ಕರ್ನಾಟಕ

karnataka

ಉತ್ತರ ಕೊರಿಯಾದ ಪತ್ತೆದಾರಿ ಉಪಗ್ರಹ ಉಡಾವಣೆ ಮತ್ತೆ ವಿಫಲ.. ಅಕ್ಟೋಬರ್​​ನಲ್ಲಿ ಮತ್ತೆ ಪರೀಕ್ಷೆಯ ಪ್ರತಿಜ್ಞೆ!

By ETV Bharat Karnataka Team

Published : Aug 24, 2023, 7:13 AM IST

Updated : Aug 24, 2023, 7:55 AM IST

ಪತ್ತೇದಾರಿ ಉಪಗ್ರಹ ಉಡಾವಣೆ ಮಾಡುವ ಉತ್ತರ ಕೊರಿಯಾದ ಎರಡನೇ ಪ್ರಯತ್ನ ಮತ್ತೊಮ್ಮೆ ವಿಫಲವಾಗಿದೆ. ಆದರೆ, ಅಕ್ಟೋಬರ್‌ನಲ್ಲಿ ಮತ್ತೊಂದು ಪ್ರಯತ್ನ ಮಾಡಲು ಅದು ಪ್ರತಿಜ್ಞೆ ಮಾಡಿದೆ. ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಅವರು ಅಪೇಕ್ಷಿಸಿದ ಪ್ರಮುಖ ಮಿಲಿಟರಿ ಶಕ್ತಿ ಪಡೆಯುವ ಉದ್ದೇಶದಿಮದ ಈ ವಿಫಲತೆ ಸಹಿಸಿಕೊಳ್ಳುವ ಇಚ್ಛೆ ಪ್ರದರ್ಶಿಸಿದರು ಎಂದು ತಿಳಿದು ಬಂದಿದೆ. ವಿಫಲವಾದ ಉತ್ತರ ಕೊರಿಯಾದ ರಾಕೆಟ್, ತನ್ನ ದೇಶದ ದಕ್ಷಿಣದ ಓಕಿನಾವಾ ದ್ವೀಪಗಳ ಮೇಲೆ ಪೆಸಿಫಿಕ್ ಮಹಾಸಾಗರದ ಹಾರಿಸಿದ್ದರಿಂದ ಸುರಕ್ಷಿತ ಸ್ಥಳದಲ್ಲಿ ಪತನಗೊಂಡಿದೆ.

North Korea fires suspected ballistic missile on first day of 'satellite' launch window
ಉತ್ತರ ಕೊರಿಯಾದಿಂದ ಬ್ಯಾಲಿಸ್ಟಿಕ್​ ಕ್ಷಿಪಣಿ ಉಡಾವಣೆ

ಸಿಯೋಲ್, ದಕ್ಷಿಣ ಕೊರಿಯಾ:ಪತ್ತೇದಾರಿ ಉಪಗ್ರಹ ಉಡಾವಣೆ ಮಾಡುವ ಎರಡನೇ ಪ್ರಯತ್ನವು ಕೂಡಾ ಮತ್ತೊಮ್ಮೆ ವಿಫಲವಾಗಿದೆ ಎಂದು ಉತ್ತರ ಕೊರಿಯಾ ಗುರುವಾರ ಹೇಳಿಕೊಂಡಿದೆ. ಆದರೆ, ಅಕ್ಟೋಬರ್‌ನಲ್ಲಿ ಈ ಸಂಬಂಧ ಮತ್ತೊಂದು ಪ್ರಯತ್ನವನ್ನು ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ಅಪೇಕ್ಷಿತ ಮಿಲಿಟರಿ ಆಸ್ತಿಯನ್ನು ಪಡೆಯಲು ವಿಫಲತೆ ಸಹಿಸಿಕೊಳ್ಳುವ ಇಚ್ಛೆಯನ್ನು ಪ್ರದರ್ಶಿಸುವ ಮೂಲಕ ಗಮನ ಸೆಳೆದಿದ್ದಾರೆ.

ವಿಫಲವಾದ ಉಡಾವಣೆ ಹಿನ್ನೆಲೆ ನೆರೆಯ ಜಪಾನ್‌ಗೆ ಸಂಕ್ಷಿಪ್ತ "ಜೆ-ಎಚ್ಚರಿಕೆ" ನೀಡಲಾಗಿದೆ. ಉತ್ತರ ಕೊರಿಯಾದ ರಾಕೆಟ್ ತನ್ನ ದಕ್ಷಿಣದ ಓಕಿನಾವಾ ದ್ವೀಪಗಳ ಮೇಲೆ ಪೆಸಿಫಿಕ್ ಮಹಾಸಾಗರದ ಮೇಲೆ ಹಾರಿತು. ಈ ಹಿನ್ನೆಲೆಯಲ್ಲಿ ಆ ಪ್ರದೇಶದಲ್ಲಿದ್ದ ಕೆಲವು ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಆದೇಶಿಸಲಾಗಿತ್ತು.

