ಕರ್ನಾಟಕ

karnataka

ಉಪ್ಪಿ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ

By

Published : Aug 22, 2020, 1:58 PM IST

ಉಪೇಂದ್ರ ಅವರ ನೆಚ್ಚಿನ ದೇವರಾದ ಗಣೇಶ ಚತುರ್ಥಿಯನ್ನು ಪ್ರತೀ ವರ್ಷ ಬಹಳ ಅದ್ಧೂರಿಯಾಗಿ ಸ್ನೇಹಿತರು, ಕುಟುಂಬದವರ ಜೊತೆ ಸೆಲೆಬ್ರೇಟ್ ಮಾಡ್ತಿದ್ದರು. ಆದರೆ ಈ ವರ್ಷ ಕೊರೊನಾ ಕಾರಣ ಗಣೇಶ ಹಬ್ಬ ಉಪ್ಪಿ ಕುಟುಂಬಕಷ್ಟೇ ಸೀಮಿತವಾಗಿದೆ‌.

Ganesha festival
ಗಣೇಶ ಹಬ್ಬದ ಸಂಭ್ರಮ

ಪ್ರತೀ ವರ್ಷದಂತೆ ಈ ವರ್ಷವೂ ರಿಯಲ್ ಸ್ಟಾರ್ ಉಪೇಂದ್ರ ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ವರ್ಷವೂ ಶಾಸ್ತ್ರೋಕ್ತವಾಗಿ ಉಪ್ಪಿ ಕುಟುಂಬ ಸರಳವಾಗಿ ಗಣೇಶ ಹಬ್ಬ ಆಚರಣೆ ಮಾಡಿದ್ದಾರೆ.

ಉಪೇಂದ್ರ ಅವರ ನೆಚ್ಚಿನ ದೇವರಾದ ಗಣೇಶ ಚತುರ್ಥಿಯನ್ನು ಪ್ರತೀ ವರ್ಷ ಬಹಳ ಅದ್ಧೂರಿಯಾಗಿ ಸ್ನೇಹಿತರು, ಕುಟುಂಬದವರ ಜೊತೆ ಸೆಲೆಬ್ರೇಟ್ ಮಾಡ್ತಿದ್ದರು. ಆದರೆ ಈ ವರ್ಷ ಕೊರೊನಾ ಕಾರಣ ಗಣೇಶ ಹಬ್ಬ ಉಪ್ಪಿ ಕುಟುಂಬಕಷ್ಟೇ ಸೀಮಿತವಾಗಿದೆ‌.

ಅಲ್ಲದೆ ಈ ವರ್ಷ ಉಪ್ಪಿ ಮನೆಯಲ್ಲಿ ಕೇವಲ ಎರಡು ಅಡಿ ಎತ್ತರದ ಮಣ್ಣಿನ ಗಣೇಶ ಮೂರ್ತಿ ಕೂರಿಸುವ ಮೂಲಕ ಉಪೇಂದ್ರ ಕುಟುಂಬ ಪರಿಸರ ಕಾಳಜಿ ತೋರಿದೆ. ಅಲ್ಲದೆ ಎಲ್ಲಾ ವಿಘ್ನಗಳು ಅದಷ್ಟು ಬೇಗ ನಿವಾರಣೆ ಆಗಲಿ ಎಂದು ವಿಶೇಷ ಪೂಜೆ ಮಾಡಿದ್ದಾರೆ.

ABOUT THE AUTHOR

...view details