ಕರ್ನಾಟಕ

karnataka

'ಮಾರ್ಟಿನ್' ಅವತಾರ ತಾಳಿದ 'ಭರ್ಜರಿ' ಹುಡುಗ

By

Published : Aug 16, 2021, 6:58 PM IST

ಅದ್ಧೂರಿ ಸಿನಿಮಾ ಬಳಿಕ ನಿರ್ದೇಶಕ ಎ.ಪಿ ಅರ್ಜುನ್ ಹಾಗು ಧ್ರುವ ಸರ್ಜಾ 9 ವರ್ಷಗಳ ಬಳಿಕ, ಮಾರ್ಟಿನ್ ಸಿನಿಮಾಗಾಗಿ ಒಂದಾಗಿದ್ದಾರೆ. ಹೀಗಾಗಿ ಸ್ಪೆಷಲ್ ಆಗಿ ತೋರಿಸಲು ನಿರ್ದೇಶಕ ಎ.ಪಿ ಅರ್ಜುನ್ ಧ್ರುವ ಸರ್ಜಾ ಹೇರ್ ಗೆ ಹೊಸ ರೂಪ ಕೊಟ್ಟಿದ್ದಾರೆ. ಹೇರ್ ಸ್ಟೈಲಿಷ್ ಪ್ರಶಾಂತ್ ಎಂಬುವರು ಈ ಹಿಂದೆ ಧ್ರುವ ಸರ್ಜಾ ಮಾಡಿರದ ಹೆರ್ ಸ್ಟೈಲ್ ಅನ್ನು ಮಾಡಿದ್ದಾರೆ.

first look release of mortein cinema
'ಮಾರ್ಟಿನ್' ಅವತಾರ ತಾಳಿದ 'ಭರ್ಜರಿ' ಹುಡುಗ

ಪೊಗರು ಸಿನಿಮಾ ಬಳಿಕ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ದುಬಾರಿ ಸಿನಿಮಾ ಮಾಡ್ತಾರೆ ಅಂತಾ ಗಾಂಧಿನಗರ ಅಲ್ಲದೇ, ಅವ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಆದರೆ, ಈ ಸಿನಿಮಾದಿಂದ ನಿರ್ದೇಶಕ ನಂದ ಕಿಶೋರ್ ಹೊರಗಡೆ ಬಂದ ಮೇಲೆ ದುಬಾರಿ ಸಿನಿಮಾ ನಿಂತಿರೋದು ಇಡೀ ಗಾಂಧಿನಗರಕ್ಕೆ ಗೊತ್ತಿರುವ ವಿಚಾರ. ಈಗ ಆ್ಯಕ್ಷನ್ ಪ್ರಿನ್ಸ್ ಸ್ವಾತಂತ್ರ್ಯ ದಿನಾಚರಣೆಯ ದಿನದೊಂದು ಹೊಸ ಸಿನಿಮಾ ಅನೌನ್ಸ್​ ಮಾಡಿದ್ದಾರೆ. ಈ ಸಿನಿಮಾಕ್ಕೆ ಮಾರ್ಟಿನ್ ಅಂತಾ ಪವರ್ ಫುಲ್ ಟೈಟಲ್ ಇಡಲಾಗಿದೆ.

ಸದ್ಯ ಧ್ರುವ ಸರ್ಜಾ ಮತ್ತೆ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿರುವ ಮಾರ್ಟಿನ್ ಚಿತ್ರದ ಫಸ್ಟ್ ಲುಕ್ ಅನಾವರಣ ಆಗಿದೆ. ಮಾರ್ಟಿನ್ ಶೀರ್ಷಿಕೆ ಹೇಳುವಂತೆ ಇದು ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಕಾಲೇಜ್ ಲವ್ ಸ್ಟೋರಿ ಜೊತೆ ಫುಲ್ ಪ್ಯಾಕ್ ಆ್ಯಕ್ಷನ್ ಇರುತ್ತಂತೆ. ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಧ್ರುವ ಸರ್ಜಾ ನಟಿಸಲಿದ್ದಾರಂತೆ.

