ಕರ್ನಾಟಕ

karnataka

ಬಜಾರ್​ ಹೀರೊ ಧನ್ವೀರ್​ 'ಬ'ಕಾರವೇ ಲಕ್ಕಿ... ಎರಡನೇ ಸಿನಿಮಾಗೂ 'ಬ' ಅಕ್ಷರದಿಂದಲೇ ಟೈಟಲ್

By

Published : Sep 6, 2019, 10:00 AM IST

‘ಬಜಾರ್’ ಚಿತ್ರದಿಂದ ಸ್ಯಾಂಡಲ್​​ವುಡ್​​​​ಗೆ ಕಾಲಿಟ್ಟ ಭರವಸೆಯ ನಟ ಧನ್ವೀರ್​, ಇದೀಗ ಎರಡನೇ ಸಿನಿಮಾಗೆ ರೆಡಿಯಾಗುತ್ತಿದ್ದಾರೆ. ಈ ಸಿನಿಮಾ ಕೂಡಾ ‘ಬ‘ ಅಕ್ಷರದಿಂದ ಆರಂಭವಾಗಲಿದ್ದು ‘ಬಂಪರ್‘ ಎಂದು ಹೆಸರಿಡಲಾಗಿದೆ. ಚಿತ್ರವನ್ನು ಸಂತು ನಿರ್ದೇಶಿಸುತ್ತಿದ್ದಾರೆ.

ಧನ್ವೀರ್

ಕೆಲವು ಅಕ್ಷರಗಳಿಂದ ಆರಂಭವಾಗುವ ಶೀರ್ಷಿಕೆ ಕೆಲವು ನಟರಿಗೆ ಅದೃಷ್ಟ ಎಂದೇ ಹೇಳಬಹುದು. ಯುವ ನಟ ಧನ್ವೀರ್​​​ ‘ಬಜಾರ್’ ಆದ ಮೇಲೆ ಮತ್ತೆ ‘ಬ’ ಅಕ್ಷರದಿಂದ ಸಿನಿಮಾ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಆ ಸಿನಿಮಾಗೆ ‘ಬಂಪರ್’ ಎಂದು ಹೆಸರಿಡಲಾಗಿದೆ. ಈ ಸಿನಿಮಾ ಕೂಡಾ ಬಾಕ್ಸ್ ಆಫೀಸಿನಲ್ಲಿ ಬಂಪರ್ ಹೊಡೆಯಬೇಕು ಎನ್ನುವುದು ಎಲ್ಲರ ಹಾರೈಕೆ.

'ಅಲೆಮಾರಿ' ಖ್ಯಾತಿಯ ಸಂತು ಈ ‘ಬಂಪರ್’ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ. ಅದಕ್ಕೂ ಮುನ್ನ ಅವರು ‘ಬಿಚ್ಚುಗತ್ತಿ’ ಸಿನಿಮಾಕ್ಕೆ ಫೈನಲ್ ಟಚ್​​​​​​​​​​​​​​​​​​​​​​​​​​​​​​​​​​​​ ನೀಡಲಿದ್ದಾರೆ. ಐತಿಹಾಸಿಕ ಚಿತ್ರ ‘ಬಿಚ್ಚುಗತ್ತಿ’ ರಾಜವರ್ಧನ್​​​​​​​​​​​ ವೃತ್ತಿ ಜೀವನದ ಬಹಳ ದೊಡ್ಡ ಸಿನಿಮಾ. ಇದು ಈಗ ಅಂತಿಮ ಹಂತದಲ್ಲಿದೆ. ಈ ಹಿಂದೆ ಸಂತು ನಿರ್ದೇಶನದ ‘ಕಾಲೇಜು ಕುಮಾರ’ ಯಶಸ್ಸನ್ನು ಕಂಡಿತ್ತು. ಸೆಪ್ಟೆಂಬರ್ 8 ಧನ್ವೀರ್ ಹುಟ್ಟುಹಬ್ಬವಾಗಿದ್ದು ಅವರ ಹೊಸ ಸಿನಿಮಾ ‘ಬಂಪರ್​‘ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಚೇತನ್ ಕುಮಾರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಗೀತ ಸಾಹಿತ್ಯ ಕೂಡಾ ರಚಿಸಿದ್ದಾರೆ.

ಧನ್ವೀರ್​​​​ ‘ಬಜಾರ್’ ಸಿನಿಮಾ ಯಶಸ್ಸಿನ ಸಂದರ್ಭದಲ್ಲಿ ವಿತರಕ ಸುಪ್ರೀತ್ ಧನ್ವೀರ್ ಜೊತೆ ಚಿತ್ರ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸುಪ್ರೀತ್ ಈಗ 'ಬಂಪರ್​​' ಚಿತ್ರಕ್ಕೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇದು ಕೌಟುಂಬಿಕ ಚಿತ್ರವಾಗಿದ್ದು ಮೊದಲ ಚಿತ್ರಕ್ಕೂ ಎರಡನೇ ಸಿನಿಮಾಗೂ ಬಹಳ ವ್ಯತ್ಯಾಸ ಇದೆ ಎನ್ನಲಾಗಿದೆ. ‘ಬಜಾರ್’ ಸಿನಿಮಾವನ್ನು ಧನ್ವೀರ್ ತಂದೆ ತಿಮ್ಮೇಗೌಡ ನಿರ್ಮಿಸಿದ್ದು ಸಿಂಪಲ್ ಸುನಿ ನಿರ್ದೇಶಿಸಿದ್ದರು.

ಧನವೀರ್ ಬಜಾರ್ ಅದ್ಮೇಲೆ ಬಂಪರ್ ಆಯ್ಕೆ!

