ಕರ್ನಾಟಕ

karnataka

ನಟಿ ಸಂಜನಾ ಗಲ್ರಾನಿ ಹೊಸ ಕಿರಿಕ್: ಕ್ಯಾಬ್ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದನೆ, ದೂರು ದಾಖಲು..

By

Published : Oct 5, 2021, 10:57 PM IST

Updated : Oct 7, 2021, 3:12 PM IST

ಮಂಗಳವಾರ ಬೆಳಗ್ಗೆ ಚಿತ್ರೀಕರಣ ಸ್ಥಳಕ್ಕೆ ಹೋಗಲು ಸಂಜನಾ ಓಲಾ ಕ್ಯಾಬ್ ಬುಕ್ ಮಾಡಿದ್ದರು. ರಾಜಧಾನಿಯ ಇಂದಿರಾನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಬದಲಿಗೆ ರಾಜರಾಜೇಶ್ವರಿನಗರಕ್ಕೆ ಬುಕ್ ಮಾಡಿದ್ದರು. ಕ್ಯಾಬ್ ಬಂದ ಬಳಿಕ ತಾನು ಕೆಂಗೇರಿಗೆ ಹೊರಡಬೇಕು ಎಂದು ಸಂಜನಾ ಹೇಳಿದ್ದಾರೆ.

actress-sanjana-galrani
ನಟಿ ಸಂಜನಾ ಗಲ್ರಾನಿ

ಬೆಂಗಳೂರು: ಪದೇ ಪದೆ ಒಂದಲ್ಲ ಒಂದು ವಿಷಯದಲ್ಲಿ ಸುದ್ದಿಯಾಗುತ್ತಿರುವ ನಟಿ ಸಂಜನಾ ಗಲ್ರಾನಿ ಇದೀಗ ಕ್ಯಾಬ್ ಚಾಲಕನ ಜತೆ ಕಿರಿಕ್ ಮಾಡಿಕೊಂಡು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಓಲಾ ಕ್ಯಾಬ್ ಚಾಲಕ ಸುಸೈ ಮಣಿ ಎಂಬವರು ಸಂಜನಾ ಗಲ್ರಾನಿ ವಿರುದ್ಧ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇಲೆ ತನಿಖೆ ಕೈಗೊಂಡಿದ್ದು, ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಜನಾ ಆಕ್ರೋಶ

ಮಂಗಳವಾರ ಬೆಳಗ್ಗೆ ಚಿತ್ರೀಕರಣ ಸ್ಥಳಕ್ಕೆ ಹೋಗಲು ಸಂಜನಾ ಓಲಾ ಕ್ಯಾಬ್ ಬುಕ್ ಮಾಡಿದ್ದರು. ರಾಜಧಾನಿಯ ಇಂದಿರಾನಗರದಿಂದ ಕೆಂಗೇರಿಗೆ ಕ್ಯಾಬ್ ಬುಕ್ ಮಾಡಬೇಕಿತ್ತು. ಬದಲಿಗೆ ರಾಜರಾಜೇಶ್ವರಿನಗರಕ್ಕೆ ಬುಕ್ ಮಾಡಿದ್ದಾರೆ. ಕ್ಯಾಬ್ ಬಂದ ಬಳಿಕ ತಾನು ಕೆಂಗೇರಿಗೆ ಹೊರಡಬೇಕು ಎಂದು ಸಂಜನಾ ಹೇಳಿದ್ದಾರೆ.

ಈ ವಿಚಾರವಾಗಿ ಓಲಾ ಚಾಲಕ ಓಲಾ ಕಸ್ಟಮರ್ ಕೇರ್ ಗೆ ಕರೆ ಮಾಡಿ ಲೊಕೇಶನ್ ಬದಲಾಯಿಸುವಂತೆ ಹೇಳಿದ್ದ. ಆದರೆ, ಹಲವು ಕಾರಣಗಳಿಂದ ಲೊಕೇಶನ್ ಬದಲಾಗಿಲ್ಲ. ಈ ವಿಚಾರವಾಗಿ ಚಾಲಕ ಮತ್ತು ಸಂಜನಾ ನಡುವೆ ಜಟಾಪಟಿ ಶುರುವಾಗಿ, ಇಬ್ಬರ ನಡುವೆ ವಾಗ್ವಾದ ನಡೆದು ಸಂಜನಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ದರ್ಪ ತೋರಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಂತರ ಎ.ಸಿ ಆನ್ ಮಾಡುವಂತೆ ಕೇಳಿದ್ದಾರೆ. ಆನ್ ಮಾಡಿದ ಮೇಲೂ ಅನಗತ್ಯವಾಗಿ ತೊಂದರೆ ಕೊಟ್ಟು ನಿಂದಿಸಿದ್ದಾರೆಎಂದು ಚಾಲಕ ದೂರು ನೀಡಿದ್ದಾನೆ.

ನಟಿ ಸಂಜನಾ ಟ್ವೀಟ್​

ಟ್ವೀಟ್‍ನಲ್ಲಿ ಸಂಜನಾ ಆಕ್ರೋಶ: ಈ ಘಟನೆಯನ್ನು ನಟಿ ಸಂಜನಾ ಟ್ವೀಟ್ ಮಾಡಿ ಓಲಾ ಕ್ಯಾಬ್ ನಂಬರ್ ಮತ್ತು ಹೆಸರು ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಎ.ಸಿ ಹೆಚ್ಚು ಮಾಡುವಂತೆ ಹೇಳಿದ್ದಕ್ಕೆ ಚಾಲಕ ಉಡಾಫೆ ಉತ್ತರ ನೀಡಿದ. ಕ್ಯಾಬ್‍ನ ಕಿಟಕಿ ಸಹ ಸರಿಯಾಗಿ ಇರಲಿಲ್ಲ. ಪೂರ್ಣ ಪ್ರಯಾಣದ ಹಣ ನೀಡಿದರೂ ಇಂತಹ ಕಾರನ್ನು ಏಕೆ ಒದಗಿಸುತ್ತೀರಿ? ಎಂದು ಓಲಾ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಸಾಕಷ್ಟು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಚಾಲಕ ದೂರು ನೀಡಿರುವುದು

ಕೊನೆಗೂ ರಾಜಿ?
ಸದ್ಯ ಸಂಜನಾ ಹಾಗೂ ಚಾಲಕ ಇಬ್ಬರನ್ನೂ ಠಾಣೆಗೆ ಕರೆಸಿರುವ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಪ್ರಕರಣ ಸದ್ಯ ರಾಜಿಯಲ್ಲಿ ಇತ್ಯರ್ಥಗೊಂಡಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ದೂರು

ಓದಿ:ಆರ್ಯನ್​ ಒಳ್ಳೆಯ ಹುಡುಗ; ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾದಂತಿದೆ ಎಂದ ಸುಸೇನ್ ಖಾನ್

Last Updated : Oct 7, 2021, 3:12 PM IST

ABOUT THE AUTHOR

...view details