ಕರ್ನಾಟಕ

karnataka

ವಾಟ್ಸ್​​ಆ್ಯಪ್​​ನಿಂದ ಶೆಡ್ಯೂಲ್​ ಗ್ರೂಪ್​ ಕಾಲ್​​ ತಂತ್ರಜ್ಞಾನ ಅಭಿವೃದ್ದಿ.. ತಪ್ಪು ಸಂದೇಶ ಕಳುಹಿಸಿದ್ದರೆ ಅದನ್ನ ನವೀಕರಿಸ ಬಹುದಂತೆ!

By

Published : Feb 28, 2023, 5:12 PM IST

ವಾಟ್ಸ್​ಆ್ಯಪ್​​ನಿಂದ ಮತ್ತೊಂದು ಹೊಸ ಫೀಚರ್​​ - ಶೆಡ್ಯೂಲ್​ ಗ್ರೂಪ್​ ಕಾಲ್ ವ್ಯವಸ್ಥೆ ​ಅಭಿವೃದ್ಧಿ - ವಾಟ್ಸ್ಆ್ಯಪ್​​​ ಸಂದೇಶಗಳನ್ನು ನವೀಕರಿಸಲು ತಂತ್ರಜ್ಞಾನ ಅಭಿವೃದ್ದಿ

WhatsApp may bring schedule group calls to future update
ವಾಟ್ಸಾಪ್​ನಿಂದ ಶೆಡ್ಯೂಲ್​ ಗ್ರೂಪ್​ ಕಾಲ್​​ ತಂತ್ರಜ್ಞಾನ ಅಭಿವೃದ್ದಿ

ಸ್ಯಾನ್ ಫ್ರಾನ್ಸಿಸ್ಕೋ( ಅಮೆರಿಕ): ಮೆಟಾ ಒಡೆತನದ ವಾಟ್ಸ್​ಆ್ಯಪ್​ ಒಂದಿಲ್ಲೊಂದು ಹೊಸ ಹೊಸ ವೈಶಿಷ್ಠ್ಯಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸುತ್ತಲೇ ಇರುತ್ತದೆ. ತನ್ನ ಹೊಸ ಉದ್ಯಮಶೀಲತೆಯ ದೃಷ್ಟಿಯಿಂದಿ ಇದೀಗ ಮತ್ತೊಂದು ಹೊಸ ವೈಶಿಷ್ಠ್ಯವನ್ನು ತನ್ನ ಬಳಕೆದಾರರಿಗೆ ಪರಿಚಯಿಸಲು ಮುಂದಾಗಿದೆ. ಹಾಗೇಯೆ ತನ್ನ ಗ್ರಾಹಕರಿಗೆ ಇನ್ನಷ್ಟು ವಿಶಿಷ್ಠತೆಗಳನ್ನೊಂಡಗೊಂಡ ಹೊಸ ಬಗೆಯ ಅನುಭವ ಕೊಡುವ ನಿಟ್ಟಿನಲ್ಲಿ ಮೆಟಾ ಕಾರ್ಯನಿರ್ವಹಿಸುತ್ತಿದೆ. ಇನ್ನು ಮೆಟಾ ವಾಟ್ಸ್​ಆ್ಯಪ್​ ಬಳಕೆದಾರರಿಗೆ ಶೆಡ್ಯೂಲ್​ ಗ್ರೂಪ್​ ಕಾಲ್ಸ್ ​ ಫೀಚರ್​ನ್ನು ಪರಿಚಯಿಸಲು ಮುಂದಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿದೆ ಎಂದು ವರದಿಯಾಗಿದೆ.

ಶೆಡ್ಯೂಲ್​ ಗ್ರೂಪ್​ ಕಾಲ್​ ಫೀಚರ್​ :WABetaInfo ಮಾಹಿತಿ ಪ್ರಕಾರ, ಈ ತಂತ್ರಜ್ಞಾನ ಇನ್ನೂ ಅಭಿವೃದ್ಧಿ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್​​ ಮತ್ತು ಐಒಎಸ್ ಬಳಕೆದಾರರಿಗೆ ಇದು ಲಭ್ಯವಾಗಲಿದೆ. ಇನ್ನು ಈ ಶೆಡ್ಯೂಲ್​ ಗ್ರೂಪ್​ ಕಾಲ್ಸ್​ (ವೇಳಾಪಟ್ಟಿ ಗುಂಪು ಕರೆ) ತಂತ್ರಜ್ಞಾನವು ವಾಟ್ಸ್​ಆ್ಯಪ್​​ ​ ಬಳಕೆದಾರರು ಇತರ ವಾಟ್ಸ್​ಆ್ಯಪ್​​ ​​ ಗುಂಪಿನ ಸದಸ್ಯರೊಂದಿಗೆ ಕರೆ ಮಾಡಲು ಬಳಕೆ ಮಾಡಬಹುದಾಗಿದೆ. ಇಲ್ಲಿ ಬಳಕೆದಾರರಿಗೆ ಒಂದು ಆಯ್ಕೆಯನ್ನು ನೀಡಲಾಗಿರುತ್ತದೆ. ಈ ಆಯ್ಕೆಯ ಮೂಲಕ ಬಳಕೆದಾರರು ಯಾವಾಗ ಮತ್ತು ಯಾರಿಗೆ ಕರೆ ಮಾಡಬಹುದು ಎಂಬುದನ್ನು ನಿರ್ಧರಿಸಬಹುದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ ಎಂದು WABetaInfo ತನ್ನ ವರದಿಯಲ್ಲಿ ಹೇಳಿದೆ.

