ಕರ್ನಾಟಕ

karnataka

ನವೆಂಬರ್​ 9ರಂದು ನಭಕ್ಕೆ ಜಿಗಿಯಲು ಸಿದ್ಧವಾಯಿತು ನಾಸಾ- ಸ್ಪೇಸ್​ಎಕ್ಸ್​ ಮಿಷನ್​

By ETV Bharat Karnataka Team

Published : Nov 6, 2023, 5:24 PM IST

NASA, SpaceX mission; ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಭೂಮಿಯ ಮೇಲಿನ ವಾತಾವರಣ ತಿಳಿಯಲು ಸಹಾಯ ಮಾಡಲಿದೆ.

NASA SpaceX mission ready to launch from ISS on November 9
NASA SpaceX mission ready to launch from ISS on November 9

ವಾಷಿಂಗ್ಟನ್​​: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಎಲಾನ್​ ಮಸ್ಕ್​ ಅವರ ಸ್ಪೇಸ್​ ಎಕ್ಸ್​​ ಜಂಟಿಯಾಗಿ ರೂಪಿಸಿರುವ ಯೋಜನೆ ಇದೇ ನವೆಂಬರ್​ 9ರಂದು ಉಡಾವಣೆಗೆ ಸಜ್ಜಾಗಿದೆ. ಸಂಸ್ಥೆಯ 39ನೇ ವಾಣಿಜ್ಯ ಮರುಪೂರೈಕೆಯ ಸೇವೆ ಮಿಷನ್​ (ಸಿಆರ್​​ಎಸ್​ 29) ಇಂಟರ್​ನ್ಯಾಷನಲ್​ ಸ್ಪೇಸ್​ ಸ್ಟೇಷನ್​ನಿಂದ (ಐಎಸ್​ಎಸ್​) ನಭಕ್ಕೆ ಜಿಗಿಯಲಿದೆ.

ಈ ಬೃಹದಾಕರದ ಡ್ರಾಗನ್​ ಕಪ್ಸ್ಯೂಲ್ 5,800 ಪೌಂಡ್​ ಕಾರ್ಗೋ ಸೇರಿದಂತೆ ನಾಸಾದ ವಿವಿಧ ತನಿಖೆಗಳನ್ನು ಬಾಹ್ಯಾಕಾಶ ಕೇಂದ್ರಕ್ಕೆ ಹೊತ್ತು ಸಾಗಲಿದೆ. ಈ ಬಾಹ್ಯಾಕಾಶ ನೌಕೆಯು ತಿಂಗಳ ಕಾಲ ಕಕ್ಷೆಯಲ್ಲಿರಲಿದ್ದು, ಮಾಸದ ಬಳಿಕ ಸಂಶೋಧನೆ ಮತ್ತು ರಿಟರ್ನ್​ ಕಾರ್ಗೊದೊಂದಿಗೆ ಭೂಮಿಗೆ ವಾಪಸಾಗಲಿದೆ. ಇದು ಫ್ಲೋರಿಡಾದ ಕಡಲ ತೀರದಲ್ಲಿ ಬಂದಿಳಿಯಲಿದೆ ಎಂದು ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ.

ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯು ಭೂಮಿಯ ಮೇಲಿನ ವಾತಾವರಣ ಮತ್ತು ಬಾಹ್ಯಾಕಾಶದ ಮೂಲಕ ಶಕ್ತಿಯ ಹರಿವನ್ನು ಅರ್ಥಮಾಡಿಕೊಳ್ಳಲು ವಾತಾವರಣದ ಗುರುತ್ವಾಕರ್ಷಣೆಯ ಅಲೆಗಳನ್ನು ಅಧ್ಯಯನ ಮಾಡುವ ನಾಸಾದ ಎಡಬ್ಲೂಇ ಸೇರಿದಂತೆ ಅಂತಾರಾಷ್ಟ್ರೀಯ ಸಿಬ್ಬಂದಿಗೆ ಹೊಸ ವಿಜ್ಞಾನ ತನಿಖೆಗಳು, ಆಹಾರ, ಸರಬರಾಜು ಮತ್ತು ಉಪಕರಣಗಳನ್ನು ತಲುಪಿಸುತ್ತದೆ.

