ಕರ್ನಾಟಕ

karnataka

ವಾರಾಣಸಿಯಲ್ಲಿ ಬ್ರಹ್ಮಾಸ್ತ್ರ ಚಿತ್ರದ ಅಂತಿಮ ಶೂಟಿಂಗ್‌; ಆಲಿಯಾ - ರಣಬೀರ್‌ ಫೋಟೋ, ವಿಡಿಯೋ ವೈರಲ್‌

By

Published : Mar 23, 2022, 11:13 AM IST

Updated : Mar 23, 2022, 12:36 PM IST

ಆಲಿಯಾ ಭಟ್-ರಣಬೀರ್ ಕಪೂರ್ ಅಭಿನಯದ ಬ್ರಹ್ಮಾಸ್ತ್ರ ಚಿತ್ರದ ಅಂತಿಮ ಶೂಟಿಂಗ್‌ ವಾರಾಣಸಿಯಲ್ಲಿ ನಡೆಯುತ್ತಿದ್ದು, ಆಲಿಯಾ ಹಾಗೂ ರಣಬೀರ್‌ ಶೂಟಿಂಗ್‌ನಲ್ಲಿ ತಲ್ಲೀನರಾಗಿರುವ ದೃಶ್ಯಗಳು ಹಾಗೂ ಫೋಟೋಗಳು ವೈರಲ್‌ ಆಗಿವೆ.

Alia-Ranbir in Varanasi for Brahmastra last schedule, video leaks from shoot
ವಾರಣಾಸಿಯಲ್ಲಿ ಬ್ರಹ್ಮಾಸ್ತ್ರ ಚಿತ್ರದ ಕೊನೆಯ ಶೂಟಿಂಗ್‌; ಅಲಿಯಾ-ರಣಬೀರ್‌ ಫೋಟೋ, ವಿಡಿಯೋ ವೈರಲ್‌

ವಾರಾಣಸಿ (ಉತ್ತರ ಪ್ರದೇಶ): ಬಾಲಿವುಡ್‌ ಲವ್​ ಬರ್ಡ್ಸ್​ ಆಲಿಯಾ ಭಟ್-ರಣಬೀರ್ ಕಪೂರ್ ಬ್ರಹ್ಮಾಸ್ತ್ರ ಸಿನಿಮಾದ ಅಂತಿಮ ಶೂಟಿಂಗ್‌ ಮುಗಿಸಿಲು ವಾರಾಣಸಿಯಲ್ಲಿ ಬೀಡು ಬಿಟ್ಟಿದ್ದಾರೆ. ಶೂಟಿಂಗ್ ಸ್ಥಳದಿಂದ ಈ ಜೋಡಿಯ ಹಲವಾರು ದೃಶ್ಯಗಳು ಜಾಲತಾಣಗಳಲ್ಲಿ ವೈರಲ್‌ ಆಗಿವೆ. ಆಲಿಯಾ, ರಣಬೀರ್, ಚಿತ್ರ ನಿರ್ಮಾಪಕ ಅಯಾನ್ ಮುಖರ್ಜಿ ವಾರಾಣಸಿಯ ಘಾಟ್ ಒಂದರಲ್ಲಿ ಚಿತ್ರೀಕರಣ ಮಾಡುವುದನ್ನು ಕಾಣಬಹುದು.

ವೈರಲ್ ಆಗಿರುವ ವಿಡಿಯೋಗಳು ಮತ್ತು ಫೋಟೋಗಳಲ್ಲಿ ಆಲಿಯಾ ಮತ್ತು ರಣಬೀರ್ ಕ್ರಮವಾಗಿ ಹಳದಿ ಮತ್ತು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿದ್ದಾರೆ. ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ರಣಬೀರ್ ಮತ್ತು ಆಲಿಯಾ ಕಾಣಿಸಿಕೊಂಡಿದ್ದರು. ನಂತರ ಇಬ್ಬರೂ ರಜೆ ದಿನಗಳನ್ನು ಕಳೆಯಲು ಹೊರ ದೇಶಕ್ಕೆ ಹೋಗುತ್ತಿರಬಹುದು ಎಂದು ಅಭಿಮಾನಿಗಳು ಊಹಿಸಿದ್ದರು. ಆದರೆ ಬ್ರಹ್ಮಾಸ್ತ್ರ ಚಿತ್ರದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ವಾರಾಣಸಿಗೆ ಬಂದಿಳಿದೆ ಎಂಬುದು ನಂತರ ತಿಳಿದಿದೆ. ಕಳೆದ ಏಳು ವರ್ಷಗಳಿಂದ ಈ ಸಿನಿಮಾ ನಿರ್ಮಾಣದ ಹಂತದಲ್ಲಿದೆ.

2021ರ ಡಿಸೆಂಬರ್‌ನಲ್ಲಿ ಚಿತ್ರದಲ್ಲಿ ರಣಬೀರ್ ಕಪೂರ್ ಅವರ ಶಿವ ಪಾತ್ರದ ಫೋಟೋ ಬಿಡುಗಡೆ ಮಾಡಲಾಗಿತ್ತು. ಇದಾದ ಬಳಿಕ ನಿರ್ದೇಶಕ ಅಯಾನ್ ಮುಖರ್ಜಿ ಮತ್ತು ಚಿತ್ರ ತಂಡ ಮಾರ್ಚ್ 15 ರಂದು ಅಲಿಯಾ ಜನ್ಮ ದಿನಾಚರಣೆ ನಿಮಿತ್ತ ಸಿನಿಮಾದಲ್ಲಿನ ಭಟ್‌ ಅವರ ಪಾತ್ರದ ಪೋಸ್ಟರ್‌ ಬಿಡುಗಡೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್‌ ನೀಡಿತ್ತು.

ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಧರ್ಮಾ ಪ್ರೊಡಕ್ಷನ್ಸ್, ಪ್ರೈಮ್ ಫೋಕಸ್ ಮತ್ತು ಸ್ಟಾರ್‌ಲೈಟ್ ಪಿಕ್ಚರ್ಸ್ ನಿರ್ಮಿಸಿರುವ ಅಯನ್ ಮುಖರ್ಜಿ ನಿರ್ದೇಶನದ ಈ ಸಿನಿಮಾ ಸೆಪ್ಟೆಂಬರ್ 9 ರಂದು 5 ಭಾರತೀಯ ಭಾಷೆಗಳಾದ ಹಿಂದಿ, ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಅಮಿತಾಭ್ ಬಚ್ಚನ್, ರಣಬೀರ್ ಕಪೂರ್, ಆಲಿಯಾ ಭಟ್, ಮೌನಿ ರಾಯ್ ಹಾಗೂ ನಾಗಾರ್ಜುನ ಅಕ್ಕಿನೇನಿ ಪ್ರಮುಖ ತಾರಾಗಣ ಇರುವ ಚಿತ್ರವಾಗಿದೆ.

ಇದನ್ನೂ ಓದಿ:ಕಂಗನಾ ರಣಾವತ್‌ಗೆ 35ನೇ ಹುಟ್ಟುಹಬ್ಬದ ಸಂಭ್ರಮ; ವೈಷ್ಣೋ ದೇವಿ ದರ್ಶನ ಪಡೆದ ತಲೈವಿ

Last Updated : Mar 23, 2022, 12:36 PM IST

TAGGED:

ABOUT THE AUTHOR

...view details