ಕರ್ನಾಟಕ

karnataka

ಪ್ರತಿ 10ರಲ್ಲಿ 7 ಹದಿಹರೆಯದವರು ನಿತ್ಯ ಯೂಟ್ಯೂಬ್ ನೋಡ್ತಾರೆ; ಅಧ್ಯಯನ

By ETV Bharat Karnataka Team

Published : Dec 12, 2023, 8:05 PM IST

ಪ್ರತಿ 10 ಹದಿಹರೆಯದವರ ಪೈಕಿ 7 ಜನ ನಿತ್ಯ ಯೂಟ್ಯೂಬ್ ನೋಡುತ್ತಾರೆ ಎಂದು ವರದಿಯೊಂದು ಹೇಳಿದೆ.

7 in 10 teens visit YouTube daily: Report
7 in 10 teens visit YouTube daily: Report

ಸ್ಯಾನ್ ಫ್ರಾನ್ಸಿಸ್ಕೋ : ಪ್ರತಿ 10 ಹದಿಹರೆಯದವರ ಪೈಕಿ 7 ಜನ ಪ್ರತಿದಿನ ಯೂಟ್ಯೂಬ್ ನೋಡುತ್ತಾರೆ ಹಾಗೂ ಇವರ ಪೈಕಿ ಶೇ 16 ರಷ್ಟು ಜನ ಬಹುತೇಕ ಯಾವಾಗಲೂ ಯೂಟ್ಯೂಬ್ ನೋಡುತ್ತಿರುತ್ತಾರೆ ಎಂದು ವರದಿಯೊಂದು ತಿಳಿಸಿದೆ. ಪ್ಯೂ ರಿಸರ್ಚ್ ಸೆಂಟರ್ ಪ್ರಕಾರ ಹದಿಹರೆಯದವರಲ್ಲಿ ಯೂಟ್ಯೂಬ್ ಅತ್ಯಂತ ಜನಪ್ರಿಯ ವೀಡಿಯೊ ಪ್ಲಾಟ್​ಫಾರ್ಮ್ ಆಗಿದೆ. ಟಿಕ್ ಟಾಕ್, ಸ್ನ್ಯಾಪ್ ಚಾಟ್ ಮತ್ತು ಇನ್​ಸ್ಟಾಗ್ರಾಮ್ ನಂತರದ ಸ್ಥಾನಗಳಲ್ಲಿವೆ.

ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 23, 2023 ರ ನಡುವೆ ಸುಮಾರು 1,500 ಅಮೆರಿಕದ ಹದಿಹರೆಯದವರ (13 ರಿಂದ 17 ವರ್ಷ ವಯಸ್ಸಿನವರು) ಪ್ರತಿಕ್ರಿಯೆಗಳನ್ನು ಆಧರಿಸಿ ಈ ಸಮೀಕ್ಷೆ ನಡೆಸಲಾಗಿದೆ.

13ರಿಂದ 17 ವರ್ಷದೊಳಗಿನ ಹದಿಹರೆಯದವರಲ್ಲಿ ಹೆಚ್ಚಿನವರು ಟಿಕ್ ಟಾಕ್ (63%), ಸ್ನ್ಯಾಪ್ ಚಾಟ್ (60%) ಮತ್ತು ಇನ್ ​ಸ್ಟಾಗ್ರಾಮ್ (59%) ಬಳಸುತ್ತಾರೆ. 15 ರಿಂದ 17 ವರ್ಷ ವಯಸ್ಸಿನ ಹಿರಿಯ ಹದಿಹರೆಯದವರ ವಿಷಯದಲ್ಲಿ ಈ ಪ್ರಮಾಣ 10 ರಲ್ಲಿ ಏಳು ಆಗಿದೆ.

