಲಾಂಚ್​​ ಕಾರ್ಯಕ್ರಮ ಮಲ್ಲೇಶ್ವರಂನ ಎಸ್ ಆರ್ ವಿ ಥಿಯೇಟರ್​​ನಲ್ಲಿ ನಡೆದಿದ್ದು, ಕಾರ್ಯಕ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಚಿತ್ರದ ಆಡಿಯೋ ಹಾಗೂ ಒಂದು ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

ಕರಾವಳಿ ಹುಡುಗರ "ಲುಂಗಿ" ಹಾಡುಗಳು ಬಿಡುಗಡೆ

ಸದ್ಯ ಸ್ಯಾಂಡಲ್‌ವುಡ್​​ನಲ್ಲಿ ಕರಾವಳಿ ಹುಡುಗರ "ಲುಂಗಿ"ಯ ಕಾರುಬಾರು ಜೋರಾಗಿದೆ. ಟ್ರೈಲರ್​​​ನಿಂದಲೇ ಸಖತ್ ಸೌಂಡ್ ಮಾಡ್ತಿರುವ "ಲುಂಗಿ" ಚಿತ್ರ ಇದೀಗ ರಿಲೀಸ್​ಗೆ ರೆಡಿಯಾಗ್ತಿದ್ದು, ಚಿತ್ರತಂಡ ಆಡಿಯೋ ಲಾಂಚ್ ಮಾಡಿದೆ.

ಮಲ್ಲೇಶ್ವರಂನ ಎಸ್ ಆರ್ ವಿ ಥಿಯೇಟರ್​​ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಚಿತ್ರದ ಆಡಿಯೋ ಹಾಗೂ ಒಂದು ಲಿರಿಕಲ್ ವಿಡಿಯೋ ಸಾಂಗ್ ಲಾಂಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.

ಕರಾವಳಿ ಹುಡುಗರ "ಲುಂಗಿ" ಹಾಡುಗಳ ಬಿಡುಗಡೆ..

ಅಲ್ಲದೆ ನಾನು ಲುಂಗಿ ಚಿತ್ರದ ಅಫಿಶಿಯಲ್ ಪೇಜ್ ಶುರುವಾದಗಿನಿಂದಲೂ ಫಾಲೋ ಮಾಡ್ತಿದ್ದು. ಈ ಚಿತ್ರವನ್ನು ತುಂಬಾ ಡಿಫರೆಂಟ್ ಆಗಿ ಮಾಡಿದ್ದಾರೆ ಎಂದು ಚಿತ್ರತಂಡಕ್ಕೆ ಬೆನ್ನು ತಟ್ಟಿದ್ರು. ಇನ್ನು, ಈ ಚಿತ್ರವನ್ನು ಮುಖೇಶ್ ಹೆಗಡೆ ನಿರ್ಮಾಣ ಮಾಡಿದ್ದು, ಈ ಚಿತ್ರದ ಮೂಲಕ ತಮ್ಮ ಮಗ ಪ್ರಣವ್ ಹೆಗಡೆಯನ್ನು ಬೆಳ್ಳಿತೆರೆಗೆ ಪರಿಚಯಿಸಿದ್ದಾರೆ.

