ಕರ್ನಾಟಕ

karnataka

ಸ್ನೇಹಿತನ ಅಕ್ಕನನ್ನೇ ಪ್ರೀತಿಯ ಬಲೆಗೆ ಬೀಳಿಸಿಕೊಂಡ ಮನೆಗಳ್ಳ: ಎಚ್ಚರಿಕೆಗೂ ಕ್ಯಾರೆ ಅನ್ನದವನಿಗೆ ಬಿತ್ತು ಮಚ್ಚಿನೇಟು!

By

Published : Dec 9, 2020, 3:27 AM IST

ಗಂಭೀರ ಗಾಯಗೊಂಡ ಕಾರ್ತಿಕ್ ಆಲಿಯಾಸ್ ಎಸ್ಕೇಪ್ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಯುವತಿಯ ಸಹೋದರ ರಾಜ್ ಕುಮಾರ್, ಸಹಚರರಾದ ಅಭಿಷೇಕ್, ಗೌತಮ್ ಹಾಗೂ ಪ್ರಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೊತ್ತನೂರು‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Escape Karthik
ಎಸ್ಕೇಪ್ ಕಾರ್ತಿಕ್

ಬೆಂಗಳೂರು: ಗೆಳೆಯನ ಅಕ್ಕನನ್ನೇ ಪ್ರೀತಿಯ ಬಲೆಗೆ ಬೀಳಿಸಿಕೊಂಡಿದ್ದ ಕುಖ್ಯಾತ ಮನೆಗಳ್ಳನನ್ನ ಆತನ ಸ್ನೇಹಿತರೇ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ‌.

ಗಂಭೀರ ಗಾಯಗೊಂಡ ಕಾರ್ತಿಕ್ ಆಲಿಯಾಸ್ ಎಸ್ಕೇಪ್ ಕಾರ್ತಿಕ್ ನೀಡಿದ ದೂರಿನ ಮೇರೆಗೆ ಯುವತಿಯ ಸಹೋದರ ರಾಜ್ ಕುಮಾರ್, ಸಹಚರರಾದ ಅಭಿಷೇಕ್, ಗೌತಮ್ ಹಾಗೂ ಪ್ರಶಾಂತ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕೊತ್ತನೂರು‌ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಕಾರ್ತಿಕ್ ವಿರುದ್ಧ ನಗರ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಪರಪ್ಪನ ಅಗ್ರಹಾರ ಜೈಲಿನಿಂದ ಹೊರಬಂದಿದ್ದ. ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ. ‌ಕಳೆದ ಐದು ವರ್ಷಗಳ ಹಿಂದೆ ಹೆಣ್ಣೂರಿನಲ್ಲಿ ಕಾರ್ತಿಕ್​ಗೆ ರಾಜ್ ಕುಮಾರ್ ಪರಿಚಯವಾಗಿತ್ತು. ಆಗಾಗ ಮನೆಗೆ ಹೋಗಿ ಬರುತ್ತಿದ್ದ. ಈ ವೇಳೆ‌ ಸ್ನೇಹಿತ ರಾಜ್ ಕುಮಾರ್​ನ ಅಕ್ಕನ ಪರಿಚಯವಾಗಿ ಆತ್ಮೀಯತೆ ಬೆಳೆದಿದೆ. ಕಾಲಕ್ರಮೇಣ ಇಬ್ಬರು ಪ್ರೀತಿಸಿದ್ದಾರೆ. ಈ ವಿಚಾರ ರಾಜ್ ಕುಮಾರ್​ಗೆ ಗೊತ್ತಾಗಿ ಅಕ್ಕನಿಂದ‌ ದೂರ ಇರುವಂತೆ ಕಾರ್ತಿಕ್​​​ಗೆ ಎಚ್ಚರಿಸಿದ್ದಾನೆ.‌ ಇದಕ್ಕೆ ಕ್ಯಾರೆ ಅನ್ನದ ಕಾರ್ತಿಕ್ ರಾಜ್ ಕುಮಾರ್ ಕಣ್ತಪ್ಪಿಸಿ ಆಗಾಗ ಭೇಟಿ ಮಾಡುತ್ತಿದ್ದ. ಇದರಿಂದ ಅಸಮಾಧಾನಗೊಂಡ ಕಾರ್ತಿಕ್​ಗೆ ಬುದ್ದಿ ಕಲಿಸಲು ರಾಜ್ ಕುಮಾರ್ ತೀರ್ಮಾನಿಸಿದ್ದ.

ವ್ಯಾನ್-ಬೈಕ್ ನಡುವೆ ಅಪಘಾತ: ಓರ್ವ ಸಾವು, ಮತ್ತೋರ್ವನಿಗೆ ಗಾಯ

ಡಿಸೆಂಬರ್ 5ರಂದು ರಾತ್ರಿ ಯುವತಿಯನ್ನು ಭೇಟಿಯಾಗಿ ಬೈರತಿ ಕ್ರಾಸ್ ಬಳಿ ಆಟೊದಲ್ಲಿ ಬರುವಾಗ ಕಾರಿನಲ್ಲಿ ತೆರಳಿದ ರಾಜ್‌ ಕುಮಾರ್ ಹಾಗೂ ಆತನ ಸಹಚರರು ಅಡ್ಡಗಟ್ಟಿ ಖಾರದಪುಡಿ ಎರಚಿ ಬಾಟೆಲ್‌ನಿಂದ ತಲೆ ಮೈ-ಕಾಲುಗಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಸ್ಥಳೀಯರ ನೆರವಿನಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಯಾರಿದು ಎಸ್ಕೇಪ್ ಕಾರ್ತಿಕ್ ?

ಹೆಣ್ಣೂರಿನ ಪ್ರಕೃತಿ ಲೇಔಟ್ ವಾಸಿಯಾಗಿದ್ದ ಕಾರ್ತಿಕ್ ಚಿಕ್ಕ ವಯಸ್ಸಿನಿಂದಲೇ‌ ವೃತ್ತಿಪರ ಕಳ್ಳನಾಗಿ ಕುಖ್ಯಾತನಾಗಿದ್ದ. ಹೆಣ್ಣೂರು, ಬಾಣಸವಾಡಿ ಸೇರಿದಂತೆ ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ 30ಕ್ಕೂ ಹೆಚ್ಚು ಅಪರಾಧ ಪ್ರಕರಣಗಳು ದಾಖಲಾಗಿವೆ. 2006ರಲ್ಲಿ ಮೊದಲ ಬಾರಿ ಸಿಸಿಬಿ ಪೊಲೀಸರು ಬಂಧಿಸಿದ್ದರು. ಸೆರೆಯಾದ ವೇಳೆ 17 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡುಬಂದಿತ್ತು. ಇದೇ ಆರೋಪದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ. ಇಲ್ಲಿಯೂ ತನ್ನ ಕ್ರಿಮಿನಲ್ ಬುದ್ದಿ ಉಪಯೋಗಿಸಿ ಇಸ್ಕಾನ್​ನಿಂದ ಆಹಾರ ಸರಬರಾಜು ಮಾಡುತ್ತಿದ್ದ ವಾಹನದ ಕೆಳಭಾಗದ ಕಂಬಿ ಮೇಲೆ ಮಲಗಿ ಜೈಲಿಂದ‌ ಎಸ್ಕೇಪ್ ಆಗಿದ್ದ. ಅಂದಿನಿಂದ‌ ಕಾರ್ತಿಕ್​ಗೆ ಎಸ್ಕೇಪ್ ಆಗಿ ಕುಖ್ಯಾತಿ ಪಡೆದಿದ್ದ.

ABOUT THE AUTHOR

...view details