ನವದೆಹಲಿ :ಹಿಂದೂ ಮಹಾಸಾಗರದಲ್ಲಿ ಮೂರು ಮಿಲಿಯನ್ ಚದರ ಕಿಲೋಮೀಟರ್‌ಗಿಂತಲೂ ಹೆಚ್ಚು ವ್ಯಾಪ್ತಿಯಲ್ಲಿರುವ ದೈತ್ಯ ಗುರುತ್ವಾಕರ್ಷಣೆಯ ರಂಧ್ರಕ್ಕೆ (gravity hole) ಕಾರಣವೇನು ಎಂಬುದನ್ನು ಭಾರತೀಯ ವಿಜ್ಞಾನಿಗಳ ತಂಡವು ಗುರುತಿಸಿದೆ. ಹಿಂದೂ ಮಹಾಸಾಗರದ ಜಿಯೋಯ್ಡ್ ಲೋ (IOGL) (geoid low) ಎಂದು ಕರೆಯಲ್ಪಡುವ ಇದು ಭೂಮಿಯ ಪ್ರಮುಖ ಗುರುತ್ವಾಕರ್ಷಣೆಯ ವೈಪರೀತ್ಯವಾಗಿದ್ದು, ಇಲ್ಲಿ ಗುರುತ್ವಾಕರ್ಷಣೆಯು ಸರಾಸರಿಗಿಂತ ಕಡಿಮೆಯಾಗಿದೆ. ಹೀಗಾಗಿ ಇಲ್ಲಿನ ಸಮುದ್ರ ಮಟ್ಟವು ಜಾಗತಿಕ ಸರಾಸರಿಗಿಂತ 106 ಮೀಟರ್ ಕಡಿಮೆಯಾಗಿದೆ.
ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್‌ನಲ್ಲಿ ಪ್ರಕಟವಾದ ಅಧ್ಯಯನವು, IOGL ಹಿಂದೂ ಮಹಾಸಾಗರದ ಕೆಳಗಿರುವ ಭೂಮಿಯ ಪದರಿನೊಳಗೆ ದ್ರವ್ಯರಾಶಿ ಕೊರತೆಯ ಪರಿಣಾಮವಾಗಿದೆ ಎಂದು ತೋರಿಸಿದೆ. ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಯ ವಿಜ್ಞಾನಿಗಳು ಕಳೆದ 140 ಮಿಲಿಯನ್ ವರ್ಷಗಳ ಪ್ಲೇಟ್ ಟೆಕ್ಟೋನಿಕ್ ಚಲನೆಯ ಮಾದರಿಯನ್ನು ಮರು ನಿರ್ಮಾಣ ಮಾಡಿದ್ದಾರೆ ಗುರುತ್ವಾಕರ್ಷಣೆಯ ರಂಧ್ರದ ಮೂಲವನ್ನು ಪತ್ತೆಹಚ್ಚಲು ಕಂಪ್ಯೂಟರ್ ಸಿಮ್ಯುಲೇಶನ್‌ಗಳನ್ನು ನಡೆಸಿದರು.
ಟೆಕ್ಟೋನಿಕ್ ಪ್ಲೇಟ್‌ಗಳ ಕೆಲವು ವಿಭಾಗಗಳು ಆಫ್ರಿಕಾದ ಕೆಳಗಿರುವ ಭೂಪದರುಗಳ ಮೂಲಕ ಮುಳುಗಿ, ಹಿಂದೂ ಮಹಾಸಾಗರದ ಅಡಿ ಪ್ಲೂಮ್‌ಗಳನ್ನು ಉತ್ಪಾದಿಸುತ್ತವೆ ಎಂದು ಅವರು ಕಂಡು ಹಿಡಿದಿದ್ದಾರೆ. "ಇಲ್ಲಿ ನಾವು 140 Ma ನಿಂದ ಪ್ರಾರಂಭವಾಗುವ ಜಾಗತಿಕ ಮ್ಯಾಂಟಲ್ ಸಂವಹನ ಮಾದರಿಗಳಲ್ಲಿ ಪ್ಲೇಟ್ ಪುನರ್ನಿರ್ಮಾಣದ ಮಾದರಿಯನ್ನು ಸಂಯೋಜಿಸಿದ್ದೇವೆ. ಇದರ ಪ್ರಕಾರ ಮುಳುಗುವ ಟೆಥಿಯಾನ್ ಚಪ್ಪಡಿಗಳು ಆಫ್ರಿಕನ್ ಲಾರ್ಜ್ ವೆಲಾಸಿಟಿ ಪ್ರಾಂತ್ಯವನ್ನು ವಿಚಲಿತಗೊಳಿಸಿದವು ಮತ್ತು ಹಿಂದೂ ಮಹಾಸಾಗರದ ಕೆಳಗೆ ಪ್ಲೂಮ್‌ಗಳನ್ನು ಉತ್ಪಾದಿಸಿದವು. ಇದು ಈ ನಕಾರಾತ್ಮಕ ಜಿಯೋಯ್ಡ್ ಅಸಂಗತತೆಯ ರಚನೆಗೆ ಕಾರಣವಾಯಿತು" ಎಂದು ವಿಜ್ಞಾನಿಗಳು ಅಧ್ಯಯನದಲ್ಲಿ ತಿಳಿಸಿದ್ದಾರೆ.