ಲುಂಗಿ ಚಿತ್ರವನ್ನು ಚಮಕ್ ಚಿತ್ರದಲ್ಲಿ ಸಿಂಪಲ್ ಸುನಿ ಜೊತೆ ಸಹಾಯಕ ನಿರ್ದೇಶಕನಾಗಿ ವರ್ಕ್ ಮಾಡಿದ್ದ ಅರ್ಜುನ್ ಲೂಯಿಸ್ ತನ್ನ ಸ್ನೇಹಿತ ಅಕ್ಷಿತ್ ಶೆಟ್ಟಿ ಜೊತೆ ಸೇರಿ ಆಕ್ಷನ್ ಕಟ್ ಹೇಳಿದ್ದಾರೆ. ಅಲ್ಲದೆ ಚಿತ್ರದ ಎಲ್ಲಾ ಹಾಡುಗಳನ್ನು ಅರ್ಜುನ್ ಲೂಯಿಸ್ ಬರೆದಿದ್ದಾರೆ‌‌. ಈ ಸಿನಿಮಾ ಪಕ್ಕಾ ಮಂಗಳೂರು ಶೈಲಿ ಚಿತ್ರವಾಗಿದ್ದು, ಪದವಿ ಮುಗಿಸಿದ ಮಧ್ಯಮ ವರ್ಗದ ಯುವಕನೊಬ್ಬ ಬ್ಯುಸಿನೆಸ್ ಮಾಡಲು ಹಣಕ್ಕೆ ಯಾವ ರೀತಿ ಪರದಾಡುತ್ತಾನೆ ಎಂಬುದನ್ನು ವಿಡಂಬನಾತ್ಮಕವಾಗಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.

ಚಿತ್ರದಲ್ಲಿ ಪ್ರಣವ್ ಹೆಗಡೆ, ಅಹಲ್ಯ ಸುರೇಶ್ ಹಾಗೂ ರಾಧಿಕ ರಾವ್ ನಟಿಸಿದ್ದಾರೆ. ಈ ಸಿನಿಮಾದಲ್ಲಿ ನಾಲ್ಕು ಹಾಡುಗಳಿದ್ದು ಪ್ರಸಾದ್ ಶೆಟ್ಟಿ ಸಂಗೀತ ನೀಡಿದ್ದಾರೆ.

Intro:ಸದ್ಯ ಸ್ಯಾಂಡಲ್ ವುಡ್ ನಲ್ಲಿ ಕರಾವಳಿ ಹುಡುಗರ" ಲುಂಗಿ" ಲುಂಗಿ ಚಿತ್ರದ ಕಾರು ಬಾರು ಜೋರಾಗಿದೆ.ಟ್ರೈಲರ್ ನಿಂದಲೇ ಸಖತ್ ಸೌಂಡ್ ಮಾಡ್ತಿರುವ "ಲುಂಗಿ" ಚಿತ್ರ ರಿಲೀಸ್ ಗೆ ರೆಡಿಯಾಗ್ತಿದ್ದು,ಚಿತ್ರತಂಡ ಚಿತ್ರದ ಆಡಿಯೋ ಲಾಂಚ್ ಮಾಡಿದೆ.ಮಲ್ಲೇಶ್ವರಂ ನ ಎಸ್ ಅರ್ ವಿ ಥಿಯೇಟರ್ ನಲ್ಲಿ ನಡೆದ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ನಿರ್ದೇಶಕ ಸಿಂಪಲ್ ಸುನಿ ಆಗಮಿಸಿ ಚಿತ್ರದ ಆಡಿಯೋ ಹಾಗೂ ಒಂದು ಲಿರಿಕಲ್ ವಿಡಿಯೋ ಸಾಂಗ್ ಲಾಚ್ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ರು.ಅಲ್ಲದೆ ನಾನು ಲುಂಗಿ ಚಿತ್ರದ ಅಫಿಶಿಯಲ್ ಪೇಜ್ ಅನ್ನು ಚಿತ್ರ ಶುರುವಾದಗಿನಿಂದಲೂ ಫಾಲೋ ಮಾಡ್ತಿದ್ದು.ಈ ಚಿತ್ರವನ್ನು ತುಂಭಾ ಡಿಫರೆಂಟ್ ಆಗಿ ಮಾಡಿದ್ದಾರೆ ಎಂದು ಚಿತ್ರತಂಡಕ್ಕೆ ಬೆನ್ನು ತಟ್ಟಿದ್ರು.ಇನ್ನೂ ಈ ಚಿತ್ರವನ್ನು ತುಳು ಚಿತ್ರರಂಗದಲ್ಲಿ ಯಶಸ್ವಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಮುಖೇಶ್ ಹೆಗಡೆ ಈ ಚಿತ್ದವನ್ನು ನಿರ್ಮಾಣ ಮಾಡಿದ್ದು,ಈ ಚಿತ್ರದ ಮೂಲಕ ತಮ್ನ ಮಗ ಪ್ರಣವ್ ಹೆಗಡೆಯನ್ನು ಬೆಳ್ಳಿತೆರೆಗೆ ಪರಿಚಯಿಸ್ತಿದ್ದಾರೆ.