ವಿಚಕ್ಷಣ ಉಪಗ್ರಹ ಮಲ್ಲಿಗ್ಯಾಂಗ್-1 ಅನ್ನು ಕಕ್ಷೆಗೆ ಸೇರಿಸಲು ಹೊಸ ಮಾದರಿಯ ವಾಹಕ ರಾಕೆಟ್ ಚೋಲ್ಲಿಮಾ-1 ಅನ್ನು ಬಳಕೆ ಮಾಡಿಕೊಳ್ಳಲಾಗಿತ್ತು ಎಂದು ಉತ್ತರ ಕೊರಿಯಾದ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ರಾಕೆಟ್‌ನ ಮೊದಲ ಮತ್ತು ಎರಡನೇ ಹಂತಗಳ ಹಾರಾಟಗಳು ಸಾಮಾನ್ಯವಾಗಿದ್ದವು ಎಂದು ಅದು ಹೇಳಿದೆ. ಆದರೆ ಮೂರನೇ ಹಂತದ ಹಾರಾಟದ ಸಮಯದಲ್ಲಿ ತುರ್ತು ಬ್ಲಾಸ್ಟಿಂಗ್ ವ್ಯವಸ್ಥೆಯಲ್ಲಿನ ದೋಷದಿಂದಾಗಿ ಉಡಾವಣೆ ಅಂತಿಮವಾಗಿ ವಿಫಲವಾಗಿದೆ ಎಂದು ಅಧಿಕೃತ ಕೊರಿಯನ್ ಕೇಂದ್ರ ಸುದ್ದಿ ಸಂಸ್ಥೆ ತಿಳಿಸಿದೆ.

ಗುರುವಾರದ ಉಡಾವಣೆಯಲ್ಲಿ ಏನೇನು ತಪ್ಪಾಗಿದೆ ಎಂಬುದನ್ನು ಅಧ್ಯಯನ ಮಾಡಿದ ನಂತರ ಅಕ್ಟೋಬರ್‌ನಲ್ಲಿ ಮೂರನೇ ಉಡಾವಣಾ ಪ್ರಯತ್ನವನ್ನು ಮಾಡುವುದಾಗಿ ರಾಷ್ಟ್ರೀಯ ಏರೋಸ್ಪೇಸ್ ಡೆವಲಪ್‌ಮೆಂಟ್ ಅಡ್ಮಿನಿಸ್ಟ್ರೇಷನ್ ಘೋಷಿಸಿದೆ. "ಸಂಬಂಧಿತ ಅಪಘಾತದ ಕಾರಣ ಕ್ಯಾಸ್ಕೇಡ್ ಇಂಜಿನ್​ ಮತ್ತು ಸಿಸ್ಟಮ್​​​​​ನ ವಿಶ್ವಾಸಾರ್ಹತೆಯ ವಿಷಯದಲ್ಲಿ ದೊಡ್ಡ ಸಮಸ್ಯೆ ಏನು ಇಲ್ಲ " ಎಂದು ಅಲ್ಲಿನ ಬಾಹ್ಯಾಕಾಶ ಸಂಸ್ಥೆ ಹೇಳಿಕೊಂಡಿದೆ.

ಎರಡನೇ ವೈಫಲ್ಯದ ನಂತರ ಕಿಮ್ ತೀವ್ರ ಅಸಮಾಧಾನಗೊಂಡಿದ್ದರೂ, ದೇಶದ ಮುಂದಿನ ಭವಿಷ್ಯದ ಹಿನ್ನೆಲೆಯಲ್ಲಿ ಅವೆಲ್ಲವನ್ನು ಮರೆತು, ಅಲ್ಲಿನ ತಂತ್ರಜ್ಞರಿಗೆ ಕ್ಷಮೆ ನೀಡಿದ್ದು, ಮುಂದಿನ ಯಶಸ್ವಿನತ್ತ ದೃಷ್ಟಿ ನೆಟ್ಟಿದ್ದಾರೆ ಎಂದು ವರ್ಜೀನಿಯಾ ಮೂಲದ ಕನ್ಸಲ್ಟೆನ್ಸಿ LMI ಯ ತಜ್ಞ ಮತ್ತು ಮಾಜಿ CIA ವಿಶ್ಲೇಷಕ ಸೂ ಕಿಮ್ ಹೇಳಿದ್ದಾರೆ. ಈ ಹಿಂದಿನ ಸಂದರ್ಭಗಳಲ್ಲಿ ಉತ್ತರಕೊರಿಯಾ ತನ್ನ ಉಡ್ಡಯನಗಳಲ್ಲಿ ವಿಫಲವಾದಾಗ ಅವರು ಎಂದಿಗೂ ಬಿಟ್ಟುಕೊಟ್ಟಿಲ್ಲ ಎಂಬುದನ್ನು ಅವರು ಇದೇ ವೇಳೆ ನೆನಪಿಸಿದ್ದಾರೆ.

