ಕರ್ನಾಟಕ

karnataka

'ಮಲಾಂಗ್' ನಿರ್ದೇಶಕನಿಗೆ ಬರ್ತಡೇ ವಿಶ್ ಮಾಡಿದ ದಿಶಾ ಪಠಾಣಿ

By

Published : Apr 11, 2020, 10:59 PM IST

'ಮಲಾಂಗ್' ಚಿತ್ರದ ನಿರ್ದೇಶಕ ಮೋಹಿತ್ ಸೂರಿ ಇಂದು ಬರ್ತಡೇ ಆಚರಿಸಿಕೊಂಡಿದ್ದು ನಟಿ ದಿಶಾ ಪಠಾಣಿ ಇನ್ಸ್​ಟಾಗ್ರಾಮ್​​​ನಲ್ಲಿ ತಮ್ಮ ಹಾಗೂ ಮೋಹಿತ್ ಹಳೆಯ ಫೋಟೋವನ್ನು ಷೇರ್ ಮಾಡುವ ಮೂಲಕ ವಿಶ್ ಮಾಡಿದ್ದಾರೆ.

Disha Patani
ದಿಶಾ ಪಠಾಣಿ

ಬಾಲಿವುಡ್ ಸಿನಿಮಾ 'ಮಲಾಂಗ್' ನಿರ್ದೇಶಕ ಮೋಹಿತ್ ಸೂರಿ ಇಂದು ತಮ್ಮ 39ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಮೋಹಿತ್​​ಗೆ ಬಾಲಿವುಡ್​​​​​​ ಗಣ್ಯರು ಬರ್ತಡೇ ಶುಭ ಕೋರಿದ್ದಾರೆ. ಆದರೆ ಲಾಕ್​ ಡೌನ್​​ ಇರುವ ಕಾರಣ ಮೋಹಿತ್ ತಮ್ಮ ಹುಟ್ಟುಹಬ್ಬವನ್ನು ಮನೆಯಲ್ಲೇ ಕುಟುಂಬದ ಸದಸ್ಯರೊಂದಿಗೆ ಸರಳವಾಗಿ ಆಚರಿಸಿಕೊಂಡಿದ್ದಾರೆ.

ಇನ್ನು ನಟಿ ದಿಶಾ ಪಠಾಣಿ ಕೂಡಾ ಮೋಹಿತ್ ಬರ್ತಡೇಗೆ ಶುಭ ಕೋರಿದ್ದಾರೆ. ಇನ್ಸ್​​​​​ಟಾಗ್ರಾಮ್​​ನಲ್ಲಿ ಸೂರಿ ಅವರೊಂದಿಗೆ ಇರುವ ಹಳೆಯ ಪೋಟೋವೊಂದನ್ನು ಷೇರ್ ಮಾಡಿದ್ದಾರೆ. 'ಅತ್ಯದ್ಭುತ ವ್ಯಕ್ತಿತ್ವದ ಸೂರಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ನಿಮಗೆ ಒಳ್ಳೆಯದಾಗಲಿ, ಯಾವಾಗಲೂ ನಾವು ನಿಮ್ಮನ್ನು ಪ್ರೀತಿಸುತ್ತೇವೆ ಮೋಹಿತ್ ಸರ್'​ ಎಂದು ಬರೆದುಕೊಂಡಿದ್ದಾರೆ. ದಿಶಾ ಷೇರ್ ಮಾಡಿಕೊಂಡಿರುವ ಫೋಟೋದಲ್ಲಿ ಮೋಹಿತ್ ಏನೋ ವಿವರಿಸುತ್ತಿದ್ದು ದಿಶಾ ಆಸಕ್ತಿಯಿಂದ ಕೇಳುತ್ತಿದ್ದಾರೆ. ಈ ವರ್ಷ ಫೆಬ್ರವರಿ 7 ರಂದು 'ಮಲಾಂಗ್' ಚಿತ್ರ ಬಿಡುಗಡೆಯಾಗಿ ಬಾಕ್ಸ್​ ಆಫೀಸಿನಲ್ಲಿ ಲಾಭ ಗಳಿಸಿತ್ತು.

ಚಿತ್ರದಲ್ಲಿ ದಿಶಾ ಜೊತೆ ಆದಿತ್ಯ ರಾವ್ ಕಪೂರ್, ಅನಿಲ್ ಕಪೂರ್, ಕುನಾಲ್ ಕೆಮ್ಮು ಹಾಗೂ ಇನ್ನಿತರರು ನಟಿಸಿದ್ದರು. ಈ ರೊಮ್ಯಾಂಟಿಕ್, ಆ್ಯಕ್ಷನ್, ಥ್ರಿಲ್ಲರ್ ಚಿತ್ರವನ್ನು ಲವ್ ರಂಜನ್, ಅಂಕುರ್ ಗಾರ್ಗ್, ಭೂಷಣ್ ಕುಮಾರ್, ಕೃಷ್ಣ ಕುಮಾರ್ ಹಾಗೂ ಜೈ ಶ್ವೇಕರ್ಮಣಿ ಜೊತೆ ಸೇರಿ ನಿರ್ಮಿಸಿದ್ದರು. 2014 ರಲ್ಲಿ ಸೂಪರ್ ಹಿಟ್ ಆದ 'ಏಕ್ ವಿಲನ್' ಚಿತ್ರದ ಸೀಕ್ವೆಲನ್ನು ಮೋಹಿತ್ ಸೂರಿ ನಿರ್ದೇಶಿಸುತ್ತಿದ್ದು ದಿಶಾ ಮತ್ತೊಮ್ಮೆ ಸೂರಿ ಜೊತೆ ಕೆಲಸ ಮಾಡಲಿದ್ದಾರೆ. ಈ ಚಿತ್ರದಲ್ಲಿ ದಿಶಾ ಜೊತೆಗೆ ಆದಿತ್ಯ ರಾಯ್ ಕಪೂರ್, ಜಾನ್ ಅಬ್ರಹಾಂ ನಟಿಸುತ್ತಿದ್ಧಾರೆ ಎನ್ನಲಾಗಿದೆ.

ABOUT THE AUTHOR

...view details