ಕರ್ನಾಟಕ

karnataka

‘ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ’.. ಕಾನ್ಸ್​ ಚಲನಚಿತ್ರೋತ್ಸವದಲ್ಲಿ ಮಹಿಳೆ ಅರೆಬೆತ್ತಲೆ ಪ್ರತಿಭಟನೆ!

By

Published : May 21, 2022, 1:40 PM IST

Topless woman storms Cannes  protest against sexual violence in Ukraine  protest against sexual violence against women in Cannes  ನಮ್ಮನ್ನು ಅತ್ಯಾಚಾರ ಮಾಡುವುದನ್ನು ನಿಲ್ಲಿಸಿ ಎಂದು ಕೇನ್ಸ್​​ನಲ್ಲಿ ಮಹಿಳೆ ಪ್ರತಿಭಟನೆ  ಕೇನ್ಸ್​ನಲ್ಲಿ ಮಹಿಳೆ ಅರೆಬೆತ್ತಲೆ ಪ್ರತಿಭಟನೆ  ಉಕ್ರೇನ್‌ನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕಂಡಿಸಿ ಅರೆಬೆತ್ತಲೆ ಪ್ರತಿಭಟನೆ
ಅರಬೆತ್ತಲೆ ಪ್ರತಿಭಟನೆ ()

'ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ' ಎಂದು ಮೈ ಮೇಲೆ ಬರೆದುಕೊಂಡು ಉಕ್ರೇನ್​ನಲ್ಲಿ ನಡೆಯುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ಮಹಿಳೆಯೊಬ್ಬಳು ಅರೆಬೆತ್ತಲೆ ಪ್ರತಿಭಟನೆ ನಡೆಸಿರುವ ಘಟನೆ ಫ್ರಾನ್ಸ್​ನ ಕಾನ್ಸ್​​​ನಲ್ಲಿ ನಡೆದಿದೆ.

ಕೇನ್ಸ್(ಫ್ರಾನ್ಸ್​):ಉಕ್ರೇನ್‌ನಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಕಾನ್ಸ್​ ಚಲನಚಿತ್ರೋತ್ಸವದಲ್ಲಿ ರೆಡ್​ ಕಾರ್ಪೆಟ್​ ಮೇಲೆ ಮಹಿಳೆಯೊಬ್ಬಳು ಅರೆಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ. ಈ ಮಹಿಳೆ ಕಿರುಚುತ್ತಾ ತನ್ನ ಕೆಲ ಬಟ್ಟೆಗಳನ್ನು ಬಿಚ್ಚಿಟ್ಟು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ರೆಡ್​ ಕಾರ್ಪೆಟ್​ ಮುಂದೆ ಛಾಯಾಗ್ರಾಹಕರು ನೆರೆದಿದ್ದರು. ಈ ವೇಳೆ ಮಹಿಳೆಯೊಬ್ಬಳು ಅರೆಬೆತ್ತಲೆಯಾಗಿ ದಿಢೀರನೆ ಪ್ರತಿಭಟನೆ ಕೈಗೊಂಡಿದ್ದಾಳೆ. ಎಚ್ಚೆತ್ತ ಸೆಕ್ಯುರಿಟಿ ಗಾರ್ಡ್‌ಗಳು ಅವಳ ಬಳಿಗೆ ಧಾವಿಸಿ ಆಕೆಯ ದೇಹವನ್ನು ಕೋಟ್‌ನಿಂದ ಮುಚ್ಚುತ್ತಿರುವುದು ಕಂಡುಬಂದಿದೆ.

ಮಹಿಳೆಯ ಮೈ ಮೇಲೆ ಉಕ್ರೇನಿಯನ್ ಧ್ವಜದ ಬಣ್ಣ ಹಚ್ಚಿಕೊಂಡಿದ್ದಾರೆ. ಅವಳ ಎದೆ ಮತ್ತು ಹೊಟ್ಟೆಯ ಉದ್ದಕ್ಕೂ 'ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ' ಎಂಬ ಪದಗಳು ಗೋಚರಿಸಿವೆ. ಮಹಿಳೆ ಕೆಳ ಬೆನ್ನಿನ ಮೇಲೆ ಮತ್ತು ಕಾಲುಗಳ ಮೇಲೆ ಕೆಂಪು ಬಣ್ಣ ಕಂಡು ಬಂದಿದೆ.

ಓದಿ:ಕಾನ್​​ ಚಲನಚಿತ್ರೋತ್ಸವದ ರೆಡ್​ ಕಾರ್ಪೆಟ್​​ ಮೇಲೆ ಕಾಣಿಸಿಕೊಂಡ ಭಾರತದ ಮೊದಲ ಜಾನಪದ ಗಾಯಕ!

ಜಾರ್ಜ್ ಮಿಲ್ಲರ್ ಅವರ 'ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್' ನ ಪ್ರಥಮ ಪ್ರದರ್ಶನಕ್ಕಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಮಹಿಳೆ ಪ್ರತಿಭಟಿಸಿದ್ದಾರೆ. ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ನಿರ್ದೇಶಕರು ಮತ್ತು ತಾರೆಯರು ಹಾಜರಿದ್ದರು.

ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಪ್ರಾರಂಭದಿಂದಲೂ, ರಷ್ಯಾದ ಸೈನಿಕರು ಉಕ್ರೇನಿಯನ್ ನಾಗರಿಕರ ಮೇಲೆ ಅತ್ಯಾಚಾರವೆಸಗುತ್ತಿರುವ ಹಲವಾರು ವರದಿಗಳು ಬಂದಿವೆ. ಇದಕ್ಕೂ ಮೊದಲು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಾನ್ಸ್ ಚಲನಚಿತ್ರೋತ್ಸವದ 75ನೇ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಭಾವನಾತ್ಮಕ ಭಾಷಣ ಮಾಡಿದ್ದರು. ಈ ವೇಳೆ ಸರ್ವಾಧಿಕಾರಿ ದೋರಣೆಯನ್ನು ಎದುರಿಸಲು ಚಲನಚಿತ್ರ ನಿರ್ಮಾಪಕರಿಗೆ ಕರೆ ನೀಡಿದ್ದರು.

ABOUT THE AUTHOR

...view details