ಕರ್ನಾಟಕ

karnataka

ಹಾರರ್ ಸಿನಿಮಾ 'ಕಪೋ ಕಲ್ಪಿತಂ' ನ.26 ರಂದು ಬಿಡುಗಡೆ

By

Published : Nov 18, 2021, 12:16 PM IST

Updated : Nov 18, 2021, 12:22 PM IST

ಹಾರರ್, ಸಸ್ಪೆನ್ಸ್, ಥ್ರಿಲ್ಲರ್​ ಸಿನಿಮಾ ''ಕಪೋ ಕಲ್ಪಿತಂ'' (kapo kalpitam film) ಇದೇ ನವೆಂಬರ್ 26 ರಂದು ಬಿಡುಗಡೆಯಾಗಲಿದೆ.

kapo kalpitam film will release on November 26th
'ಕಪೋ ಕಲ್ಪಿತಂ' ನ.26 ರಂದು ಬಿಡುಗಡೆ

ಮಂಗಳೂರು(ದ.ಕನ್ನಡ):ಲೇಡಿ ಡೈರೆಕ್ಟರ್​ ನಿರ್ದೇಶನದಲ್ಲಿ ಮೂಡಿಬಂದ ಹಾರರ್ ಸಿನಿಮಾ ''ಕಪೋ ಕಲ್ಪಿತಂ'' (kapo kalpitam film) ಇದೇ ನವೆಂಬರ್ 26 ರಂದು ತೆರೆಗೆ ಬರಲಿದೆ.

ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ಮಾಹಿತಿ ಹಂಚಿಕೊಂಡ ನಿರ್ದೇಶಕಿ ಸುಮಿತ್ರಾ ಗೌಡ (director Sumitra Gowda), ಇದು ಹಾರರ್, ಸಸ್ಪೆನ್ಸ್, ಥ್ರಿಲ್ಲರ್​ ಸಿನಿಮಾವಾಗಿದ್ದು ಕರಾವಳಿಯಲ್ಲಿ ಚಿತ್ರೀಕರಣವಾಗಿದೆ. ಈ ಸಿನಿಮಾದಲ್ಲಿ ನಾನು ನಾಯಕಿಯಾಗಿ ನಟಿಸಿದ್ದು ಪ್ರೀತಂ ಮಕ್ಕಿಹಾಲಿ, ಅಮೋಘ್ ಕೊಡಂಗಳ, ರಾಜೇಶ್ ಕಣ್ಣೂರು ಮೊದಲಾದವರು ನಟಿಸಿದ್ದಾರೆ. ಚಿತ್ರದಲ್ಲಿ 3 ಹಾಡುಗಳಿದ್ದು, ಸಾಹಿತ್ಯದ ಜೊತೆಗೆ ಕಥೆ, ಚಿತ್ರಕಥೆ ಸಂಭಾಷಣೆಯನ್ನು ಗಣಿದೇವ್ ಕಾರ್ಕಳ ಅವರು ಬರೆದಿದ್ದಾರೆ. ರಮೇಶ್ ಗೌಡ, ಕವಿತಾ ಕನಿಕಾ ಪೂಜಾರಿ ಹಾಗೂ ಗಣಿದೇವ್ ಕಾರ್ಕಳ ಚಿತ್ರವನ್ನು ನಿರ್ಮಿಸಿದ್ದಾರೆ ಎಂದರು.

ಸಿನಿಮಾ ಕುರಿತು ನಿರ್ದೇಶಕಿ ಸುಮಿತ್ರಾ ಗೌಡ ಮಾತನಾಡಿದರು..

ಈ ಚಿತ್ರವು ಸವ್ಯಾಚಿ ಕ್ರಿಯೇಷನ್ ಬ್ಯಾನರ್​ನಡಿ ಮೂಡಿಬಂದಿದ್ದು, ಬಹುಭಾಷೆಯಲ್ಲಿ ಸಿನಿಮಾ ನಿರ್ಮಾಣವಾಗಲಿದೆ. ಕನ್ನಡ ಸಿನಿಮಾ ಬಿಡುಗಡೆ ಬಳಿಕ ಹಿಂದಿ ಮತ್ತು ಇತರೆ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:'ಕಪೋ‌ ಕಲ್ಪಿತಂ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಮತ್ತೋರ್ವ ಮಹಿಳಾ ಡೈರೆಕ್ಟರ್​ ಎಂಟ್ರಿ

ಸಿನಿಮಾದ ಹೆಸರು ಸಂಸ್ಕೃತ ಪದವಾಗಿದ್ದು, ಸ್ವಯಂ ಕಲ್ಪನೆ ಎಂಬ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಹೆಚ್ಚಿಗೆ ಸೇರಿಕೊಂಡು ಸಂಶಯಕ್ಕೆ ನಾಂದಿಯಾಗುತ್ತದೆ. ಅದರಂತೆ ಕುತೂಹಲ ಹಾರರ್ ಕಥೆಯಲ್ಲಿ ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತಾರೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಸಾರಾಂಶವಾಗಿದೆ ಅಂತಾರೆ ಡೈರೆಕ್ಟರ್​ ಸುಮಿತ್ರಾ ಗೌಡ.

Last Updated : Nov 18, 2021, 12:22 PM IST

ABOUT THE AUTHOR

...view details