ಕರ್ನಾಟಕ

karnataka

ನಿವೃತ್ತಿ ವಯಸ್ಸಿನ ಶಿಕ್ಷಕ ಮೊಮ್ಮಕ್ಕಳಂತಿರುವ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ...

By

Published : Nov 30, 2019, 1:04 PM IST

ನಿವೃತ್ತಿ ವಯಸ್ಸಿನ ಶಿಕ್ಷಕನೋರ್ವ ವಿಶೇಷ ತರಗತಿ ತೆಗೆದುಕೊಳ್ಳುವ ಹೆಸರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಗಿಂಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿಯರ ಪೋಷಕರು ದೂರಿದ್ದಾರೆ.

Teacher sexual harassment on two students
ನಿವೃತ್ತಿ ವಯಸ್ಸಿನ ಶಿಕ್ಷಕ

ಕಲಬುರಗಿ:ಆರು ತಿಂಗಳಲ್ಲಿ ನಿವೃತ್ತಿಯಾಗಬೇಕಾದ ಇಳಿವಯಸ್ಸಿನ ಕಾಮುಕ ಶಿಕ್ಷಕನೋರ್ವ ವಿಶೇಷ ತರಗತಿ ತೆಗೆದುಕೊಳ್ಳುವುದಾಗಿ (ಸ್ಪೆಷಲ್ ಕ್ಲಾಸ್) ಹೇಳಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಸೇಡಂ ತಾಲೂಕಿನ ಬಟಗೇರಾ ಕ್ರಾಸ್ ಸರ್ಕಾರಿ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ಎಂಬಾತ ಇನ್ನೇನು ಆರು ತಿಂಗಳಲ್ಲಿ ನಿವೃತ್ತಿಯಾಗಲಿದ್ದಾರೆ.ಶಾಲಾ ಅವಧಿ ಪೂರ್ಣಗೊಂಡ ನಂತರ ಸ್ಪೆಷಲ್ ಕ್ಲಾಸ್ ಹೆಸರಿನಲ್ಲಿ ಮೊಮ್ಮಕ್ಕಳ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರನ್ನು ತರಗತಿಯಲ್ಲೇ ಉಳಿಸಿಕೊಂಡು ನಿರಂತರವಾಗಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ತರಗತಿ ಕೊಠಡಿ ಹೊರಗಡೆ ನಿಲ್ಲಿಸಿ ಒಬ್ಬರ ನಂತರ ಒಬ್ಬರನ್ನು ಒಳಗಡೆ ಕರೆದು ಕಿರುಕುಳ ನೀಡುತ್ತಿದ್ದ ಎಂದು ಸೇಡಂ ಠಾಣೆಯಲ್ಲಿ ವಿದ್ಯಾರ್ಥಿಯನಿರ ಪೋಷಕರು ದೂರಿದ್ದಾರೆ.

ದೂರಿನ ಮೇರೆಗೆ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮುದಿ ವಿಕೃತಕಾಮಿ ಕೃತ್ಯವೆಸಗಿದ್ದು, ನಿಜ ಎಂಬಂತೆ ಕಂಡುಬಂದಿದೆ. ಇನ್ನೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.

Intro:ಕಲಬುರಗಿ: ಆರು ತಿಂಗಳಲ್ಲಿ ರಿಟೈರ್ಮೆಂಟ್ ಆಗಬೇಕಾದ ಇಳಿವಯಸ್ಸಿನ ಕಾಮುಕ ಶಿಕ್ಷಕನೋರ್ವ ಸ್ಪೆಷಲ್ ಕ್ಲಾಸ್ ಹೆಸರಿನಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಲೈಂಗಿಕ ಶೋಷಣೆ ಮಾಡಿದ ಆರೋಪ ಕೇಳಿ ಬಂದಿದೆ. Body:ಸೇಡಂ ತಾಲೂಕಿನ ಬಟಗೇರಾ ಕ್ರಾಸ್ ಸರ್ಕಾರಿ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಸ್ವಾಮಿ ವಿರುದ್ಧ ಆರೋಪ ಕೇಳಿ ಬಂದಿದೆ. ರಿಟೈರ್ಮೆಂಟಿಗೆ ಇನ್ನೂ 6 ತಿಂಗಳು ಮಾತ್ರ ಬಾಕಿ ಇರುವ ಮುದಿವಯಸ್ಸಿನ ಕಾಮಿ ಶಿಕ್ಷಕ, ಶಾಲಾ ಅವಧಿ ಪೂರ್ಣಗೊಂಡ ನಂತರ ಸ್ಪೆಷಲ್ ಕ್ಲಾಸ್ ಹೆಸರಿನಲ್ಲಿ ಮೊಮ್ಮಕ್ಕಳ ವಯಸ್ಸಿನ ಇಬ್ಬರು ವಿದ್ಯಾರ್ಥಿನಿಯರನ್ನು ಕ್ಲಾಸ್ ನಲ್ಲಿ ಉಳಿಸಿಕೊಂಡು ನಿರಂತರವಾಗಿ ಲೈಂಗಿಕ ಶೋಷಣೆ ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರ ಪೋಷಕರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರನ್ನು ಕ್ಲಾಸ್ ಹೊರಗಡೆ ನಿಲ್ಲಿಸಿ ಒಬ್ಬರ ನಂತರ ಒಬ್ಬರಿಗೆ ಕ್ಲಾಸ್ ಒಳಗಡೆ ಕರೆದು ಲೈಂಗಿಕ ಶೋಷಣೆ ಮಾಡುತ್ತಿದ್ದನೆಂದು ದೂರಲಾಗಿದೆ. ಸದ್ಯ ವಿದ್ಯಾರ್ಥಿನಿಯರ ಪೋಷಕರ ದೂರಿನ ಮೇರೆಗೆ ಸೇಡಂ ಠಾಣೆಯ ಪೊಲೀಸರು ಶಿಕ್ಷಕನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಮುದಿ ವಿಕೃತಕಾಮಿ ಕೃತ್ಯವೆಸಗಿದ್ದು ನಿಜ ಎಂಬಂತೆ ಕಂಡುಬಂದಿದೆ. ಇನ್ನೂ ಹೆಚ್ಚಿನ ತನಿಖೆ ಪೊಲೀಸರು ನಡೆಸುತ್ತಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.Conclusion:

ABOUT THE AUTHOR

...view details