ಕರ್ನಾಟಕ

karnataka

ನ್ಯಾಟೋ ಸೇರುವ ನಿರ್ಧಾರಕ್ಕೆ ಡೇಟ್ ಫಿಕ್ಸ್: ಅಡಕತ್ತರಿಯಲ್ಲಿ ಸ್ವೀಡನ್, ಫಿನ್​ಲ್ಯಾಂಡ್!

By

Published : Apr 29, 2022, 7:46 AM IST

Updated : Apr 29, 2022, 9:10 AM IST

ಸ್ವೀಡನ್, ಫಿನ್​ಲ್ಯಾಂಡ್ ನ್ಯಾಟೋ ಸೇರಿದರೆ ಖಂಡಿತಾ ರಷ್ಯಾ ಹಗೆತನ ಕಟ್ಟಿಕೊಳ್ಳಬೇಕಾದ ಸಾಧ್ಯತೆ ಇರುವ ಕಾರಣದಿಂದ ಈ ರಾಷ್ಟ್ರಗಳೆರಡೂ ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬ ಕುತೂಹಲ ಎಲ್ಲರಲ್ಲಿದೆ.

US awaiting decision from Sweden, Finland on NATO accession before June summit
ನ್ಯಾಟೋ ಸೇರುವ ನಿರ್ಧಾರಕ್ಕೆ ಡೇಟ್ ಫಿಕ್ಸ್: ಅಡಕತ್ತರಿಯಲ್ಲಿ ಸ್ವೀಡನ್, ಫಿನ್​ಲ್ಯಾಂಡ್!

ವಾಷಿಂಗ್ಟನ್(ಅಮೆರಿಕ):ಉಕ್ರೇನ್​ನಲ್ಲಿ ಯುದ್ಧ ಮುಂದುವರೆದಿದೆ. ಫಿನ್​ಲ್ಯಾಂಡ್ ಮತ್ತು ಸ್ವೀಡನ್​ಗೆ ರಷ್ಯಾ ಆಗಾಗ ನ್ಯಾಟೋ ಪಡೆಯನ್ನು ಸೇರದಂತೆ ಎಚ್ಚರಿಕೆಯನ್ನೂ ಕೂಡಾ ನೀಡುತ್ತಿದೆ. ಆದರೆ, ಸ್ವೀಡನ್ ಮತ್ತು ಫಿನ್​ಲ್ಯಾಂಡ್ ದೇಶಗಳಿಗೆ ಈಗ ಅಡಕತ್ತರಿಯಲ್ಲಿ ಸಿಲುಕಿದ ಅನುಭವವಾಗುತ್ತಿದೆ. ಹೌದು, ಜೂನ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ನ್ಯಾಟೋ ಸೇರುವ ಬಗ್ಗೆ ಸ್ವೀಡನ್ ಮತ್ತು ಫಿನ್‌ಲ್ಯಾಂಡ್‌ ನಿರ್ಧಾರವನ್ನು ಅಮೆರಿಕ ನಿರೀಕ್ಷಿಸುತ್ತಿದೆ ಎಂದು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಗುರುವಾರ ಹೇಳಿದ್ದಾರೆ.

ಎರಡೂ ದೇಶಗಳನ್ನು ನ್ಯಾಟೋಗೆ ಸೇರಿಸಿಕೊಳ್ಳಬೇಕೆಂಬ ಮಾತು ತುಂಬಾ ದಿನಗಳಿಂದ ಸಕ್ರಿಯವಾಗಿದೆ. ನ್ಯಾಟೋ ಶೃಂಗಸಭೆ ಶೀಘ್ರದಲ್ಲೇ ಬರಲಿದೆ. ಎರಡೂ ರಾಷ್ಟ್ರಗಳಿಂದ ಸಕಾರಾತ್ಮಕ ಪ್ರತಿಕ್ರಿಯೆ ಬರುವ ನಿರೀಕ್ಷೆಯಿದೆ ಎಂದು ಶಾಸಕಾಂಗ ಸಮಿತಿಯ ವಿಚಾರಣೆಯ ಸಂದರ್ಭದಲ್ಲಿ ಆಂಟೋನಿ ಬ್ಲಿಂಕೆನ್ ಪ್ರಶ್ನೆಯೊಂದಕ್ಕೆ ಈ ರೀತಿಯ ಸ್ಪಷ್ಟನೆ ನೀಡಿದ್ದಾರೆ.

ಅಂದಹಾಗೆ, ಫೆಬ್ರವರಿಯಲ್ಲಿ ಉಕ್ರೇನ್‌ನಲ್ಲಿ ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣೆ ಪ್ರಾರಂಭವಾದಾಗಿನಿಂದ ನ್ಯಾಟೋ ಒಕ್ಕೂಟಕ್ಕೆ ಸ್ವೀಡನ್ ಮತ್ತು ಫಿನ್​ಲ್ಯಾಂಡ್ ಅನ್ನು ಸೇರಿಸಿಕೊಳ್ಳಬೇಕೆಂಬ ಮಾತುಗಳು ಕೇಳಿ ಬರುತ್ತಿವೆ. ಜೂನ್‌ನಲ್ಲಿ ಸ್ಪೇನ್​ನ ಮ್ಯಾಡ್ರಿಡ್‌ನಲ್ಲಿ ಶೃಂಗಸಭೆಯ ನಡೆಯಲಿದ್ದು, ಅಲ್ಲಿ ಎರಡೂ ರಾಷ್ಟ್ರಗಳು ತೆಗೆದುಕೊಳ್ಳುವ ನಿರ್ಧಾರ ಜಾಗತಿಕ ರಾಜಕೀಯ ವಿದ್ಯಮಾನಗಳ ಮೇಲೆ ದಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ.

ಒಂದು ವೇಳೆ ಸ್ವೀಡನ್, ಫಿನ್​ಲ್ಯಾಂಡ್ ನ್ಯಾಟೋ ಸೇರಿದರೆ ಖಂಡಿತಾ ರಷ್ಯಾ ಹಗೆತನ ಕಟ್ಟಿಕೊಳ್ಳಬೇಕಾದ ಸಾಧ್ಯತೆ ಇರುವ ಕಾರಣದಿಂದ ರಷ್ಯಾದ ಸಮೀಪದ ಈ ರಾಷ್ಟ್ರಗಳೆರಡೂ, ಯಾವ ನಿರ್ಧಾರ ತೆಗೆದುಕೊಳ್ಳಲಿವೆ ಎಂಬ ಕುತೂಹಲ ಎಲ್ಲರಲ್ಲಿದೆ.

ಇದನ್ನೂ ಓದಿ:ಮುಸ್ಲಿಮರ ಧಾರ್ಮಿಕ ನಂಬಿಕೆಗಳನ್ನು ಗೌರವಿಸಿ: ಚೀನಾದಿಂದ ಸಾಮರಸ್ಯದ ಪಾಠ!

Last Updated :Apr 29, 2022, 9:10 AM IST

ABOUT THE AUTHOR

...view details