Body:ಲುಂಗಿ ಚಿತ್ರವನ್ನು ಚಮಕ್ ಚಿತ್ರದಲ್ಲಿ ಸಿಂಪಲ್ ಸುನಿ ಜೊತೆ ಸಹಾಯಕ ನಿರ್ದೇಶಕನಾಗಿ ವರ್ಕ್ ಮಾಡಿದ್ದ ಅರ್ಜುನ್ ಲೂಯಿಸ್ ತನ್ನ ಸ್ನೇಹಿತ ಅಕ್ಷಿತ್ ಶೆಟ್ಟಿ ಜೊತೆ ಸೇರಿ ಆಕ್ಷನ್ ಕಟ್ ಹೇಳಿದ್ದಾರೆ.ಅಲ್ಲದೆ ಚಿತ್ರದ ಎಲ್ಲಾ ಹಾಡುಗಳನ್ನು ಅರ್ಜುನ್ ಲೂಯಿಸ್ ಬರೆದಿದ್ದಾರೆ‌‌.ಇನ್ನೂ ಲುಂಗಿ ಚಿತ್ರ ಪಕ್ಕಾ ಮಂಗಳೂರು ಶೈಲಿ ಚಿತ್ರವಾಗಿದ್ದು, ಪದವಿ ಮುಗಿಸಿದ ಮಧ್ಯಮವರ್ಗದ ಯುವಕನೋಬ್ಬ ಬ್ಯುಸಿನೆಸ್ ಮಾಡಲು ಹಣಕ್ಕೆ ಯಾವ ರೀತಿ ಪರದಾಡುತ್ತಾನೆ ಎಂಬುದನ್ನು ವಿಡಂಬನಾತ್ಮಕವಾಗಿ ಹೇಳಲು ನಿರ್ದೇಶಕರು ಪ್ರಯತ್ನಿಸಿದ್ದು.ಮಧ್ಯಮ ವರ್ಗದ ಯುವಕನ‌ವಪಾತ್ರದಲ್ಲಿ ಪ್ರಣವ್ ಹೆಗಡೆ ನಟಿಸಿದ್ದಾರೆ. ಅಲ್ಲದೆ ಪ್ರಣವ್ ಮೊದಲ ಚಿತ್ರದಲ್ಲಿ ಇಬ್ಬರು ನಾಯಕಿಯರ ಜೊತೆ ಡ್ಯುಯೆಟ್ ಆಡಿದ್ದು, ಚಿತ್ರದಲ್ಲಿ ಅಹಲ್ಯ ಸುರೇಶ್ ಹಾಗೂ ರಾಧಿಕ ರಾವ್ ನಟಿಸಿದ್ದಾರೆ.ಇನ್ನೂ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಪ್ರಸಾದ್ ಶೆಟ್ಟಿ ಸಂಗೀತ ನೀಡಿದ್ದು, ಚಿತ್ರದ ಹಾಡುಗಳು ಹೊಸತನದಿಂದ ಕೂಡಿದ್ದು ಕೇಳುಗರಿಗೆ ಮುದ ನೀಡೋದ್ರಲ್ಲಿ ಡೌಟ್ ಇಲ್ಲ.ಸದ್ಯ ಚಿತ್ರತಂಡ ಸಿನಿಮಾ ಪ್ರಮೋಶನ್ ನಲ್ಲಿ ಬ್ಯುಸಿ ಇದ್ದು ಅಕ್ಟೋಬರ್ ೧೧ ರಂದು ಲುಂಗಿ ತೆರೆ ಮೇಲೆ ಬರಲಿದೆ.

ಸತೀಶ ಎಂಬಿ.


Conclusion:

ABOUT THE AUTHOR

...view details