ಒಂದು ದಶಕದ ಹಿಂದಿನ ಸಮಯಕ್ಕೆ ಹೋಲಿಸಿದರೆ ಈಗಿನ ಹದಿಹರೆಯದವರು ಫೇಸ್​ಬುಕ್ ಮತ್ತು ಟ್ವಿಟರ್ (ಈಗ ಎಕ್ಸ್) ಬಳಸುವುದು ಕಡಿಮೆಯಾಗಿದೆ. "ಫೇಸ್​ಬುಕ್ ಬಳಸುವ ಹದಿಹರೆಯದವರ ಪ್ರಮಾಣ 2014 - 2015 ರಲ್ಲಿ ಶೇಕಡಾ 71 ಇದ್ದುದು ಇಂದು ಶೇಕಡಾ 33ಕ್ಕೆ ಇಳಿದಿದೆ. ಕಳೆದ ದಶಕದಲ್ಲಿ ಟ್ವಿಟರ್ ಕೂಡ ಹದಿಹರೆಯದ ಬಳಕೆದಾರರ ಸಂಖ್ಯೆ ಕಳೆದು ಕೊಂಡಿದೆ. ಆದಾಗ್ಯೂ ಟ್ವಿಟರ್ ಫೇಸ್​ಬುಕ್​ಗಿಂತ ಉತ್ತಮ ಸ್ಥಾನದಲ್ಲಿದೆ." ಎಂದು ವರದಿ ಹೇಳಿದೆ.

ಲಿಂಗದ ಪ್ರಕಾರ ನೋಡುವುದಾದರೆ- ಹದಿಹರೆಯದ ಹುಡುಗಿಯರು ಹುಡುಗರಿಗಿಂತ ಹೆಚ್ಚಾಗಿ ಟಿಕ್ ಟಾಕ್ (22 ಪ್ರತಿಶತ ಮತ್ತು 12 ಪ್ರತಿಶತ) ಮತ್ತು ಸ್ನ್ಯಾಪ್ ಚಾಟ್ (17 ಪ್ರತಿಶತ ಮತ್ತು 12 ಪ್ರತಿಶತ) ಅನ್ನು ನಿರಂತರವಾಗಿ ಬಳಸುತ್ತಾರೆ ಎಂದು ವರದಿ ಕಂಡು ಹಿಡಿದಿದೆ. ಇನ್ ಸ್ಟಾಗ್ರಾಮ್, ಸ್ನ್ಯಾಪ್ ಚಾಟ್, ಫೇಸ್ ಬುಕ್, ಟ್ವಿಟರ್, ಟಿಕ್ ಟಾಕ್ ಮತ್ತು ರೆಡ್ಡಿಟ್ ಮುಂತಾದ ಪ್ಲಾಟ್​ಫಾರ್ಮ್​ಗಳನ್ನು ಕಿರಿಯರಿಗಿಂತ ಹಿರಿಯ ಹದಿಹರೆಯದವರು ಹೆಚ್ಚಾಗಿ ಬಳಸುತ್ತಾರೆ. ಉದಾಹರಣೆಗೆ 15 ರಿಂದ 17 ವರ್ಷ ವಯಸ್ಸಿನ ಹದಿಹರೆಯದವರಲ್ಲಿ 68 ಪ್ರತಿಶತದಷ್ಟು ಜನ ಇನ್ ಸ್ಟಾಗ್ರಾಮ್ ಬಳಸುತ್ತಾರೆ ಹಾಗೂ 13 ಮತ್ತು 14 ವರ್ಷ ವಯಸ್ಸಿನ ಹದಿಹರೆಯದವರಲ್ಲಿ ಈ ಪಾಲು ಶೇಕಡಾ 45 ರಷ್ಟಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ : 2024ರ ಚಂದ್ರಯಾನಕ್ಕಾಗಿ ನಾಲ್ವರು IAF ಪೈಲಟ್​ಗಳ ನಿಯೋಜನೆ; ಇಸ್ರೊ ಅಧ್ಯಕ್ಷ

ABOUT THE AUTHOR

...view details