ಕರ್ನಾಟಕ

karnataka

ಇಂಥಾ ಅರ್ಚಕರಿದ್ದಾರೆ ಎಚ್ಚರಿಕೆ...!! ಗಂಡನಿಗೆ ಅಪಾಯವಿದೆ ಎಂದು ಬೆದರಿ ಮಾಂಗಲ್ಯ ಸರ ಕದ್ದ ಭೂಪ​​​

By

Published : Dec 23, 2019, 4:51 PM IST

ಗಂಡನಿಗೆ ಅಪಾಯವಾಗುತ್ತದೆ ಎಂದು ಗೃಹಿಣಿಯೊಬ್ಬಳನ್ನು ಬೆದರಿಸಿದ ಅರ್ಚಕನೊಬ್ಬ ಆಕೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ನಡೆದಿದೆ.

KN_MYS_4_CHEATING_NEWS_7208092
ಗಂಡನಿಗೆ ಅಪಾಯವಿದೆ ಎಂದು ಬೆದರಿಸಿದ ಅರ್ಚಕ: ಮಾಂಗಲ್ಯ ಸರ ಕದ್ದು ಪರಾರಿ

ಮೈಸೂರು: ಗಂಡನಿಗೆ ಅಪಾಯವಾಗುತ್ತದೆ ಎಂದು ಗೃಹಿಣಿಯೊಬ್ಬಳನ್ನು ಬೆದರಿಸಿದ ಅರ್ಚಕನೊಬ್ಬ ಆಕೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ನಡೆದಿದೆ.

ನಂಜನಗೂಡಿನ ನಿವಾಸಿ ಇಂದಿರಾ ಮೋಸ ಹೋದ ಗೃಹಿಣಿಯಾಗಿದ್ದು, ಈಕೆ ರಾಯಚೂರಿನ ಖಾಸಗಿ ಶಾಲೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಮ್ಮ ಮಕ್ಕಳ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರಾಮಕೃಷ್ಣ ನಗರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಎಂದು ಹೇಳಿದ್ದಾರೆ. ದೇವಸ್ಥಾನದ ಅರ್ಚಕ ಫಣೀಶ್ ನಿಮ್ಮ ಗಂಡನಿಗೆ ಅಪಾಯವಿದೆ ಅದಕ್ಕೆ ಹೋಮ ಮಾಡಿಸಬೇಕು ಎಂದು ಆಕೆಯ 60 ಗ್ರಾಂ ತೂಕದ ಮಾಂಗಲ್ಯ ಸರ ಪಡೆದುಕೊಂಡಿದ್ದಾನೆ.

ಹೋಮ ಮಾಡುವಾಗ ಸರವನ್ನು ಡಬ್ಬಿಯಲ್ಲಿ ಹಾಕುವ ನೆಪದಲ್ಲಿ ನಕಲಿ ಸರ ಡಬ್ಬಿಗೆ ಹಾಕಿ ಪೂಜೆ ಮಾಡಿ ವಾಪಸ್​ ಮಾಡಿದ್ದಾನೆ. ನಂತರ ಗೃಹಿಣಿ ಮನೆಗೆ ಹೋಗಿ ಆ ಡಬ್ಬಿಯನ್ನು ನೋಡಿದಾಗ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಇನ್ನೂ ಈ ಸಂಬಂಧ ಕುವೆಂಪು ನಗರ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:
ಮೈಸೂರು: ಗಂಡನಿಗೆ ಅಪಾಯವಾಗುತ್ತದೆ ಎಂದು ಗೃಹಿಣಿಯೊಬ್ಬಳನ್ನು ಬೆದರಿಸಿದ ಅರ್ಚಕನೊಬ್ಬ ಆಕೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿರುವ ಘಟನೆ ಮೈಸೂರಿನ ರಾಮಕೃಷ್ಣ ನಗರದಲ್ಲಿ ನಡೆದಿದೆ.Body:




ನಂಜನಗೂಡಿನ ನಿವಾಸಿಯಾದ ಇಂದಿರಾ ಮೋಸ ಹೋದ ಗೃಹಿಣಿಯಾಗಿದ್ದು ಈಕೆ ರಾಯಚೂರಿನ ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದು , ಇವರು ತಮ್ಮ ಮಕ್ಕಳ ಅನಾರೋಗ್ಯದ ಕಾರಣ ಮೈಸೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ಬಂದಿದ್ದರು ಆ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರಾಮಕೃಷ್ಣ ನಗರದಲ್ಲಿರುವ ಗಣೇಶ ದೇವಸ್ಥಾನದಲ್ಲಿ ಪೂಜೆ ಮಾಡಿಸಿ ಎಂದು ಹೇಳಿದ್ದಾರೆ. ಇಂದಿರಾ ಅವರು ಪೂಜೆ ಮಾಡಿಸಿದ್ದಾರೆ. ದೇವಸ್ಥಾನದ ಅರ್ಚಕನಾದ ಫಣೀಶ್ ನಿಮ್ಮ ಗಂಡನಿಗೆ ಅಪಾಯವಿದೆ ಅದಕ್ಕೆ ಹೋಮ ಮಾಡಿಸಬೇಕು ಎಂದು ಆಕೆಯ ೬೦ ಗ್ರಾಂ ತೂಕದ ಮಾಂಗಲ್ಯವನ್ನು ಪಡೆದುಕೊಂಡಿದ್ದು ಹೋಮ ಮಾಡುವಾಗ ಸರವನ್ನು ಡಬ್ಬಿಯಲ್ಲಿ ಹಾಕುವ ನೆಪದಲ್ಲಿ ನಕಲಿ ಸರವನ್ನು ಡಬ್ಬಿಗೆ ಹಾಕಿ ಪೂಜೆ ಮಾಡಿ ಆಕೆಗೆ ನೀಡಿದ್ದಾನೆ. ನಂತರ ಗೃಹಿಣಿ ಮನೆಗೆ ಹೋಗಿ ಆ ಡಬ್ಬಿಯನ್ನು ನೋಡಿದಾಗ ನಕಲಿ ಕಂಡುಬಂದಿದ್ದು , ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದೆ ಇನ್ನೂ ಈ ಸಂಬಂಧ ಕುವೆಂಪು ನಗರ ಪೋಲಿಸ್ ಠಾಣೆಗೆ ದೂರು ದಾಖಲಾಗಿದ್ದು ತನಿಖೆ ನಡೆಸುತ್ತಿದ್ದಾರೆ.Conclusion:

ABOUT THE AUTHOR

...view details