ಕರ್ನಾಟಕ

karnataka

ಹೊಸ ಫೀಚರ್ ಪರಿಚಯಿಸಿದ WhatsApp: ಈ ವಿಶೇಷತೆ ನಿಮಗೆ ಗೊತ್ತಿರಲಿ!

By

Published : May 23, 2023, 7:23 AM IST

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ ವಾಟ್ಸ್​ಆ್ಯಪ್​ ಅಪ್ಲಿಕೇಶನ್‌ ಅಪ್‌ಡೇಟ್ ಆಗುತ್ತಲೇ ಇರುತ್ತದೆ. ಈಗ ಹೊಸ ಫೀಚರ್​ಪರಿಚಯಿಸಿದೆ.

Representative image
ಪ್ರಾತಿನಿಧಿಕ ಚಿತ್ರ

ವಾಷಿಂಗ್ಟನ್ (ಯುಎಸ್): ಮೆಟಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಜುಕರ್‌ಬರ್ಗ್ ಸೋಮವಾರ ವಾಟ್ಸ್​ಆ್ಯಪ್​​ನಲ್ಲಿ ಹೊಸ ವೈಶಿಷ್ಟ್ಯವನ್ನು ಘೋಷಿಸಿದ್ದಾರೆ. ಇದು ಬಳಕೆದಾರರು ಸಂದೇಶಗಳನ್ನು ಕಳುಹಿಸಿದ ನಂತರ 15 ನಿಮಿಷಗಳವರೆಗೆ ಎಡಿಟ್​ ಮಾಡಬಹುದಾದ ಆಯ್ಕೆ ನೀಡುತ್ತದೆ.

'ತಪ್ಪು ಮಾಡಿದಾಗ ಅಥವಾ ನೀವು ಮನಸ್ಸು ಬದಲಾಯಿಸಿದಾಗ ನೀವು ಕಳುಹಿಸಿದ ಸಂದೇಶಗಳನ್ನು ಎಡಿಟ್​ ಮಾಡಲು ನಿಮಗೆ ಅನುಮತಿಸುತ್ತದೆ. ಇದು ನಿಮ್ಮ ಚಾಟ್‌ಗಳ ಮೇಲೆ ಹೆಚ್ಚಿನ ನಿಯಂತ್ರಣವನ್ನು ನೀಡುತ್ತದೆ. ಸರಳ ಅಕ್ಷರವನ್ನು ಸರಿಪಡಿಸುವುದರಿಂದ ಹಿಡಿದು ಸಂದೇಶಕ್ಕೆ ಹೆಚ್ಚುವರಿ ವಿಷಯ ಸೇರಿಸುವವರೆಗೆ ನಿಮ್ಮ ಚಾಟ್‌ಗಳ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ತರಲು ನಾವು ಉತ್ಸುಕರಾಗಿದ್ದೇವೆ' ಎಂದು ವಾಟ್ಸ್​ಆ್ಯಪ್​ ಹೇಳಿದೆ.

ಈ ಸಂಬಂಧ ವಾಟ್ಸ್​ಆ್ಯಪ್​ ಟ್ವಿಟ್ಟರ್​ನಲ್ಲಿ ವಿಡಿಯೋ ಹಂಚಿಕೊಂಡಿದೆ. ಚಾಟ್​ ಬಬಲ್​ನಲ್ಲಿ ತಪ್ಪಾದ ಸಂದೇಶವನ್ನು ತೋರಿಸಲಾಗುತ್ತದೆ. ಬಳಿಕ ಅದನ್ನು ಸರಿಪಡಿಸಲಾಗುತ್ತದೆ. ಈ ಚಟುವಟಿಕೆಯನ್ನು ವಿಡಿಯೋದಲ್ಲಿ ನೀವು ಕಾಣಬಹುದು.

ಬೀಟಾ ವರ್ಷನ್​ ಬಳಕೆದಾರರರ ಪ್ರಕಾರ ವಾಟ್ಸ್​ಆ್ಯಪ್​ನಲ್ಲಿ ಸಂದೇಶ ಕಳುಹಿಸಿದ 15 ನಿಮಿಷಗಳವರೆಗೆ ಎಡಿಟ್​ ಮಾಡಲು ಅವಕಾಶ ಕಲ್ಪಿಸಲಾಗುತ್ತದೆ. ಮೆಸೇಜ್ ಎಡಿಟ್​ ಮಾಡಲು ಬಳಕೆದಾರರು ತಾವು ಎಡಿಟ್​ ಮಾಡಬೇಕಿರುವ ಸಂದೇಶವನ್ನು ಒತ್ತಿ ಹಿಡಿಯಬೇಕು. ಬಳಿಕ ಸ್ಕ್ರೀನ್​ ಮೇಲ್ಭಾಗದಲ್ಲಿ ಕಾಣುವ 3 ಚುಕ್ಕೆಗಳ ಮೇಲೆ ಟ್ಯಾಪ್​ ಮಾಡಿ ಅಲ್ಲಿರುವ ಎಡಿಟ್​ ಆಪ್ಷನ್​ ಆಯ್ಕೆ ಮಾಡಬೇಕು. ಆಗ ಕೀಬೋರ್ಡ್ ಹೈಲೆಟ್​ನೊಂದಿಗೆ ಪಠ್ಯ(ಸಂದೇಶ) ತೋರಿಸುತ್ತದೆ. ಆಗ ನಿಮಗೆ ಬೇಕಾದ ರೀತಿಯಲ್ಲಿ ಎಡಿಟ್​​ ಮಾಡಬಹುದು.

