ಕರ್ನಾಟಕ

karnataka

ಬಿಗ್ ಬಿಗೆ 78 ನೇ ಹುಟ್ಟುಹಬ್ಬದ ಸಂಭ್ರಮ

By

Published : Oct 11, 2020, 10:19 AM IST

ಇಂದು ಬಿಗ್​ ಬಿಗೆ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ಅಮಿತಾಬ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅವರು ಟ್ರ್ಯಾಕ್ ಸೂಟ್ ಧರಿಸಿ, ಫೇಸ್ ಮಾಸ್ಕ್ ಧರಿಸಿ, ಮೈಕ್ ಮುಂದೆ ಕುಳಿತು ಮುಂಭಾಗದ ಪರದೆಯನ್ನು ನೋಡುತ್ತಿದ್ದಾರೆ.

ಅಮಿತಾಬ್ ಬಚ್ಚನ್ ಹುಟ್ಟುಹಬ್ಬ
ಅಮಿತಾಬ್ ಬಚ್ಚನ್ ಹುಟ್ಟುಹಬ್ಬ

ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ 78 ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಕ್ಷಾಂತರ ಅಬಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ.

ಕೌನ್ ಬನೇಗಾ ಕರೋಡ್​ಪತಿ ಧ್ವನಿ ಮುದ್ರಣ

ಅವರ 78 ನೇ ಹುಟ್ಟುಹಬ್ಬದ ಮುನ್ನಾದಿನ ಬಿಗ್ ಬಿ ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅವರು ಟ್ರ್ಯಾಕ್ ಸೂಟ್ ಧರಿಸಿ, ಫೇಸ್ ಮಾಸ್ಕ್ ಧರಿಸಿ, ಮೈಕ್ ಮುಂದೆ ಕುಳಿತು ಮುಂಭಾಗದ ಪರದೆಯನ್ನು ನೋಡುತ್ತಿದ್ದಾರೆ. ಬೆಳಗ್ಗೆ 9 ರಿಂದ ರಾತ್ರಿ 9 ರವರೆಗೆ ಕೌನ್ ಬನೇಗಾ ಕರೋಡ್​ಪತಿ ಚಿತ್ರೀಕರಣದ ನಂತರ ಧ್ವನಿ ಮುದ್ರಣಕ್ಕಾಗಿ ಸ್ಟುಡಿಯೋಗೆ ಮರಳಿರುವುದಾಗಿ ಬರೆದುಕೊಂಡಿದ್ದಾರೆ.

ಮೊಮ್ಮಗಳೊಂದಿಗೆ ಬಿಗ್​ ಬಿ

ಅಮಿತಾಬ್ ಯಾವಾಗಲೂ ತಮ್ಮ ಜನ್ಮದಿನವನ್ನು ಬಹಳ ಸರಳವಾಗಿ ಆಚರಿಸುತ್ತಾರೆ. ಅವರು ತಮ್ಮ ಜನ್ಮದಿನದಂದು ಹೆಚ್ಚಾಗಿ ಕೆಲಸದಲ್ಲಿ ಕಳೆಯಲು ಇಷ್ಟಪಡುತ್ತಾರೆ. ಈ ವರ್ಷ ಅಕ್ಟೋಬರ್ 11 ಭಾನುವಾರ ಕಾರಣ ತಮ್ಮ ಕುಟುಂಬ ಮತ್ತು ಮೊಮ್ಮಕ್ಕಳೊಂದಿಗೆ ಮನೆಯಲ್ಲಿ ಸಮಯ ಕಳೆಯುವ ಮೂಲಕ ಈ ದಿನವನ್ನು ಆಚರಿಸಬಹುದು.

ABOUT THE AUTHOR

...view details