ಕರ್ನಾಟಕ

karnataka

ಮುಂಬೈನಲ್ಲಿ ನಟ ಸಿದ್ದಾರ್ಥ್ ಶುಕ್ಲಾ ಅಂತ್ಯಸಂಸ್ಕಾರ.. ಕಂಬನಿ ಮಿಡಿದ ಬಾಲಿವುಡ್ ಸ್ಟಾರ್ಸ್​

By

Published : Sep 3, 2021, 4:37 PM IST

ಮೂಲಗಳ ಪ್ರಕಾರ ನಟನ ಅಂತ್ಯ ಸಂಸ್ಕಾರ ಪ್ರಕ್ರಿಯೆ ಬ್ರಹ್ಮಕುಮಾರಿ ಚಿತಾಗಾರದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿ ಅನುಮತಿ ಸಿಗದ ಹಿನ್ನೆಲೆ ಓಶಿವಾರಾದಲ್ಲಿ ನಡೆಸಲಾಗಿದೆ ಎನ್ನಲಾಗ್ತಿದೆ. ಬಿಗ್​ಬಾಸ್ 13ರ ವಿನ್ನರ್ ಆಗಿದ್ದ ಶುಕ್ಲಾ ಬಾಲಿಕ ವಧು ಟಿವಿ ಸೀರಿಯಲ್​ನಿಂದ ಹೆಚ್ಚು ಜನಪ್ರಿಯತೆ ಗಳಿಸಿದ್ದರು..

sidharth-shuklas-last-rites-to-be-held-at-mumbais-oshiwara-crematorium
ಮುಂಬೈನಲ್ಲಿ ನಟ ಸಿದ್ದಾರ್ಥ್ ಶುಕ್ಲಾ ಅಂತ್ಯಸಂಸ್ಕಾರ

ಹೈದರಾಬಾದ್ :ಟೆಲಿವಿಷನ್ ಸ್ಟಾರ್​​​ ಸಿದ್ದಾರ್ಥ್ ಶುಕ್ಲಾ ಅಕಾಲಿಕ ಮರಣ ದೇಶದ ಜನತೆ ಶಾಕ್​ಗೆ ಒಳಗಾಗುವಂತೆ ಮಾಡಿದೆ. 40 ವರ್ಷದ ನಟ ಹೃದಯಾಘಾತದಿಂದ ಮೃತಪಟ್ಟಿದ್ದು, ಇಂದು ಅವರ ಅಂತ್ಯಸಂಸ್ಕಾರ ನೆರವೇರಿದೆ.

ಮರಣೋತ್ತರ ಪರೀಕ್ಷೆಯ ನಂತರ ಅವರ ಮುಂಬೈ ನಿವಾಸಕ್ಕೆ ಮೃತದೇಹವನ್ನ ತರಲಾಗಿತ್ತು. ಈ ವೇಳೆ ಬಾಲಿವುಡ್​​ನ ಹಲವು ನಟರು ಅಂತಿಮ ನಮನ ಸಲ್ಲಿಸಿದ್ದಾರೆ. ಅಂತಿಮ ವಿಧಿವಿಧಾನ ನೆರವೇರಿಸಿದ ಬಳಿಕ ಮುಂಬೈನ ಓಶಿವಾರಾ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರ ನೆರವೇರಿದೆ.

ಮೂಲಗಳ ಪ್ರಕಾರ ನಟನ ಅಂತ್ಯ ಸಂಸ್ಕಾರ ಪ್ರಕ್ರಿಯೆ ಬ್ರಹ್ಮಕುಮಾರಿ ಚಿತಾಗಾರದಲ್ಲಿ ನಡೆಯಬೇಕಿತ್ತು. ಆದರೆ, ಅಲ್ಲಿ ಅನುಮತಿ ಸಿಗದ ಹಿನ್ನೆಲೆ ಓಶಿವಾರಾದಲ್ಲಿ ನಡೆಸಲಾಗಿದೆ ಎನ್ನಲಾಗ್ತಿದೆ. ಬಿಗ್​ಬಾಸ್ 13ರ ವಿನ್ನರ್ ಆಗಿದ್ದ ಶುಕ್ಲಾ ಬಾಲಿಕ ವಧು ಟಿವಿ ಸೀರಿಯಲ್​ನಿಂದ ಹೆಚ್ಚು ಜನಪ್ರಿಯತೆ ಗಳಿಸಿದ್ದರು.

ABOUT THE AUTHOR

...view details