ಇನ್ನು ಈ ಶೆಡ್ಯೂಲ್​ ಗ್ರೂಪ್​ ಕಾಲ್ ತಂತ್ರಜ್ಞಾನದಿಂದ ಆಡಿಯೋ ಮತ್ತು ವಿಡಿಯೋ ಕರೆಗಳನ್ನೂ ಕೂಡಾ ನಿಮಗೆ ಬೇಕಾದ ದಿನ, ಗಂಟೆ ಎಂದು ಮೊದಲೇ ನಿರ್ಧರಿಸಿ ನಿಗದಿ ಮಾಡಬಹುದು. ಇನ್ನು ಯಾವುದೇ ವ್ಯಕ್ತಿ ಕರೆ ಮಾಡಿದಾಗ ಆ ಗುಂಪಿನಲ್ಲಿರುವ ಎಲ್ಲ ಸದಸ್ಯರಿಗೆ ಕರೆ ಹೋಗುತ್ತದೆ. ಈ ವೇಳೆ ನಮಗೆ ನೋಟಿಫಿಕೇಶನ್​​ ದೊರೆಯುವುದರಿಂದ ತಕ್ಷಣ ಆ ಕರೆಯಲ್ಲಿ ನಾವು ಸೇರಿಕೊಳ್ಳಬಹುದಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಸಂದೇಶಗಳನ್ನು ನವೀಕರಿಸಲು ಅವಕಾಶ :ಇದರ ಜೊತೆಗೆ ಬಳಕೆದಾರರು ಕಳುಹಿಸುವ ಸಂದೇಶಗಳನ್ನು ನವೀಕರಿಸಲು ಬೇಕಾದ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸುವಲ್ಲಿ ಮೆಟಾ ಕಂಪನಿ ಗಂಭೀರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿದೆ. ಈ ತಂತ್ರಜ್ಞಾನದ ಮೂಲಕ ನಾವು ಕಳುಹಿಸಿದ ಸಂದೇಶವನ್ನು 15 ನಿಮಿಷಗಳ ಒಳಗಾಗಿ ಅದರಲ್ಲಿರುವ ತಪ್ಪು ಸರಿಪಡಿಸುವ, ಮತ್ತು ಇದಕ್ಕೆ ಹೆಚ್ಚಿನ ವಿಷಯಗಳನ್ನು ಸೇರಿಸುವ ಅವಕಾಶವನ್ನು ಕಲ್ಪಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಈ ಹೊಸ ವೈಶಿಷ್ಠ್ಯ ಲಭ್ಯವಾದಲ್ಲಿ ಟೈಪಿಸುವಿಕೆಯಲ್ಲಿ ಏನಾದರೂ ತಪ್ಪಾದರೆ, ಸ್ಪೆಲ್ಲಿಂಗ್​ ಮಿಸ್ಟೇಕ್​ ಆದರೆ ಅದನ್ನು ಸರಿಪಡಿಸಬಹುದಾಗಿದೆ. ಇದು ಬಳಕೆದಾರರಿಗೆ ಭಾರಿ ಅನುಕೂಲ ಮಾಡಿಕೊಡಲಿದೆ. ತಪ್ಪಾದ ಮೆಸೇಜ್​ಗಳನ್ನು 15 ನಿಮಿಷಗಳ ಒಳಗಾಗಿ ನಾವು ನವೀಕರಿಸಬಹುದು. ಈ ತಂತ್ರಜ್ಞಾನವು ಅಭಿವೃಧ್ಧಿ ಹಂತದಲ್ಲಿದ್ದು, ಬೀಟಾ ಪರೀಕ್ಷಕರ ಬಿಡುಗಡೆಗೆ ಸಿದ್ದವಾಗಿಲ್ಲ ಎಂದು ಮೆಟಾ ತಿಳಿಸಿದೆ ಎಂದು WABetaInfo ತಿಳಿಸಿದೆ.

ಇದನ್ನೂ ಓದಿ :ನೋಕಿಯಾ ಲೋಗೊ ಬದಲಾವಣೆ: 60 ವರ್ಷಗಳಲ್ಲಿ ಇದೇ ಮೊದಲ ಬಾರಿ!

ABOUT THE AUTHOR

...view details