ಕೆಲವು ಅಕ್ಷರಗಳಿಂದ ಶುರು ಆಗುವ ಶೀರ್ಷಿಕೆ ಕೆಲವು ನಟರುಗಳನ್ನು ಬಿಟ್ಟು ಹೋಗುವುದು ಅಷ್ಟು ಸುಲಭವಲ್ಲ. ಅದ್ಧೂರಿ ಆದ ನಂತರ ಬಹದ್ದೂರ್,ಭರ್ಜರಿ ಆಗಿ ಧ್ರುವ ಸರ್ಜಾಅಕ್ಷರದ ಹಿಂದೆ ಹೋದರು ಅನ್ನುವಷ್ಟರಲ್ಲಿ ಅವರುಪೊಗರುನಾಲ್ಕನೇ ಚಿತ್ರವಾಗಿ ಆಯ್ಕೆ ಮಾಡಿಕೊಂಡರು.

ಈಗ ನವ ಯುವ ನಟ ಧನವೀರ್ಬಜಾರ್ಆದ ಮೇಲೆ ಮತ್ತೆಅಕ್ಷರದಿಂದ ಸಿನಿಮಾ ಶೀರ್ಷಿಕೆ ಆಯ್ಕೆ ಮಾಡಿಕೊಂಡಿದ್ದಾರೆ. ಅದೇಬಂಪರ್’. ಸಿನಿಮಾ ಬಂಪರ್ ಹೊಡೆಯಬೇಕು ಬಾಕ್ ಆಫೀಸಿನಲ್ಲಿ ಎಂಬುದು ಎಲ್ಲರ ಹರಕೆ. ಈಗ ಶೀರ್ಷಿಕೆಯೇಬಂಪರ್ಆಗಿದೆ ಧನವೀರ್ ಎರಡನೇ ಸಿನಿಮಾಕ್ಕೆ.

ಅಲೆಮಾರಿ ಸಿನಿಮಾ ಇಂದ ಜನಪ್ರಿಯ ಆದ ಸಂತು ಈಬಂಪರ್ಸಿನಿಮಾ ನಿರ್ದೇಶನ ಮಾಡಲಿದ್ದಾರೆ. ಅದಕ್ಕೂ ಮುಂಚೆ ಅವರುಬಿಚ್ಚುಗತ್ತಿಸಿನಿಮಾಕ್ಕೆ ಫೈನಲ್ ಟಚಸ್ ನೀಡಲಿದ್ದಾರೆ. ಐತಿಹಾಸಿಕ ಚಿತ್ರಬಿಚ್ಚುಗತ್ತಿರಾಜವರ್ಧನ ಅವರ ವೃತ್ತಿ ಜೀವನದ ದೊಡ್ಡ ಸಿನಿಮಾ ಅಂತಿಮ ಹಂತದಲ್ಲಿದೆ ಎಂದು ತಿಳಿದುಬಂದಿದೆ. ಈ ಹಿಂದೆ ಸಂತು ನಿರ್ದೇಶನದಕಾಲೇಜು ಕುಮಾರಯಶಸ್ಸನ್ನು ಕಂಡಿತ್ತು.

ನಾಡಿದ್ದು ಸೆಪ್ಟೆಂಬರ್ 8ಬಜಾರ್ನಾಯಕ ಧನವೀರ್ ಹುಟ್ಟು ಹಬ್ಬಕ್ಕೆ ಅವರ ಹೊಸ ಸಿನಿಮಾಬಂಪರ್ಬಗ್ಗೆ ವಿವರಣೆ ನೀಡಲಾಗುವುದು. ಬಂಪರ್ ಚಿತ್ರಕ್ಕೆ ಹೆಸರಾಂತ ನಿರ್ದೇಶಕ ಬಹದ್ದೂರ್ ಚೇತನ್ ಕುಮಾರ್ ಕಥೆ,ಚಿತ್ರಕಥೆ,ಸಂಭಾಷಣೆ ಹಾಗೂ ಗೀತ ಸಾಹಿತ್ಯ ನೀಡಿದ್ದಾರೆ. ಕೇವಲ ನಿರ್ದೇಶನ ಮಾತ್ರ ಸಂತು ಅವರದ್ದು.

ಅಂದಹಾಗೆ ಧನವೀರ್ಬಜಾರ್ಸಿನಿಮಾ ಯಶಸ್ಸಿನ ಸಂದರ್ಭದಲ್ಲಿ ವಿತರಕ ಸುಪ್ರೀತ್ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸುಪ್ರೀತ್ ಈಗ ನಿರ್ಮಾಣಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಧನವೀರ್ ಎರಡನೇ ಸಿನಿಮಾ ಕುಟುಂಬ ಇಷ್ಟ ಪಡುವ ಕಥಾ ವಸ್ತುವೆ ಆಗಿರಲಿದೆ. ಅವರ ಮೊದಲ ಸಿನಿಮಕ್ಕೂ ಎರಡನೇ ಸಿನಿಮಾಕ್ಕೆ ಬಹಳ ವ್ಯತ್ಯಾಸ ಇದೆ ಎಂದು ಬಣ್ಣಿಸುತ್ತಾರೆ.

ಧನವೀರ್ ಮೊದಲ ಸಿನಿಮಾಬಜಾರ್ಅವರ ತಂದೆ ತಿಮ್ಮೆ ಗೌಡರೆ ನಿರ್ಮಾಣ ಮಾಡಿದ್ದರು.ಸಿಂಪಲ್ ಸುನಿ ನಿರ್ದೇಶನ ಮಾಡಿದ್ದರು.


ABOUT THE AUTHOR

...view details

ಸಂಬಂಧಿತ ಲೇಖನ