ಕರ್ನಾಟಕ

karnataka

Russian Wagner group: ಖಾಸಗಿ ಸೇನೆಯ ಬಂಡಾಯವನ್ನು ದ್ರೋಹ ಎಂದ ರಷ್ಯಾದ ಅಧ್ಯಕ್ಷ.. ದಂಗೆ ಹತ್ತಿಕ್ಕಲು ಪುಟಿನ್ ಪ್ರತಿಜ್ಞೆ

By

Published : Jun 24, 2023, 8:48 PM IST

ಖಾಸಗಿ ಸೇನೆಯ ಬಂಡಾಯವನ್ನು ದ್ರೋಹ ಕರೆದಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅದರಿಂದ ರಷ್ಯಾ ಮತ್ತು ಜನರನ್ನು ರಕ್ಷಿಸುವ ಭರವಸೆ ನೀಡಿದ್ದಾರೆ. ಈ ದಂಗೆ ಹತ್ತಿಕ್ಕಲು ಪ್ರತಿಜ್ಞೆಯನ್ನೂ ಮಾಡಿದ್ದಾರೆ.

ಖಾಸಗಿ ಸೇನೆಯ ಬಂಡಾಯವನ್ನು ದ್ರೋಹ ಎಂದ ರಷ್ಯಾದ ಅಧ್ಯಕ್ಷ.. ದಂಗೆ ಹತ್ತಿಕ್ಕಲು ಪುಟಿನ್ ಪ್ರತಿಜ್ಞೆ
stab-in-the-back-putin-vows-to-crush-mutiny-by-russian-mercenary-chief

ಮಾಸ್ಕೋ (ರಷ್ಯಾ): ರಷ್ಯಾ ಅಧ್ಯಕ್ಷ ವ್ಲಾಡಿಮರ್​ ಪುಟಿನ್​ ವಿರುದ್ಧವೇ ಗೌಪ್ಯ ಸೇನೆಯಾದ ವ್ಯಾಗ್ನರ್​ ಪಡೆ ತಿರುಗಿಬಿದ್ದಿದ್ದು, ಸಶಸ್ತ್ರ ದಂಗೆ ಘೋಷಿಸಿದೆ. ಇದರ ಬೆನ್ನಲ್ಲೇ ವ್ಯಾಗ್ನರ್​ ಪಡೆ ಮುಖ್ಯಸ್ಥ ಯೆವ್ನಿನ್ ಪ್ರಿಗೊಝಿನ್ ವಿರುದ್ಧ ಗುಡುಗಿರುವ ಪುಟಿನ್​, ಇದನ್ನು ದ್ರೋಹ, ಬೆನ್ನಿಗೆ ಇರಿತ ಎಂದು ಟೀಕಿಸಿದ್ದಾರೆ. ಅಲ್ಲದೇ, ಈ ಸಶಸ್ತ್ರ ದಂಗೆಯಿಂದ ರಷ್ಯಾವನ್ನು ರಕ್ಷಿಸಲಾಗುತ್ತಿದೆ. ದೇಶವನ್ನು ವಿಭಜಿಸುವವರಿಗೆ ಶಿಕ್ಷೆ ಅನಿವಾರ್ಯವಾಗಲಿದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.

ವ್ಯಾಗ್ನರ್ ಪಡೆ ರಷ್ಯಾದ ಖಾಸಗಿ ಸೇನೆಯಾಗಿದೆ. ಪುಟಿನ್ ಆಪ್ತರಾದ ಯೆವ್ನಿನ್ ಪ್ರಿಗೊಝಿನ್ ಅವರೇ ಇದರ ಮುಖ್ಯಸ್ಥರಾಗಿದ್ದಾರೆ. ಪುಟಿನ್ ಹೇಳಿದಂತೆ ಈ ಸೇನೆ ಕೆಲಸ ಮಾಡುತ್ತಿತ್ತು. ಆದರೆ, ಇದೀಗ ಅದೇ ಪಡೆ ರಷ್ಯಾ ಸೇನೆಯ ವಿರುದ್ಧವೇ ತಿರುಗಿ ಬಿದ್ದಿದೆ. ಇದರಿಂದ ರಷ್ಯಾದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಅಲ್ಲದೇ, ಎರಡು ದಶಕಗಳಲ್ಲಿ ಅಧಿಕಾರಾವಧಿಯಲ್ಲಿ ಪುಟಿನ್​ ಅವರಿಗೆ ಎದುರಾದ ದೊಡ್ಡ ಬೆದರಿಕೆ ಎನ್ನಲಾಗುತ್ತಿದೆ. ಹೀಗಾಗಿ ಇಂದು ರಷ್ಯಾವನ್ನು ಉದ್ದೇಶಿಸಿ ಅಧ್ಯಕ್ಷ ಪುಟಿನ್ ಮಾತನಾಡಿದ್ದಾರೆ.

