ಕರ್ನಾಟಕ

karnataka

'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆ...ಸತೀಶ್ ಪಜೀತಿಗೆ ನಗೆಕಡಲಲ್ಲಿ ತೇಲಿದ ಅಭಿಮಾನಿಗಳು

By

Published : Nov 5, 2019, 12:06 AM IST

'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಬಿಡುಗಡೆ ಆದ ಕೆಲವೆ ಗಂಟೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಚಿತ್ರವನ್ನು ನೋಡಿದ ಮೇಲೆ ನಾನು ಯಾವ ಕಾರಣಕ್ಕೆ ಈ ಪಾತ್ರ ಮಾಡಲು ಒಪ್ಪಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸತೀಶ್ ನೀನಾಸಂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದಾರೆ.

'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆ

ಟೀಸರ್, ಪೋಸ್ಟರ್​, ಟೈಟಲ್​​ನಿಂದಲೇ ಗಮನ ಸೆಳೆದಿದ್ದ ಸತೀಶ್ ನೀನಾಸಂ ಹಾಗೂ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶೇಕಡಾ 100 ರಷ್ಟು ಮನರಂಜನೆ ಸಿನಿಮಾ ಇದು ಎಂಬುದು ಟ್ರೈಲರ್ ನೋಡಿದಾಗ ತಿಳಿಯುತ್ತದೆ.

'ಬ್ರಹ್ಮಚಾರಿ' ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ

ಟ್ರೈಲರ್ ಬಿಡುಗಡೆ ಆದ ಕೆಲವೆ ಗಂಟೆಗಳಲ್ಲಿ 35 ಸಾವಿರಕ್ಕೂ ಹೆಚ್ಚು ಜನರು ನೋಡಿದ್ದಾರೆ. ಟ್ರೈಲರ್​ನಲ್ಲಿ ಬ್ರಹ್ಮಚಾರಿ ಪಡುವ ಪಜೀತಿಗೆ ನಗದೆ ಇರಲು ಖಂಡಿತ ಸಾಧ್ಯವಿಲ್ಲ. ಕೌಟುಂಬಿಕ ಕಥೆ ಹೊಂದಿರುವ 'ಬ್ರಹ್ಮಚಾರಿ' ಚಿತ್ರವನ್ನು ಹಾಸ್ಯದ ಮೂಲಕ ಸಿನಿರಸಿಕರಿಗೆ ಊಣ ಬಡಿಸಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದು, ಚಿತ್ರದಲ್ಲಿ ಯಾವುದೇ ಮುಜುಗರವಾಗುವಂತ ದೃಶ್ಯಗಳಿಲ್ಲ, ಖಂಡಿತ ಕುಟುಂಬದೊಂದಿಗೆ ಬಂದು ಸಿನಿಮಾ ನೋಡಬಹುದು ಎಂದು ನಿರ್ದೇಶಕ ಚಂದ್ರಮೋಹನ್ ಹೇಳಿದ್ದಾರೆ. 'ಬ್ರಹ್ಮಚಾರಿ' ಚಿತ್ರದಲ್ಲಿ ನನ್ನ ಪಾತ್ರ ಈ ಹಿಂದೆ ನಾನು ಮಾಡಿದ್ದ ಪ್ರಯೋಗಾತ್ಮಕ ಪಾತ್ರಗಳ ರೀತಿಯಲ್ಲೇ ಇದೆ. ಯಾವುದೇ ನಟ 'ಬ್ರಹ್ಮಚಾರಿ' ಚಿತ್ರದ ಪಾತ್ರವನ್ನು ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಈ ಚಿತ್ರವನ್ನು ನೋಡಿದ ಮೇಲೆ ನಾನು ಯಾವ ಕಾರಣಕ್ಕೆ ಈ ಪಾತ್ರ ಮಾಡಲು ಒಪ್ಪಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸತೀಶ್ ನೀನಾಸಂ ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರು.

