ಕರ್ನಾಟಕ

karnataka

ನಟ ಸತೀಶ್ ನೀನಾಸಂಗೆ ಮಾತೃ ವಿಯೋಗ.. ಚಿತ್ರರಂಗದ ಗಣ್ಯರ ಕಂಬನಿ

By

Published : Oct 1, 2021, 1:13 PM IST

Updated : Oct 1, 2021, 1:24 PM IST

ನಟ ನೀನಾಸಂ ಸತೀಶ್ ಅವರ ತಾಯಿ ಇಂದು ಕೊನೆಯುಸಿರೆಳೆದಿದ್ದಾರೆ. ಆರ್.ಆರ್ ನಗರದಲ್ಲಿರುವ ನಿವಾಸದಲ್ಲಿ ಚಿಕ್ಕ ತಾಯಮ್ಮ ಇಹಲೋಕ ತ್ಯಜಿಸಿದ್ದಾರೆ.

actor-sathish-ninasam-mother-passed-away
ನಟ ಸತೀಶ್ ನೀನಾಸಂಗೆ ಮಾತೃನಿಯೋಗ

ನಟ ಸತೀಶ್ ನೀನಾಸಂ ಅವರ ತಾಯಿ ಚಿಕ್ಕ ತಾಯಮ್ಮ ನಿಧನ ಹೊಂದಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ನಟ ದರ್ಶನ್​ ಜೊತೆಗಿದ್ದ ಸಂದರ್ಭ

ಇತ್ತೀಚೆಗೆ ಚಿಕ್ಕ ತಾಯಮ್ಮ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು. 85 ವರ್ಷದರಾಗಿದ್ದ ಚಿಕ್ಕ ತಾಯಮ್ಮ ಇಂದು ಬೆಳಗ್ಗೆ 9.30ರ ಸುಮಾರಿಗೆ ಆರ್.ಆರ್ ನಗರದಲ್ಲಿರುವ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.

ತಾಯಿ ಚಿಕ್ಕ ತಾಯಮ್ಮ ಜೊತೆ ಸತೀಶ್ ನೀನಾಸಂ

ಹಲವಾರು ವರ್ಷಗಳಿಂದ ಸತೀಶ್ ನೀನಾಸಂ, ತಮ್ಮ ತಾಯಿ‌ಯನ್ನು ಆರ್.ಆರ್ ನಗರದಲ್ಲಿರುವ ನಿವಾಸದಲ್ಲಿ ನೋಡಿಕೊಳ್ಳುತ್ತಿದ್ದರು. ಸತೀಶ್ ಆಪ್ತರು ಹೇಳುವಂತೆ ಮಂಡ್ಯದ ಹತ್ತಿರ ಯಲ್ಲದುಹಳ್ಳಿಯಲ್ಲಿ ತಾಯಿಯ ಅಂತ್ಯ ಸಂಸ್ಕಾರ ನೆರವೇರಿಸಲು ತೀರ್ಮಾನಿಸಲಾಗಿದೆ. ಚಿಕ್ಕ ತಾಯಮ್ಮರ ಅಗಲಿಕೆಗೆ, ನೀನಾಸಂ ಅವರ ಸ್ನೇಹಿತರು ಹಾಗೂ ಸಿನಿಮಾರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

ಇದನ್ನೂ ಓದಿ:ಮಲಪ್ರಭಾ ನದಿಗೆ ಕಂದನೊಂದಿಗೆ ತಾಯಿ ಜಿಗಿದಿದ್ದ 2 ದಿನಗಳ ಬಳಿಕ ಮಗುವಿನ ಶವ ಪತ್ತೆ

Last Updated : Oct 1, 2021, 1:24 PM IST

ABOUT THE AUTHOR

...view details