ವ್ಯಾಗ್ನರ್​ ಪಡೆಯ ಹೆಸರನ್ನು ಉಲ್ಲೇಖಿಸದೇ ಪುಟಿನ್, ಕೆಲವು ರಷ್ಯನ್ನರು ಕ್ರಿಮಿನಲ್ ಸಾಹಸಕ್ಕೆ ಮೋಸ ಹೋಗಿದ್ದಾರೆ. ದಂಗೆಕೋರರ ಈ ಕ್ರಮವನ್ನು ಬೆನ್ನಿಗೆ ಇರಿತವಾಗಿದೆ. ದೇಶವನ್ನು ವಿಭಜಿಸುವವರಿಗೆ ಶಿಕ್ಷೆಯಾಗುತ್ತದೆ. ಕೆಲವರ ಹೆಚ್ಚಿನ ಮಹತ್ವಾಕಾಂಕ್ಷೆಯು ದೇಶದ್ರೋಹಕ್ಕೆ ಕಾರಣವಾಗಿದೆ. ಬಿಕ್ಕಟ್ಟು ಎದುರಿಸಲು ಅಗತ್ಯವಿರುವ ಎಲ್ಲ ರೀತಿಯ ಆದೇಶಗಳನ್ನು ನೀಡಲಾಗಿದೆ ಎಂದು ಹೇಳಿದ್ದಾರೆ. ಆಶ್ಚರ್ಯಕರವಾಗಿ ಪುಟಿನ್ ತಮ್ಮ ಭಾಷಣದ ಕೊನೆಯಲ್ಲಿ ವ್ಯಾಗ್ನರ್ ಪಡೆಯನ್ನು ಉಲ್ಲೇಖಿಸಿದ್ದಾರೆ. ಅದು ಮಾಸ್ಕೋಗಾಗಿ ಹೋರಾಡಿದ್ದಕ್ಕಾಗಿ ವ್ಯಾಗ್ನರ್ ಪಡೆಯನ್ನು ಹೊಗಳಲು ಮಾತ್ರ ಸೀಮಿತವಾಗಿತ್ತು ಎಂದು ವರದಿಯಾಗಿದೆ.

ಉಕ್ರೇನ್‌ನಲ್ಲಿ ರಷ್ಯಾ ತನ್ನ ಭವಿಷ್ಯಕ್ಕಾಗಿ ಕಠಿಣ ಯುದ್ಧವನ್ನು ಎದುರಿಸುತ್ತಿರುವ ಸಮಯದಲ್ಲಿ ಎದ್ದಿರುವ ಈ ದಂಗೆಯನ್ನು ಪುಟಿನ್ ಖಂಡಿಸಿದ್ದಾರೆ. ಪಶ್ಚಿಮ ದೇಶಗಳ ಸಂಪೂರ್ಣ ಮಿಲಿಟರಿ, ಆರ್ಥಿಕ ಮತ್ತು ಮಾಹಿತಿ ಯಂತ್ರವನ್ನು ನಮ್ಮ ವಿರುದ್ಧ ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. ಪಾಶ್ಚಿಮಾತ್ಯ ಸರ್ಕಾರಗಳು ಮಾಸ್ಕೋ ಮೇಲೆ ನಿರ್ಬಂಧಗಳನ್ನು ಹೇರಿ ಮತ್ತು ಉಕ್ರೇನ್​ಅನ್ನು ಶಸ್ತ್ರಾಸ್ತ್ರಗೊಳಿಸುತ್ತವೆ ಎಂದು ಕಿಡಿಕಾರಿದ್ದಾರೆ.

ಶುಕ್ರವಾರ ರಾತ್ರಿ ರಷ್ಯಾವು ವ್ಯಾಗ್ನರ್ ಮುಖ್ಯಸ್ಥ ಯೆವ್ಗೆನಿ ಪ್ರಿಗೊಝಿನ್ ಅವರನ್ನು ಬಂಧಿಸಲು ಆದೇಶಿಸಿದೆ. ರಷ್ಯಾದ ಗುಪ್ತಚರವು ವ್ಯಾಗ್ನರ್ ಸಶಸ್ತ್ರ ದಂಗೆಗೆ ಕರೆ ನೀಡಿದೆ ಎಂದು ಹೇಳಿದೆ. ಈ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜಧಾನಿ ಮಾಸ್ಕೋದ ಸುತ್ತಮುತ್ತ ಮತ್ತು ಆಗ್ನೇಯ ಉಕ್ರೇನ್ ಬಳಿಯ ರೋಸ್ಟೊವ್ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 2022ರ ಫೆಬ್ರವರಿಯಲ್ಲಿ ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಸಾರಿದ ದಿನದಿಂದಲೂ ವ್ಯಾಗ್ನರ್​ ಪಡೆಯ ಮುಖ್ಯಸ್ಥ ಪ್ರಿಗೋಜಿನ್ ಮತ್ತು ರಷ್ಯಾದ ರಕ್ಷಣಾ ಸಚಿವ ಸೆರ್ಗೆಯ್ ಶೋಯಿಗು ನಡುವೆ ಅಧಿಕಾರದ ಕಿತ್ತಾಟ ಏರ್ಪಟ್ಟಿತ್ತು ಎಂದೂ ವರದಿಯಾಗಿದೆ.

ಇದನ್ನೂ ಓದಿ:Russia Wagner group: ರಷ್ಯಾ ಸೇನೆ ವಿರುದ್ಧ ತಿರುಗಿಬಿದ್ದ ವ್ಯಾಗ್ನರ್​ ಪಡೆ..ಪುಟಿನ್​ ಆಪ್ತ ಯೆವ್ನಿನ್ ಪ್ರಿಗೊಜಿನ್ ಬೆದರಿಕೆಯೇನು?

ABOUT THE AUTHOR

...view details