ಎಲ್ಲ ವೈಯಕ್ತಿಕ ಸಂದೇಶಗಳು, ಮಾಧ್ಯಮ ಮತ್ತು ಕರೆಗಳಂತೆ ನಿಮ್ಮ ಸಂದೇಶಗಳು ಮತ್ತು ನೀವು ಮಾಡುವ ಎಡಿಟ್​ ಪಠ್ಯಗಳನ್ನು ಗೂಢಲಿಪೀಕರಣದಿಂದ (ಎನ್‍ಕ್ರಿಪ್ಶನ್ ಪಾಲಿಸಿ) ರಕ್ಷಿಸಲಾಗಿದೆ ಎಂದು ಅದು ಹೇಳಿದೆ. ಈ ವೈಶಿಷ್ಟ್ಯವು ಜಾಗತಿಕವಾಗಿ ಬಳಕೆದಾರರಿಗೆ ಹೊರತರಲು ಪ್ರಾರಂಭಿಸಿದೆ. ಮುಂಬರುವ ವಾರಗಳಲ್ಲಿ ಇದು ಎಲ್ಲರಿಗೂ ಲಭ್ಯ.

ಇದಕ್ಕೂ ಮೊದಲು ಜುಕರ್‌ಬರ್ಗ್ ಮೇ 15 ರಂದು ಬಳಕೆದಾರರ ಅತ್ಯಂತ ನಿಕಟ ಸಂಭಾಷಣೆಗಳನ್ನು ಇನ್ನಷ್ಟು ಖಾಸಗಿಯಾಗಿ ಮಾಡಲು 'ಚಾಟ್ ಲಾಕ್' ಎಂಬ ಹೊಸ ವಾಟ್ಸ್​ಆ್ಯಪ್​ ವೈಶಿಷ್ಟ್ಯವನ್ನು ಪರಿಚಯಿಸಿದ್ದರು. ಈ ವೈಶಿಷ್ಟ್ಯವು ನಿಮ್ಮ ಅತ್ಯಂತ ನಿಕಟ ಸಂಭಾಷಣೆಗಳನ್ನು ಪಾಸ್‌ವರ್ಡ್‌ನೊಂದಿಗೆ ರಕ್ಷಿಸಲು ಅನುಮತಿಸುತ್ತದೆ ಮತ್ತು ಅವುಗಳನ್ನು ಪ್ರತ್ಯೇಕ ಫೋಲ್ಡರ್‌ನಲ್ಲಿ ಸುರಕ್ಷಿತಗೊಳಿಸುತ್ತದೆ. ಯಾರಾದರೂ ನಿಮಗೆ ಸಂದೇಶಗಳನ್ನು ಕಳುಹಿಸಿದಾಗ ಮತ್ತು ನೀವು ಆ ಚಾಟ್ ಅನ್ನು ಲಾಕ್ ಮಾಡಿದಾಗ, ಕಳುಹಿಸುವವರ ಹೆಸರು ಮತ್ತು ಸಂದೇಶದ ವಿಷಯವನ್ನು ಸಹ ಮರೆಮಾಡಲಾಗುತ್ತದೆ.

ಜುಕರ್‌ಬರ್ಗ್ ಅವರ ಪ್ರಕಟಣೆಯಲ್ಲಿ, "ನಾವು ಚಾಟ್ ಲಾಕ್ ಎಂದು ಕರೆಯುವ ಹೊಸ ವೈಶಿಷ್ಟ್ಯವನ್ನು ನಿಮಗೆ ತರಲು ಉತ್ಸುಕರಾಗಿದ್ದೇವೆ. ಇದು ನಿಮ್ಮ ಅತ್ಯಂತ ನಿಕಟ ಸಂಭಾಷಣೆಗಳನ್ನು ರಕ್ಷಿಸಲು ನಿಮಗೆ ಅನುಮತಿಸುತ್ತದೆ. ಚಾಟ್ ಅನ್ನು ಲಾಕ್ ಮಾಡುವುದರಿಂದ ಆ ಪಠ್ಯವನ್ನು ಇನ್‌ಬಾಕ್ಸ್‌ನಿಂದ ಅಳಿಸಿಹಾಕುತ್ತದೆ. ಅದನ್ನು ನಿಮ್ಮ ಸಾಧನದ ಪಾಸ್‌ವರ್ಡ್ ಅಥವಾ ಬಯೋಮೆಟ್ರಿಕ್‌ನೊಂದಿಗೆ ಪ್ರವೇಶಿಸಬಹುದಾದ ಫಿಂಗರ್‌ಪ್ರಿಂಟ್‌ನಂತಹ ತನ್ನದೇ ಆದ ಫೋಲ್ಡರ್‌ನಲ್ಲಿ ಉಳಿಸುತ್ತದೆ. ಇದು ಸ್ವಯಂಚಾಲಿತವಾಗಿ ಆ ಚಾಟ್‌ನ ವಿಷಯಗಳನ್ನು ಅಧಿಸೂಚನೆಗಳಲ್ಲಿಯೂ ಮರೆಮಾಡುತ್ತದೆ" ಎಂದು ಅವರು ಹೇಳಿದ್ದರು.

ಇದನ್ನೂ ಓದಿ:ವಾಟ್ಸ್​ಆ್ಯಪ್​ ಹೊಸ ಅಪ್ಡೇಟ್​: ಮೀಡಿಯಾ ಫೈಲ್ಸ್​ ಶೇರಿಂಗ್​ ಮಿತಿ 30ರಿಂದ 100ಕ್ಕೆ ಏರಿಕೆ

ABOUT THE AUTHOR

...view details