ಕರ್ನಾಟಕ

karnataka

ಬಾಲಕಿ ಮೇಲೆ ಅತ್ಯಾಚಾರ-ಕೊಲೆ: ನೀನಾಸಂ ಸತೀಶ್ ಖಂಡನೆ, ಶಿಕ್ಷೆಗೆ ಆಗ್ರಹ

By

Published : Dec 5, 2020, 3:49 PM IST

ನಟ ಸತೀಶ್ ನೀನಾಸಂ ಮಂಡ್ಯದ ಹುರುಗಲವಾಡಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಹಾಗೂ ಕೊಲೆ ಘಟನೆಯನ್ನು ಖಂಡಿಸಿದ್ದಾರೆ.

Actor Neenasam Satish tweeted condemning rape
ಬಾಲಕಿ ಮೇಲಿನ ಅತ್ಯಾಚಾರ ಖಂಡಿಸಿ ಟ್ವೀಟ್​​​ ಮಾಡಿದ ನೀನಾಸಂ ಸತೀಶ್

ಮಂಡ್ಯದ ಹುರುಗಲವಾಡಿಯಲ್ಲಿ ಬಾಲಕಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ನಟ ನೀನಾಸಂ ಸತೀಶ್​​​​ ಟ್ವೀಟ್​​ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ಹುರುಗಲವಾಡಿಯಲ್ಲಿ ಮುದ್ದು ಕಂದಮ್ಮನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ಕೇಳಿ ಆಘಾತವಾಯಿತು. ಮನುಷ್ಯ ಸಂತತಿ ಬೆಳೆದಂತೆಲ್ಲ ಅವನ ವಿಕೃತಿಗಳು ಹೆಚ್ಚುತ್ತಿವೆ. ಎಷ್ಟೇ ವಿದ್ಯಾವಂತರಾದರೂ ಹೆಣ್ಣಿಗೆ ರಕ್ಷಣೆ ಸಿಗುವಲ್ಲಿ ಸಮಾಜ ವಿಫಲವಾಗುತ್ತಿರುವುದು ದುರಂತ. ಈ ಕೃತ್ಯಕ್ಕೆ ಕಾರಣನಾದ ದುಷ್ಟನಿಗೆ ಬೇಗ ಶಿಕ್ಷೆಯಾಗಲಿ ಎಂದು ಬರೆದಿದ್ದಾರೆ.

ಡಿ. 2ರಂದು ಯುವಕನೊಬ್ಬ ಮಂಡ್ಯದಲ್ಲಿ ಕಬ್ಬಿನ ಹೊಲದಲ್ಲಿ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ್ದ. ಈ ಸಂಬಂಧ ಎಲ್ಲಾ ಕಡೆ ಖಂಡನೆ ವ್ಯಕ್ತವಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ABOUT THE AUTHOR

...view details