ಕರ್ನಾಟಕ

karnataka

ರಣತಂಬೋರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ ಬಾಲಿವುಡ್​ ಲವ್​ಬರ್ಡ್ಸ್ ?

By

Published : Dec 30, 2020, 5:52 PM IST

Updated : Dec 30, 2020, 7:52 PM IST

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ರಾಜಸ್ಥಾನದ ರಣತಂಬೋರ್‌ನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ರಣಬೀರ್ ಹಾಗೂ ಆಲಿಯಾ ಕುಟುಂಬ ಜೈಪುರದ ರಣಥಂಬೋರ್ ಅಮನ್ ಹೋಟೆಲ್​ನಲ್ಲಿ ತಂಗಿದ್ದು, ಅಲ್ಲೇ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎಂಬ ಮಾಹಿತಿ ದೊರೆತಿದೆ.

Ranbir Kapoor and Alia Bhatt getting engaged in Ranthambore?
ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್

ಬಾಲಿವುಡ್​ನ ಲವ್​ಬರ್ಡ್ಸ್​ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ತಮ್ಮ ಪ್ರೀತಿಯನ್ನು ಬಹಿರಂಗ ಪಡಿಸದಿದ್ದರೂ, ಇಬ್ಬರ ಪ್ರೀತಿಯ ವಿಚಾರ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಆದರೂ ಈ ಜೋಡಿ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರು. ಇದೀಗ ಸದ್ದಿಲ್ಲದೆ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್

ಇಬ್ಬರು ರಾಜಸ್ಥಾನದ ರಣಂತಬೋರ್‌ನಲ್ಲಿರುವ ಐಷಾರಾಮಿ ಹೋಟೆಲ್​ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದ ಈ ಜೋಡಿ ಇದೀಗ ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಹಸೆಮಣೆ ಏರಲು ಸಜ್ಜಾಗಿದೆ. ಮಂಗಳವಾರ ರಣಬೀರ್ ಮತ್ತು ಆಲಿಯಾ ಕುಟುಂಬ ಜೈಪುರ್​ಗೆ ತೆರಳಿದೆ. ರಣಬೀರ್ ಹಾಗೂ ಆಲಿಯಾ ಕುಟುಂಬ ಜೈಪುರದ ರಣಥಂಬೋರ್ ಅಮನ್ ಹೋಟೆಲ್​ನಲ್ಲಿ ತಂಗಿದ್ದು, ಅಲ್ಲೇ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ ಎನ್ನಲಾಗುತ್ತಿದೆ.

ರಣಬೀರ್ ಮತ್ತು ರಣವೀರ್ ಅವರೊಂದಿಗೆ ನೀತು

ವಿಶೇಷ ಎಂದರೆ ನಟಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್ ಕೂಡ ಜೈಪುರ್​ಗೆ ತೆರಳಿದ್ದು, ರಣಬೀರ್ ಮತ್ತು ಅಲಿಯಾ ನಿಶ್ಚಿತಾರ್ಥದ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ರಣಬೀರ್ ತಾಯಿ ನೀತು ಅವರು, ರಣಬೀರ್ ಮತ್ತು ರಣವೀರ್ ಅವರೊಂದಿಗಿರುವ ಸೆಲ್ಫಿಯನ್ನ ಇನ್​ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಆಲಿಯಾ ಮತ್ತು ರಣಬೀರ್ ಅನೇಕ ವರ್ಷಗಳಿಂದ ಪ್ರೀತಿಯಲ್ಲಿದ್ದಾರೆ. ಇಬ್ಬರು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ.

ಆಲಿಯಾ, ರಣಬೀರ್ ಜೋಡಿ 'ಬ್ರಹ್ಮಾಸ್ತ್ರ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಬಳಿಕ 2018 ರ ಮೇ ತಿಂಗಳಲ್ಲಿ ಸೋನಮ್ ಕಪೂರ್ ಅವರ ವಿವಾಹದಲ್ಲಿ ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿತ್ತು.

Last Updated :Dec 30, 2020, 7:52 PM IST

ABOUT THE AUTHOR

...view details