ಹೈದರಾಬಾದ್: ಯುಪಿಐ ಬಳಸಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಸಹಭಾಗಿತ್ವದಲ್ಲಿ ವಾಟ್ಸ್ಆ್ಯಪ್ ಪಾವತಿ ಆಯ್ಕೆ ನೀಡುತ್ತಿದೆ.
ಇದೀಗ ಯುಪಿಐ ಮೂಲಕ ವಾಟ್ಸ್ಆ್ಯಪ್ನಲ್ಲೂ ಹಣ ಕಳುಹಿಸಬಹುದು... ಹೇಗೆ ಅಂತೀರಾ?
ಯುಪಿಐ ಬಳಸಿ ಪಾವತಿ ಮಾಡುವ ಆಯ್ಕೆಯನ್ನು ಭಾರತದಲ್ಲಿ ವಾಟ್ಸ್ಆ್ಯಪ್ ಕೂಡಾ ಆರಂಭಿಸಿದೆ. ಜನರು ಯುಪಿಐ ಬೆಂಬಲಿತ ಅಪ್ಲಿಕೇಶನ್ ಬಳಸುವ ಯಾರಿಗಾದರೂ ವಾಟ್ಸ್ಆ್ಯಪ್ನಲ್ಲೂ ಹಣ ಕಳುಹಿಸಬಹುದಾಗಿದೆ.
whatsapp pay
ಇದರಲ್ಲಿ ಭದ್ರತೆ ಮತ್ತು ಗೌಪ್ಯತೆಗೆ ಪ್ರಾಮುಖ್ಯತೆ ನೀಡುತ್ತಿದ್ದು, 160ಕ್ಕೂ ಹೆಚ್ಚು ಬೆಂಬಲಿತ ಬ್ಯಾಂಕುಗಳೊಂದಿಗೆ ವಹಿವಾಟುಗಳನ್ನು ಸಕ್ರಿಯಗೊಳಿಸಿದೆ.
"ಸುಲಭ ಡಿಜಿಟಲ್ ಪಾವತಿಗಳ ಮತ್ತು ಬಳಕೆ ಹೆಚ್ಚಿಸುವ ಭಾರತದ ಅಭಿಯಾನಕ್ಕೆ ಸೇರಲು ನಾವು ಉತ್ಸುಕರಾಗಿದ್ದೇವೆ. ಇದು ಭಾರತದಲ್ಲಿ ಪಾವತಿಗೆ ಸಹಾಯ ಮಾಡುತ್ತದೆ" ಎಂದು ವಾಟ್ಸ್ಆ್ಯಪ್ ಹೇಳಿದೆ.