ಕರ್ನಾಟಕ

karnataka

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೆಜಿಎಫ್​​​-2 ಚಿತ್ರತಂಡ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಯಶ್​

By

Published : Feb 1, 2022, 3:33 PM IST

ಕೆಜಿಎಫ್​​​-2 ಚಿತ್ರತಂಡ ಸದ್ಯ ಕುಂದಾಪುರದ ಸಂಗೀತ ನಿರ್ದೇಶಕ‌ ರವಿ ಬಸ್ರೂರು ಅವರ ಊರಿನಲ್ಲಿ ಬೀಡುಬಿಟ್ಟಿದೆ. ಇಂದು ಸಿನಿಮಾ ತಂಡ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದೆ.

KGF-2 Movie Team Visits Kollur Mookambika temple
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೆಜಿಎಫ್​​​-2 ಚಿತ್ರತಂಡ ಭೇಟಿ

ರಾಜ್ಯದಲ್ಲಿ ಕೊರೊನಾ ಕೇಸ್​ಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಹಂತ ಹಂತವಾಗಿ ಹೇರಿದ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತಿದೆ. ಇದರ ಬೆನ್ನಲ್ಲೇ ಕನ್ನಡ ಚಿತ್ರರಂಗದ ಚಟುವಟಿಕೆಗಳು ಗರಿಗೆದರಿವೆ.

ಸರ್ಕಾರ ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಿಗೂ100 ಪರ್ಸೆಂಟ್ ಪ್ರೇಕ್ಷಕರಿಗೆ ಅನುಮತಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಕನ್ನಡ ಚಿತ್ರರಂಗದಲ್ಲಿ ಬಿಗ್​​ ಸ್ಟಾರ್​​​​ಗಳ ಸಿನಿಮಾಗಳ ಜೊತೆಗೆ ಹೊಸಬರ ಚಿತ್ರಗಳು ಬಿಡುಗಡೆ ಆಗೋವುದಕ್ಕೆ ಸಜ್ಜಾಗಿದ್ದು, ಏಪ್ರಿಲ್.​14ರಂದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಕೆಜಿಎಫ್-2 ವಿಶ್ವದಾದ್ಯಂತ ತೆರೆ ಕಾಣೋದು ಬಹುತೇಕ ಖಚಿತವಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೆಜಿಎಫ್​​​-2 ಚಿತ್ರತಂಡ ಭೇಟಿ

ಕುಂದಾಪುರದಲ್ಲಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿ ಕೆಜಿಎಫ್​-2 ಚಿತ್ರದ ಮ್ಯೂಸಿಕ್​ ಕೆಲಸಗಳು​​ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ನಾಯಕ ನಟ ಯಶ್​​, ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ನಿರ್ಮಾಪಕ ವಿಜಯ್ ಕಿರಂಗದೂರ್, ಸಂಗೀತ ನಿರ್ದೇಶಕ ರವಿ ಬಸ್ರೂರ್ ಸೇರಿದಂತೆ ಇಡೀ ಚಿತ್ರತಂಡ ಆನೆಗುಡ್ಡೆ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಂತರ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆದಿದ್ದಾರೆ.

ಇದನ್ನೂ ಓದಿ: ಉಡುಪಿ: ಬಸ್ರೂರಿನಲ್ಲಿ ಬ್ಯಾಟ್ ಬೀಸಿದ 'ರಾಕಿಂಗ್ ಸ್ಟಾರ್ ಯಶ್' VIDEO

ಟ್ರೈಲರ್​ನಿಂದಲೇ ದಾಖಲೆ ಬರೆದಿರೋ ಕೆಜಿಎಫ್- 2 ಸಿನಿಮಾದ ಮೇಲೆ ಕೋಟ್ಯಂತರ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details