ಕರ್ನಾಟಕ

karnataka

ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: ಮೃತ ವಿದ್ಯಾರ್ಥಿಗಳ ಸ್ಮಾರಕ ಸ್ಥಳಕ್ಕೆ ಜೋ ಬೈಡನ್ ಭೇಟಿ

By

Published : May 30, 2022, 9:34 AM IST

ಟೆಕ್ಸಾಸ್‍ನ ಉವಾಲ್ಡೆ ನಗರದ ರಾಬ್ ಎಲಿಮೆಂಟರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸ್ಮಾರಕ ಸ್ಥಳಕ್ಕೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಭೇಟಿ ನೀಡಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಜೋ ಬೈಡನ್
ಜೋ ಬೈಡನ್

ಉವಾಲ್ಡೆ(ಅಮೆರಿಕ): ಮೇ 24 ರಂದು ಬೆಳಗ್ಗೆ 11.32ರ ಸುಮಾರಿಗೆ ಅಮೆರಿಕದ ಟೆಕ್ಸಾಸ್‌ನ ಉವಾಲ್ಡೆಯಲ್ಲಿರುವ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊಬ್ಬ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ 18 ಮಕ್ಕಳು ಸೇರಿದಂತೆ 21 ಮಂದಿಯನ್ನು ದಾರುಣವಾಗಿ ಕೊಲೆ ಮಾಡಿದ್ದ. ನಿನ್ನೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಮೃತ ವಿದ್ಯಾರ್ಥಿಗಳ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು.

ಮೊದಲು ಅವರು, ರಾಬ್ ಎಲಿಮೆಂಟರಿ ಶಾಲೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಮೃತರ ಪೋಷಕರನ್ನು ಭೇಟಿ ಮಾಡಿ ಸಂತ್ವಾನ ಹೇಳಿದರು. ಸುಮಾರು ಮೂರು ಗಂಟೆಗಳ ಕಾಲ ಮಾತುಕತೆ ನಡೆಸಿ ಕಾರಿನ ಕಡೆಗೆ ನಿರ್ಗಮಿಸುತ್ತಿದ್ದಾ, 100 ಜನರ ಗುಂಪೊಂದು ಘಟನೆಗೆ ಸಂಬಂಧಿಸಿದಂತೆ "ಏನಾದರೂ ಮಾಡಿ", ನ್ಯಾಯ ದೊರಕಿಸಿಕೊಡಿ ಎಂದು ಘೋಷಣೆ ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೈಡನ್​, "ನಾವು ಮಾಡುತ್ತೇವೆ" ಈ ಕುರಿತು ಕ್ರಮ ಕೈಗೊಳ್ಳುತ್ತೇವೆ. ಯಾರೂ ಭಯಪಡಬೇಡಿ ಎಂದು ಭರವಸೆ ನೀಡಿದರು.

ಇತ್ತೀಚೆಗೆ, ನ್ಯೂಯಾರ್ಕ್​ನ ಬಫಲೊ ನಗರದ ಸೂಪರ್‌ ಮಾರ್ಕೆಟ್‌ನಲ್ಲಿ ಬಂದೂಕುಧಾರಿಯೊಬ್ಬ ಗುಂಡು ಹಾರಿಸಿದ ಪರಿಣಾಮ 10 ಮಂದಿ ಸಾವನ್ನಪ್ಪಿದ್ದರು. ಎರಡು ವಾರಗಳ ನಂತರ ಮತ್ತೆ ಈ ಘಟನೆ ನಡೆದಿದೆ. ಆ ಘಟನೆಯನ್ನು 'ಜನಾಂಗೀಯ ಪ್ರೇರಿತ' ಸಾಮೂಹಿಕ ಗುಂಡಿನ ದಾಳಿ ಎಂದು ಹೇಳಲಾಗಿತ್ತು. ಅಮೆರಿಕದಲ್ಲಿ ಇಂತಹ ಘಟನೆಗಳು ಮರುಕಳಿಸುತ್ತಿರುವುದು ವಿಷಾದದ ಸಂಗತಿ. ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ ಎಂದು ಬೈಡನ್​ ತಿಳಿಸಿದ್ದಾರೆ.

ಇದನ್ನೂ ಓದಿ:ಟೆಕ್ಸಾಸ್ ಶಾಲೆಯಲ್ಲಿ ಗುಂಡಿನ ದಾಳಿ: 18 ಮಕ್ಕಳು ಸೇರಿ 21 ಮಂದಿ ಕೊಲೆ, ಹಂತಕನ ಹತ್ಯೆ!

ABOUT THE AUTHOR

...view details