ಕರ್ನಾಟಕ

karnataka

ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ನಟಿಸಿದ್ದ ಹ್ಯಾಬಿಟ್ ಸಾಂಗ್​ ರಿಲೀಸ್

By

Published : Oct 20, 2021, 9:12 PM IST

ಈ ಹಾಡಿಗೆ ಶ್ರೇಯಾ ಘೋಷಾಲ್ ಮತ್ತು ಅರ್ಕೋ ಸಂಗೀತ ಸಂಯೋಜಿಸಿದ್ದಾರೆ. ಸರಿಗಮ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಗೊಂಡಿದ್ದು, ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲು ಬಿಡುಗಡೆಯಾಗಿದೆ.

ಹಾಬಿಟ್ ಸಾಂಗ್​ ರಿಲೀಸ್
ಹಾಬಿಟ್ ಸಾಂಗ್​ ರಿಲೀಸ್

ಮುಂಬೈ: ಟೆಲಿವಿಷನ್ ಸ್ಟಾರ್ ನಟ ದಿವಂಗತ ಸಿದ್ಧಾರ್ಥ್ ಶುಕ್ಲಾ ಕೊನೆಯದಾಗಿ ನಟಿಸಿರುವ ಸಾಂಗೊಂದು ಇಂದು ಬಿಡುಗಡೆಗೊಂಡಿದೆ. ಹ್ಯಾಬಿಟ್ ಎನ್ನುವ ಆಲ್ಬಮ್ ಸಾಂಗ್​​ನ್ನ​​ ಇಂದು ಯೂಟ್ಯೂಬ್‌ನಲ್ಲಿ ಅಪ್ಲೋಡ್​​ ಮಾಡಲಾಗಿದ್ದು, ಇದರಲ್ಲಿ ಅವರ ಬಹು ಕಾಲದ ಗೆಳತಿ ಶೆಹನಾಜ್ ಗಿಲ್ ಕೂಡಾ ನಟಿಸಿದ್ದಾರೆ.

ಈ ಹಾಡನ್ನೂ ನಟ ದಿವಂಗತ ಸಿದ್ಧಾರ್ಥ್ ಶುಕ್ಲಾಗೆ ಅರ್ಪಿಸಲಾಗಿದೆ. ಕಳೆದ ವರ್ಷ ಈ ಜನಪ್ರಿಯ ಜೋಡಿಯನ್ನ ಇಟ್ಟುಕೊಂಡು ಈ ಹಾಡು ಚಿತ್ರೀಕರಿಸಲಾಗಿತ್ತು. ಈ ಸಾಂಗ್​ ಇಂದು ಬಿಡುಗಡೆಗೊಂಡಿದ್ದು, ಸಿದ್ಧಾರ್ಥ್ ಶುಕ್ಲಾ ಅಭಿಮಾನಿಗಳಿಗೆ ಖುಷಿ ನೀಡಿದೆ.

ಈ ಹಾಡಿಗೆ ಶ್ರೇಯಾ ಘೋಷಾಲ್ ಮತ್ತು ಅರ್ಕೋ ಸಂಗೀತ ಸಂಯೋಜಿಸಿದ್ದಾರೆ. ಸರಿಗಮ ಮ್ಯೂಸಿಕ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಗೊಂಡಿದ್ದು, ನಿಗದಿತ ದಿನಾಂಕಕ್ಕಿಂತ ಒಂದು ದಿನ ಮೊದಲು ಬಿಡುಗಡೆಯಾಗಿದೆ.

ಮ್ಯೂಸಿಕ್ ವಿಡಿಯೋಗೆ ಮೊದಲು ಅದೂರ ಎಂದು ಹೆಸರಿಡಲಾಗಿತ್ತು ನಂತರ ಅದನ್ನು ಅಭಿಮಾನಿಗಳ ಬೇಡಿಕೆಯ ಮೇರೆಗೆ ಬದಲಾಯಿಸಲಾಯಿತು. ಇತ್ತೀಚೆಗೆ ಹಾಡಿನ ಮೊದಲ ಪೋಸ್ಟರ್, ಅಧುರ ಬಿಡುಗಡೆಯಾದಾಗ, ದಿವಂಗತ ನಟನ ಅಭಿಮಾನಿಗಳು ಹಾಡಿನ ಹೆಸರನ್ನು ಹ್ಯಾಬಿಟ್ ಎಂದು ಬದಲಾಯಿಸುವಂತೆ ಒತ್ತಾಯಿಸಿದರು.

ಬಾಬುಲ್ ಕಿ ಆಂಗನ್ ಚೂಟಿ ನಾ, ದಿಲ್ ಸೆ ದಿಲ್ ತಕ್ ಮತ್ತು ಬಾಲಿಕಾ ವಧು, ಧಾರಾವಾಹಿಗಳಲ್ಲಿ ನಟಿಸಿದ್ದ ಸಿದ್ಧಾರ್ಥ್ ಶುಕ್ಲಾ, ಬಿಗ್ ಬಾಸ್ 13 ಸಿಸನ್​​ರ ವಿಜೇತರು ಕೂಡಾ. ಸಿದ್ಧಾರ್ಥ್ ಅವರು ತಮ್ಮ 40 ನೇ ವಯಸ್ಸಿನಲ್ಲಿ ಸೆಪ್ಟೆಂಬರ್ 2 ರಂದು ಹೃದಯಾಘಾತದಿಂದ ನಿಧನರಾಗಿದ್ದರು.

ABOUT THE AUTHOR

...view details