ಕರ್ನಾಟಕ

karnataka

ಸತೀಶ್ ನೀನಾಸಂ 'ಪೆಟ್ರೋಮ್ಯಾಕ್ಸ್'ಗೆ ಜೊತೆಯಾದ ನೀರ್​ದೋಸೆ ಬೆಡಗಿ!

By

Published : Oct 19, 2020, 8:39 PM IST

ಪೆಟ್ರೋಮ್ಯಾಕ್ಸ್ ಚಿತ್ರದ ವಿಶಿಷ್ಟವಾದ ಕಥೆ ಕೇಳಿ ಸತೀಶ್ ನೀನಾಸಂ ಇಷ್ಟ ಪಟ್ಟಿದ್ದಾರಂತೆ. ಜೀವನದ ಮೌಲ್ಯದ ಜೊತೆಗೆ ಸಂದೇಶವನ್ನ ಕೊಡುತ್ತೆ ಅನ್ನೋದು ಸತೀಶ್ ನೀನಾಸಂ ನಂಬಿಕೆ.

Haripriya
ಸತೀಶ್ ನೀನಾಸಂ

ಪರಿಮಳ ಲಾಡ್ಜ್ ಸ್ಯಾಂಡಲ್​ವುಡ್​ನಲ್ಲಿ ಟೈಟಲ್​ನಿಂದಲೇ ಹವಾ ಸೃಷ್ಟಿಸಿರೋ ಸಿನಿಮಾ. ಈ ಸಿನಿಮಾ ರಿಲೀಸ್​ಗೂ ಮುಂಚೆ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಮತ್ತೆ ಜೊತೆಯಾಗಿರೋ ಚಿತ್ರ ಪೆಟ್ರೋಮ್ಯಾಕ್ಸ್. ಸ್ಕ್ರಿಪ್ಟ್ ರೀಡಿಂಗ್​ನಿಂದಲೇ ಗಮನ ಸೆಳೆಯುತ್ತಿರೋ ಪೆಟ್ರೋಮ್ಯಾಕ್ಸ್ ಸಿನಿಮಾ ನವರಾತ್ರಿ ಹಬ್ಬದ ವಿಶೇಷವಾಗಿ ಮೈಸೂರಿನಲ್ಲಿ ಸರಳವಾಗಿ ಸೆಟ್ಟೇರಿದೆ.

ಸತೀಶ್ ನೀನಾಸಂ ಪಿಕ್ಚರ್ಸ್ ಹೌಸ್ ಅಡಿ ನಿರ್ಮಾಣ ಆಗುತ್ತಿರುವ ಪೆಟ್ರೋಮ್ಯಾಕ್ಸ್ ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಶುರು ಮಾಡಿದೆ. ಈ ಚಿತ್ರದ ನಾಯಕಿ ಯಾರು ಆಗ್ತಾರೆ ಎಂಬ ಕುತೂಹಲ ಇತ್ತು. ಸದ್ಯ ಈ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ನೀರ್​ದೋಸೆ ಬೆಡಗಿ ಹರಿಪ್ರಿಯಾ ಜೋಡಿಯಾಗಿದ್ದಾರೆ‌.

ನಟ ನೀನಾಸಂ ಸತೀಶ್ ಮಾತು

ಸತೀಶ್ ನೀನಾಸಂ ಜೊತೆ ಮೊದಲ ಬಾರಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿರುವ ಹರಿಪ್ರಿಯಾ, ನೀರ್​ದೋಸೆ ಸಿನಿಮಾ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ಜೊತೆ ವರ್ಕ್ ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ಸತೀಶ್ ನೀನಾಸಂ ಮೈಸೂರಿನಲ್ಲಿ ಚಿತ್ರೀಕರಣ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟೇ ಅಲ್ಲ ಬ್ಯೂಟಿ ಕ್ವೀನ್ ಹರಿಪ್ರಿಯಾ ಜೊತೆ ಕ್ಯಾಮರಾಗೆ ಪೋಸ್ ಕೊಟ್ಟಿದ್ದು, 15 ದಿನಗಳ ಕಾಲ ಮೈಸೂರಿನಲ್ಲಿ ಪೆಟ್ರೋಮ್ಯಾಕ್ಸ್​ನ, ಮೊದಲ ಹಂತದ ಚಿತ್ರೀಕರಣ ಮಾಡಲು ನಿರ್ದೇಶಕರು ಪ್ಲಾನ್ ಮಾಡಿದ್ದಾರೆ.

ಸತೀಶ್ ನೀನಾಸಂ ಜೊತೆ ಹರಿಪ್ರಿಯಾ

ಪೆಟ್ರೋಮ್ಯಾಕ್ಸ್ ಚಿತ್ರದ ವಿಶಿಷ್ಟವಾದ ಕಥೆ ಕೇಳಿ ಸತೀಶ್ ನೀನಾಸಂ ಇಷ್ಟ ಪಟ್ಟಿದ್ದಾರಂತೆ. ಜೀವನದ ಮೌಲ್ಯದ ಜೊತೆಗೆ ಸಂದೇಶವನ್ನ ಕೊಡುತ್ತೆ ಅನ್ನೋದು ಸತೀಶ್ ನೀನಾಸಂ ನಂಬಿಕೆ. ಮೊದಲಿನಿಂದಲೂ ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ಸತೀಶ್ ನೀನಾಸಂ ಆತ್ಮೀಯ ಗೆಳೆಯರಂತೆ. ಈ ಸ್ನೇಹಕ್ಕಾಗಿ ಈಗ ವಿಜಯ್ ಪ್ರಸಾದ್, ಕಥೆ ಚಿತ್ರಕತೆ ಬರೆದು ಸತೀಶ್​​ಗೆ ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸತೀಶ್​ಗೆ ಜೋಡಿಯಾಗಿ ಹರಿಪ್ರಿಯಾ ಫೈನಲ್ ಆಗಿದ್ದು, ಗೊಂಬೆಗಳ ಲವ್ ಸಿನಿಮಾದ ಅರುಣ್, ನಾಗಭೂಷಣ್, ಕಾರುಣ್ಯ ರಾಮ್ ಹೀಗೆ ಹಲವಾರು ಕಲಾವಿದರು ಈ ಚಿತ್ರದಲ್ಲಿದ್ದಾರೆ‌. ಅನೂಪ್ ಸೀಳಿನ್ ಸಂಗೀತವಿದ್ದು, ನಿರಂಜನ್ ಬಾಬು ಕ್ಯಾಮರಾ ವರ್ಕ್ ಇದೆ. ಸುರೇಶ್ ಅರಸ್ ಸಂಕಲನ, ಹೊಸ್ಮನೆ ಮೂರ್ತಿ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.

ABOUT THE AUTHOR

...view details