ಗುರುವಾರ ಬೆಳಗ್ಗೆ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಹೇಳಿಕೆಯೊಂದರಲ್ಲಿ, ಉತ್ತರ ಕೊರಿಯಾದ ವಾಯುವ್ಯ ಟೊಂಗ್‌ಚಾಂಗ್-ರಿ ಪ್ರದೇಶದಲ್ಲಿ 3:50 ಕ್ಕೆ ಲಿಫ್ಟ್‌ಆಫ್ ಆದ ನಂತರ ಕೊರಿಯನ್ ಪೆನಿನ್ಸುಲಾದ ಪಶ್ಚಿಮ ಕರಾವಳಿಯಿಂದ ಅಂತರಾಷ್ಟ್ರೀಯ ಜಲ ಗಡಿ ಮೇಲೆ ರಾಕೆಟ್ ಹಾರುತ್ತಿರುವುದನ್ನು ಪತ್ತೆಹಚ್ಚಿದೆ ಎಂದು ಹೇಳಿದ್ದಾರೆ. ಮೇ ಅಂತ್ಯದಲ್ಲಿ ಉತ್ತರ ಕೊರಿಯಾ ಬೇಹುಗಾರಿಕಾ ಉಪಗ್ರಹದ ವಿಫಲ ಉಡಾವಣೆ ಮಾಡಿತ್ತು ಎಂದು ಹೇಳಿದೆ. ಇದೇ ವೇಳೆ ರಾಕೆಟ್‌ನ ಉಡಾವಣೆಯು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಉಲ್ಲಂಘಿಸಿದೆ ಎಂದು ಅದು ಹೇಳಿದೆ. ಅದು ಬ್ಯಾಲಿಸ್ಟಿಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಉಡ್ಡಯನ ಮಾಡಲಾಗುವ ಉತ್ತರ ಕೊರಿಯಾದ ಯಾವುದೇ ಉಡಾವಣೆಗಳನ್ನು ನಿಷೇಧಿಸುತ್ತದೆ ಎಂದು ಹೇಳಿದೆ.

ಈ ನಡುವೆ ಆಗಸ್ಟ್ 24, 2023, ದಕ್ಷಿಣ ಕೊರಿಯಾದ ಸಿಯೋಲ್‌ನಲ್ಲಿರುವ ಸಿಯೋಲ್ ರೈಲು ನಿಲ್ದಾಣದಲ್ಲಿ ಬಿತ್ತರವಾದ ಕಾರ್ಯಕ್ರಮದ ವೇಳೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಫೈಲ್ ಚಿತ್ರದೊಂದಿಗೆ ಉತ್ತರ ಕೊರಿಯಾದ ರಾಕೆಟ್ ಉಡಾವಣೆಯ ವರದಿಯನ್ನು ಟಿವಿ ಪರದೆಯಲ್ಲಿ ವರದಿ ಪ್ರಸಾರವಾಗಿದೆ.

ಈ ಬಗ್ಗೆ ಮಾತನಾಡಿರುವ ಜಪಾನ್‌ನ ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೊಕಾಜು ಮಾಟ್ಸುನೊ ಅವರು ಉತ್ತರ ಕೊರಿಯಾದ ಈ ಉಪಗ್ರಹ ಉಡಾವಣೆಯನ್ನು "ಶಾಂತಿ ಮತ್ತು ಸ್ಥಿರತೆಗೆ ಬೆದರಿಕೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಪ್ರಧಾನ ಮಂತ್ರಿ ಫ್ಯೂಮಿಯೊ ಕಿಶಿಡಾ ಅವರು ಈ ಉಡ್ಡಯನದಿಂದ ಆಗಿರುವ ಅಪಾಯಗಳ ಬಗ್ಗೆ ಮಿತ್ರರಾಷ್ಟ್ರಗಳೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. . ( ANI Other agencies )

ಇದನ್ನು ಓದಿ:ಪುಟಿನ್​ ವಿರುದ್ಧ ಬಂಡಾಯವೆದ್ದಿದ್ದ 'ವ್ಯಾಗ್ನರ್​' ನಾಯಕ ಪ್ರಿಗೊಜಿನ್​ ವಿಮಾನ ಅಪಘಾತದಲ್ಲಿ ಸಾವು: ಶಂಕೆ?

Last Updated : Aug 24, 2023, 7:55 AM IST

ABOUT THE AUTHOR

...view details