ಚಿತ್ರದಲ್ಲಿ ಅದಿತಿ ಪ್ರಭುದೇವ, ಸತೀಶ್ ಜೊತೆ ಸ್ವಲ್ಪ ಗ್ಲಾಮರಸ್ ಆಗಿ ಕಾಣಿಸಿದ್ದಾರೆ. 'ರಂಗನಾಯಕಿ' ಸಿನಿಮಾದ ಪಾತ್ರಕ್ಕೆ ತದ್ವಿರುದ್ಧ ಪಾತ್ರದಲ್ಲಿ ಕಾಣಿಸಿರುವುದಾಗಿ ಅದಿತಿ ಹೇಳಿದರು. ಇನ್ನು ಈಗಾಗಲೇ 'ಬ್ರಹ್ಮಚಾರಿ' ಚಿತ್ರದ 'ಹಿಡ್ಕ ಹಿಡ್ಕ' ಹಾಡು ಪಡ್ಡೆಗಳಿಗೆ ಬಹಳ ಇಷ್ಟವಾಗಿದ್ದು ಈ ಚಿತ್ರಕ್ಕೆ ಪ್ಲಸ್ ಆಗಿದೆ. ‌ಸದ್ಯಕ್ಕೆ 'ಬ್ರಹ್ಮಚಾರಿ' ಸೆನ್ಸಾರ್ ಕದ ತಟ್ಟಲು ರೆಡಿಯಾಗಿದ್ದು ಎಲ್ಲಾ ಅಂದುಕೊಂಡಂತೆ ಅದರೆ ನವೆಂಬರ್ ಕೊನೆಯ ವಾರದಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿ ನಿರ್ಮಾಪಕ ಉದಯ್ ಮೆಹ್ತಾ ಹೇಳಿದ್ದಾರೆ.

Intro:ಅಭಿನಯ ಚತುರ ಸತೀಶ್ ನೀನಾಸಂ ಮದುವೆಯಾಗಿದ್ರು " "ಬ್ರಹ್ಮಚಾರಿ " ಆಗಿರೋದು ಗೊತ್ತಿರೊ ವಿಷ್ಯ.ಟೀಸರ್ ನಿಂದಲೇ ಕುತೂಹಲ ಕೆರಳಿಸಿದ್ದ ೧೦೦% ವರ್ಜಿನ್" ಬ್ರಹ್ಮಚಾರಿ" ೧೦೦% ಮನರಂಜನೆ ಹೊತ್ತ ಟ್ರೈಲರ್ ನೊಂದಿಗೆ ಬಂದಿದ್ಧಾನೆ. ಟ್ರೈಲರ್ ರಿಲೀಸ್ ಆದ ಕೆಲವೆ ಗಂಟೆಗಳಲ್ಲಿ 35ಸಾವಿರಕ್ಕೂ ಹೆಚ್ಚು ವ್ಯೂಸ್ ಆಗಿದ್ದೆ . ಟ್ರೈಲರ್ ನಲ್ಲಿ ಬ್ರಹ್ಮಚಾರಿಯ ಪಜೀತಿಗೆ ನಗೆದೆ ಇರೋಕೆ ಸಾಧ್ಯವೆ ಇಲ್ಲ ಎಂಬ ಕಂಟೆಂಟ್ ಅನ್ನು ನಿರ್ದೇಶಕ ಚಂದ್ರಮೋಹನ್ ಕಟ್ ಮಾಡಿ ಫರ್ಫೆಕ್ಟ್ ಆಗಿ ಫಿಟ್ ಮಾಡಿದ್ದಾರೆ. ಕೌಟುಂಬಿಕ ಕಥೆ ಹೊಂದಿರುವ " ಬ್ರಹ್ಮಚಾರಿ " ಚಿತ್ರವನ್ನು ಹಾಸ್ಯದ ಮೂಲಕ ಸಿನಿರಸಿಕರಿಗೆ ಊಣ ಬಡಿಸಲು ನಿರ್ದೇಶರು ಪ್ಲಾನ್ ಮಾಡಿದ್ದು.ಚಿತ್ರದಲ್ಲಿ ಯಾವುದೇ ಮುಜುಗರವಾಗುವಂತ ಸೀನ್ ಗಳನ್ನು ಇಟ್ಟಿಲ್ಲ.ಖಂಡಿತ ಫ್ಯಾಮಿಲಿ ಜೊತೆ ಬಂದು ನೋಡುವಂತ ಚಿತ್ರಮಾಡಿದ್ದೇವೆ ಎಂದು ನಿರ್ದೇಶಕ ಚಂದ್ರಮೋಹನ್ ಹೇಳಿದ್ದರು."ಬ್ರಹ್ಮಚಾರಿ" ಚಿತ್ರದಲ್ಲಿ ಈ ಹಿಂದೆ ನಾನು ಮಾಡಿದ್ದ ಪ್ರಯೋಗಾತ್ಮಕ ಪಾತ್ರಗಳ ರೀತಿಯಲ್ಲೇ ಇದೆ.ಯಾವುದೇ ನಟ ಬ್ರಹ್ಮಚಾರಿ ಚಿತ್ರದ ಪಾತ್ರವನ್ನು ಮಾಡಲು ಮನಸ್ಸು ಮಾಡುವುದಿಲ್ಲ. ಆದರೆ ಈ ಚಿತ್ರವನ್ನು ನೋಡಿದ ಮೇಲೆ ನಾನು ಯಾಕೆ ಈ ಪಾತ್ರ ಮಾಡಲು ಒಪ್ಪಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ ಎಂದು ಸತೀಶ್ ನೀನಾಸಂ ಪಾತ್ರದ ಬಗ್ಗೆ ಕಾನ್ಪಿಡೆನ್ಸ್ ವ್ಯಕ್ತಪಡಿಸಿದರು.