ಬಾಹ್ಯಾಕಾಶ ನೌಕೆಯು ನಾಸಾದ ಇಲ್ಲುಮಾ- ಟಿ (ಇಂಟಿಗ್ರೇಟೆಡ್ ಲೇಸರ್ ಕಮ್ಯುನಿಕೇಷನ್ಸ್ ರಿಲೇ ಡೆಮಾನ್‌ಸ್ಟ್ರೇಷನ್ ಲೋ-ಅರ್ಥ್-ಆರ್ಬಿಟ್ ಯೂಸರ್ ಮೋಡೆಮ್ ಮತ್ತು ಆಂಪ್ಲಿಫೈಯರ್ ಟರ್ಮಿನಲ್) ಅನ್ನು ತಲುಪಿಸುತ್ತದೆ. ಇದು ಏಜೆನ್ಸಿಯ ಎಲ್​ಸಿಆರ್​ಡಿ (ಲೇಸರ್ ಕಮ್ಯುನಿಕೇಷನ್ಸ್ ರಿಲೇ ಡೆಮಾನ್​​ಸ್ಟ್ರೇಷನ್​) ಮೂಲಕ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಹೆಚ್ಚಿನ ಡೇಟಾ ದರದ ಲೇಸರ್ ಸಂವಹನಗಳನ್ನು ಪರೀಕ್ಷಿಸುವ ಗುರಿಯನ್ನು ಹೊಂದಿದೆ. ಇಲ್ಯುಮಾ- ಟಿ ಮತ್ತು ಎಲ್​ಸಿಆರ್​ಡಿ ನಾಸಾದ ಮೊದಲ ಎರಡು ದಾರಿಯನ್ನು ಪೂರ್ಣಗೊಳಿಸಲಿದೆ ಎಂದು ನಾಸಾ ತಿಳಿಸಿದೆ.

ಆರಂಭದಲ್ಲಿ ಈ ಯೋಜನೆಯನ್ನು ನವೆಂಬರ್ 5 ರಂದು ಉಡಾವಣೆ ನಡೆಸಲು ತೀರ್ಮಾನಿಸಲಾಗಿತ್ತು. ಸಿಆರ್​ಎಸ್​-29 ಮಿಷನ್ ಪೂರ್ವಭಾವಿ ಸಿದ್ಧತೆಗಳಿಗೆ ಹೆಚ್ಚುವರಿ ಸಮಯವನ್ನು ಒದಗಿಸಲು ನವೆಂಬರ್ 7 ಕ್ಕೆ ಮುಂದೂಡಲಾಯಿತು. ಇದೀಗ ನವೆಂಬರ್​ 9ಕ್ಕೆ ಇದರ ಉಡಾವಣೆಗೆ ಮುಹೂರ್ತ ನಿಗದಿಸಲಾಗಿದೆ. ಯೋಜನೆ ಎರಡು ದಿನದ ವಿಳಂಬಕ್ಕೆ ಕಾರಣ ಡ್ರ್ಯಾಗನ್​ ಥ್ರಸ್ಟರ್‌ ಒಂದರಲ್ಲಿ ಸಮಸ್ಯೆ ಕಾಣಿಸಿಕೊಂಡಿರುವುದಾಗಿದೆ. ಈ ಯೋಜನೆ ನವೆಂಬರ್​ 9ರಂದು ಅಲ್ಲಿನ ಕಾಲಮಾನ ರಾತ್ರಿ 8:28ಕ್ಕೆ (ಭಾರತೀಯ ಕಾಲಮಾನ ನವೆಂಬರ್​ 10ರ ಮುಂಜಾನೆ 5:58) ನಭಕ್ಕೆ ಜಿಗಯಲಿದೆ. (ಐಎಎನ್​ಎಸ್​)

ಇದನ್ನೂ ಓದಿ:ಶೈಕ್ಷಣಿಕ ಅಧ್ಯಯನಕ್ಕಾಗಿ ಶೇ 35ರಷ್ಟು ವಿದ್ಯಾರ್ಥಿಗಳಿಂದ ಚಾಟ್​ಜಿಪಿಟಿ ಬಳಕೆ; ಸಮೀಕ್ಷಾ ವರದಿ

ABOUT THE AUTHOR

...view details