'ಮಾರ್ಟಿನ್' ಅವತಾರ ತಾಳಿದ 'ಭರ್ಜರಿ' ಹುಡುಗ

ಅದ್ಧೂರಿ ಸಿನಿಮಾ ಬಳಿಕ ನಿರ್ದೇಶಕ ಎ.ಪಿ. ಅರ್ಜುನ್ ಹಾಗು ಧ್ರುವ ಸರ್ಜಾ 9 ವರ್ಷಗಳ ಬಳಿಕ, ಮಾರ್ಟಿನ್ ಸಿನಿಮಾಗಾಗಿ ಒಂದಾಗಿದ್ದಾರೆ. ಹೀಗಾಗಿ ಸಮ್ಥಿಂಗ್ ಸ್ಪೆಷಲ್ ಆಗಿ ತೋರಿಸಲು ನಿರ್ದೇಶಕ ಎ.ಪಿ ಅರ್ಜುನ್ ಧ್ರುವ ಸರ್ಜಾ ಹೇರ್ ಗೆ ಹೊಸ ರೂಪ ಕೊಟ್ಟಿದ್ದಾರೆ. ಹೇರ್ ಸ್ಟೈಲಿಷ್ ಪ್ರಶಾಂತ್ ಎಂಬುವರು ಈ ಹಿಂದೆ ಧ್ರುವ ಸರ್ಜಾ ಮಾಡಿರದ ಹೆರ್ ಸ್ಟೈಲ್ ನ್ನ ಮಾಡಿದ್ದಾರೆ. ವಿ ಆಕಾರದಲ್ಲಿ ಆ್ಯಕ್ಷನ್ ಪ್ರಿನ್ಸ್ ಕೂದಲಿಗೆ ಹೊಸ ಟಚ್ ಕೊಟ್ಟಿದ್ದಾರೆ.

ಅಷ್ಟೇ ಅಲ್ಲಾ, ಧ್ರುವ ಸರ್ಜಾ ಎಂದಿನಂತೆ ಬಾಡಿ ಬಿಲ್ಡ್ ಮಾಡೋದನ್ನ ಮರೆತಿಲ್ಲ. ಪೊಗರು ಸಿನಿಮಾಕ್ಕಾಗಿ ಹಾಲಿವುಡ್ ಬಾಡಿ ಬಿಲ್ಡರ್ಸ್ ಜೊತೆ ಆ್ಯಕ್ಷನ್ ಮಾಡಿದ್ದ ಧ್ರುವ ಮಾರ್ಟಿನ್ ಚಿತ್ರದ ಪಾತ್ರಕ್ಕಾಗಿ ಜಿಮ್ ನಲ್ಲಿ ಬೆವರಿಳಿಸಿದ್ದಾರೆ.

ಈಗಾಗಲೇ ಮಾರ್ಟಿನ್ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ನಿರ್ಮಾಪಕ ಉದಯ್ ಮೆಹ್ತಾ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇದರ ಚಿತ್ರಕಥೆಯನ್ನು ಅರುಣ್ ಬಾಲಾಜಿ ಮತ್ತು ಸ್ವಾಮೀಜಿ ಬರೆದಿದ್ದಾರೆ. ಚಿತ್ರದ ಛಾಯಾಗ್ರಹಣವನ್ನು ಸತ್ಯ ಹೆಗ್ಡೆ ನಿರ್ವಹಿಸುತ್ತಿದ್ದು, ಮಣಿ ಶರ್ಮಾ ಸಂಗೀತ ಸಂಯೋಜಿಸಿದ್ದಾರೆ. ನಿರ್ದೇಶಕ ಎ.ಪಿ ಅರ್ಜುನ್ ಮಾರ್ಟಿನ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಈ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲಾನ್ ಕೂಡ ಮಾಡಿದೆ.

ABOUT THE AUTHOR

...view details