Body:ಇನ್ನೂ "ಬ್ರಹ್ಮಚಾರಿ" ಚಿತ್ರದಲ್ಲಿ ಅದಿತಿ ಸತೀಶ್ ಜೊತೆ ಸ್ವಲ್ಪ ಗ್ಲಾಮರಸ್ ಆಗಿಬಕಾಣಿಸಿದ್ದು. ರಂಗನಾಯಕಿ " ಪಾತ್ರಕ್ಕೆ ತದ್ವಿರುದ್ದ ಪಾತ್ರದಲ್ಲಿ ಕಾಣಿಸಿರುವುದಾಗಿ ಅದಿತಿ ಹೇಳಿದ್ರು.
ಇನ್ನೂ ಈಗಾಗಲೇ " ಬ್ರಹ್ಮಚಾರಿ" ಚಿತ್ರದ ಹಿಡ್ಕ ಹಿಡ್ಕ ಹಾಡು ಪಡ್ಡೆಗಳ ಅಡ್ಡದಲ್ಲಿ‌ಅಡ್ಡಾಡ್ತಿದ್ದು, ಬ್ರಹ್ಮಚಾರಿಗೆ ಪ್ಲಸ್ ಪಾಯಿಂಟ್ ಆಗಿದೆ.ಸದ್ಯ ಬ್ರಹ್ಮಚಾರಿ ಸೆನ್ಸಾರ್ ಕದ ತಟ್ಟಲು ರೆಡಿಯಾಗಿದ್ದು ಎಲ್ಲಾ ಅಂದು ಕೊಂಡಂತೆ ಅದ್ರೆ ನವಂಬರ್ ಕೊನೆಯವಾರದಲ್ಲಿ ಚಿತ್ರವನ್ನು ರಿಲೀಸ್ ಮಾಡುವ ಪ್ಲಾನ್ ಮಾಡಿರುವುದಾಗಿ ನಿರ್ಮಾಪಕ ಉದಯ್ ಮೆಹ್ತಾ ತಿಳಿಸಿದ್ದಾರೆ.

ಸತೀಶ ಎಂಬಿ


Conclusion:

ABOUT THE AUTHOR

...view details