ಕರ್ನಾಟಕ

karnataka

ಬೊಂಬಾಟ್​ ಗಡ್ಡ, ಜೇಮ್ಸ್​ ಬಾಂಡ್​ ಲುಕ್​​... ಕುತೂಹಲದ ಕಿಚ್ಚು ಹಚ್ಚಿದ ಕಿಚ್ಚನ ಫ್ಯಾಂಟಮ್​ ಪೋಸ್ಟರ್​

By

Published : Mar 2, 2020, 11:42 PM IST

ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಜುಗಲ್ ಬಂದಿಯಲ್ಲಿ ಪವರ್ ಫುಲ್ ಟೈಟಲ್ ಹೊಂದಿರುವ, ಫ್ಯಾಂಟಮ್ ಸಿನಿಮಾ ಬರುತ್ತೆ ಅಂತಾ ಸ್ಯಾಂಡಲ್​ವುಡ್​ನಲ್ಲಿ ಹೇಳಲಾಗಿತ್ತು. ಕಿಚ್ಚನ ಫ್ಯಾಂಟಮ್ ಚಿತ್ರ ಯಾವಾಗ ಸೆಟ್ಟೇರುತ್ತೆ ಅನ್ನೋ ಕ್ಯೂರಿಯಾಸಿಟಿಯೂ ಇತ್ತು. ಇದೀಗ ಸುದೀಪ್ ಫ್ಯಾಂಟಮ್ ಸಿನಿಮಾ ಚಿತ್ರತಂಡದಿಂದ ಗುಡ್ ನ್ಯೂಸ್​ವೊಂದು ಹೊರಬಿದ್ದಿದೆ.

phantom film
ಫ್ಯಾಂಟಮ್ ಚಿತ್ರದ ಶೂಟಿಂಗ್ ಅಡ್ಡದಲ್ಲಿ ಅಭಿನಯ ಚಕ್ರವರ್ತಿ

ಬೆಂಗಳೂರು: ಕಿಚ್ಚ ಸುದೀಪ್ ಹಾಗೂ ನಿರ್ದೇಶಕ ಅನುಪ್ ಭಂಡಾರಿ ಜುಗಲ್ ಬಂದಿಯಲ್ಲಿ ಪವರ್ ಫುಲ್ ಟೈಟಲ್ ಹೊಂದಿರುವ, ಫ್ಯಾಂಟಮ್ ಸಿನಿಮಾ ಬರುತ್ತೆ ಅಂತಾ ಸ್ಯಾಂಡಲ್ ವುಡ್​ನಲ್ಲಿ ಹೇಳಲಾಗಿತ್ತು. ಆದ್ರೆ ಕಿಚ್ಚನ ಫ್ಯಾಂಟಮ್ ಚಿತ್ರ ಯಾವಾಗ ಸೆಟ್ಟೇರುತ್ತೋ ಅನ್ನೋ ಕ್ಯೂರಿಯಾಸಿಟಿ ಇತ್ತು. ಇದೀಗ ಸುದೀಪ್ ಫ್ಯಾಂಟಮ್ ಸಿನಿಮಾ ಚಿತ್ರತಂಡದಿಂದ ಗುಡ್ ನ್ಯೂಸ್​​ವೊಂದು ಹೊರ ಬಿದ್ದಿದೆ.

ಸದ್ಯ ರಿವೀಲ್ ಆಗಿರೋ ಫ್ಯಾಂಟಮ್ ಚಿತ್ರದ ಬೊಂಬಾಟ್ ಪೋಸ್ಟರ್​​​ವೊಂದು ವೈರಲ್​ ಆಗಿದ್ದು, ಕಿಚ್ಚ ಸುದೀಪ್ ಕೈಯಲ್ಲಿ ಗನ್ ಹಿಡಿದು ಜೇಮ್ಸ್ ಬಾಂಡ್ ಶೈಲಿಯಲ್ಲಿ ಪೋಸ್ ಕೊಟ್ಟಿದ್ದಾರೆ. ಹಾಗೇ ಇಂದಿನಿಂದ ಹೈದರಾಬಾದ್‌ನಲ್ಲಿ, ಸೈಲೆಂಟ್ ಆಗಿ ಫ್ಯಾಂಟಮ್ ಸಿನಿಮಾದ ಶೂಟಿಂಗ್ ಆರಂಭವಾಗಿದೆ.

ಫ್ಯಾಂಟಮ್ ಚಿತ್ರದ ಶೂಟಿಂಗ್ ಅಡ್ಡದಲ್ಲಿ ಅಭಿನಯ ಚಕ್ರವರ್ತಿ

ನಿರ್ದೇಶಕ ಅನೂಪ್ ಭಂಡಾರಿ ಹಾಗೂ ಕಿಚ್ಚ ಸುದೀಪ್ ಫ್ಯಾಂಟಮ್ ಸಿನಿಮಾ ಡಿಸ್ಕಶನ್ ಮಾಡ್ತಾ ಇರೋ ಫೋಟೋವೊಂದು ರಿವೀಲ್ ಆಗಿದೆ. ಈ ಪೋಟೋದಲ್ಲಿ ಕಿಚ್ಚನ ಗಡ್ಡದ ಲುಕ್ ಬೊಂಬಾಟ್ ಆಗಿದ್ದು, ಹೈದರಾಬಾದ್​​ನಲ್ಲಿ ಕಲಾ ನಿರ್ದೇಶಕ ಶಿವು ಅದ್ದೂರಿ ಸೆಟ್ ಹಾಕಿದ್ದಾರಂತೆ. ಇನ್ನು ಕಿಚ್ಚನ ಜೋಡಿಯಾಗಿ ತೆಲುಗಿನ ನಟಿ ಸಮಂತಾ ಆಯ್ಕೆ ಮಾಡುವ ಯೋಚನೆಯಲ್ಲಿ ಚಿತ್ರತಂಡ ಇದೆ.

ಈ ಹಿಂದೆ ಈಗ ಸಿನಿಮಾದಲ್ಲಿ ಸುದೀಪ್ ಮತ್ತು ಸಮಂತಾ ಒಟ್ಟಾಗಿ ನಟಿಸಿದ್ದರು. ಈ ಸಿನಿಮಾಕ್ಕೆ ಒಳ್ಳೆಯ ಯಶಸ್ಸು ಸಿಕ್ಕಿತ್ತು. ನಿರ್ಮಾಪಕ ಜಾಕ್ ಮಂಜು ಅದ್ದೂರಿಯಾಗಿ ನಿರ್ಮಾಣ ಮಾಡಲಿದ್ದಾರೆ. ಆದ್ರೆ ತೆಲುಗು ನಟಿ ಸಮಂತಾ ಅಕ್ಕಿನೇನಿ, ಸುದೀಪ್‌ಗೆ ಜೋಡಿಯಾಗ್ತಾರಾ ಅನ್ನೋದು ಸದ್ಯದಲ್ಲೇ ತಿಳಿಯಲಿದೆ.

ABOUT THE AUTHOR

...view details